ಕೋಡಿಮಠದ ಶ್ರೀ ಶ್ರೀ ಚೇತನ್ ಮರಿದೇವರ ಸಾನಿಧ್ಯ
ಮಾಡಾಳು ಇತಿಹಾಸ ಪ್ರಸಿದ್ಧ ಪುಣ್ಯಕ್ಷೇತ್ರ ಗ್ರಾಮದ ಮೂಗುತಿ ಸುಂದರಿ ಮೂಲಸ್ಥಾನ ಶ್ರೀ ಸ್ವರ್ಣ ಗೌರಮ್ಮ ದೇವಿ ಅನುಗ್ರಹ ಹಾಗೂ ಹಾರನಹಳ್ಳಿ ಸುಕ್ಷೇತ್ರ ಕೋಡಿಮಠ ಜಗದ್ಗುರು ಡಾ. ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾ ಸ್ವಾಮೀಜಿಯವರ ದಿವ್ಯ ಆಶೀರ್ವಾದ ಫಲದಿಂದ ಸೋಮವಾರ ಶ್ರೀ ಸ್ವರ್ಣ ದೇವಿಯ ನೂತನ ಶಿಲಾ ದೇವಾಲಯ ಧಾರ್ಮಿಕ ವಿಧಿ ವಿಧಾನಗಳಿಂದ ಶ್ರದ್ಧಾ ಭಕ್ತಿಯಿಂದ ನೆರವೇರಿತು ನೂತನ ದೇವಾಲಯ ಲೋಕಾರ್ಪಣೆ ಅಂಗವಾಗಿ ಭಾನುವಾರ ಸಂಜೆಯಿಂದಲೇ ಕೋಡಿಮಠದ ಉತ್ತರಾಧಿಕಾರಿ ಶ್ರೀ ಚೇತನ್ ಮರಿದೇವರ ಸಾನಿಧ್ಯ ಮತ್ತು ಗ್ರಾಮದ ಆರಾಧ್ಯ ದೈವ ಶ್ರೀ ಗುರು ಚನ್ನಬಸವೇಶ್ವರ ಸ್ವಾಮಿ ಸಮ್ಮುಖದಲ್ಲಿ ಆರಂಭಗೊಂಡಿತು ಮೂಲ ಸನ್ನಿದಿಯಲ್ಲಿ ಮುತ್ತೈದೆಯರು ಗಂಗಾ ಪೂಜೆ ನೆರವೇರಿಸಿ ಕುಂಭಗಳನ್ನು ತಲೆಯ ಮೇಲೆ ಹೊತ್ತು ಮಂಗಲ ಕರಡೇ ವಾದ್ಯದೊಂದಿಗೆ ಉತ್ಸವದೊಡನೆ ಕೆರೆ ಏರಿ ಮೇಲೆ ಇರುವ ಚನ್ನಬಸವಣ್ಣ ದೇವಸ್ಥಾನಕ್ಕೆ ತಲುಪಿತು ನಂತರ ಅಲ್ಲಿಗೆ ಆಗಮಿಸಿದ 12 ಗ್ರಾಮಗಳ ಗ್ರಾಮ ದೇವತೆ ಕರಿಯಮ್ಮ ದೇವಿ ಚೌಡೇಶ್ವರಿ ಬೊಮ್ಮಸಂದ್ರ ಚನ್ನಬಸವಣ್ಣ ಕಡಲಮಗೆ ಬಸವಣ್ಣಹೊಸಳ್ಳಿ ಬಸವಣ್ಣ ರಂಗನಾಥಸ್ವಾಮಿ ಸೇರಿದಂತೆ18 ಗ್ರಾಮಗಳ ದೇವರುಗಳು ಉತ್ಸವದಲ್ಲಿ ಪಾಲ್ಗೊಂಡವು ನಂತರ ಜೇನುಕಲ್ ಸಿದ್ದೇಶ್ವರ ಸ್ವಾಮಿ ನೇತೃತ್ವದಲ್ಲಿ ದೇವಾಲಯ ಮುಂಭಾಗ ನಿರ್ಮಿಸಿದ್ದ ಹವನ ಹೋಮ ಯಜ್ಞ ಕುಂಡಕ್ಕೆ ಅಗ್ನಿಸ್ಪರ್ಶಣೆ ಮಾಡಿ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು ಇಂದು ಮುಂಜಾನೆಯಿಂದಲೇ ಯಜ್ಞ ಯಾಗಾದಿಗಳು ರಾಜಶೇಖರ ಶಾಸ್ತ್ರಿಗಳ ಪುರೋಹಿತರ ಆರು ಮಂದಿ ತಂಡದೊಂದಿಗೆ ಮಂತ್ರಘೋಷಗಳು ಮೊಳಗಿದವು ಮಧ್ಯಾಹ್ನ 12 ಗಂಟೆಗೆ ಕೆಬಿದರೆ ದೊಡ್ಡ ಮಠದ ಪ್ರಭು ಕುಮಾರ ಶಿವಾಚಾರ್ಯ ಸ್ವಾಮೀಜಿ ವಿಮಾನ ಗೋಪುರದ ಮೇಲೆ ಕಳಸವನ್ನು ಪ್ರತಿಷ್ಠಾಪಿಸಿದರು ಈ ಸಂದರ್ಭದಲ್ಲಿ ಶ್ರೀ ಚೇತನ್ ಮರಿ ದೇವರು ನಿರಂಜನ ಪೀಠದ ಶ್ರೀ ರುದ್ರಮುನಿ ಸ್ವಾಮೀಜಿ ಸೇವಾ ಸಮಿತಿ ಅಧ್ಯಕ್ಷರು ಸದಸ್ಯರು ಕೋಡಿಮಠದ ಏಜೆಂಟ್ ಮಹದೇವಪ್ಪ ಸೇರಿದಂತೆ ಸಹಸ್ರರ್ ಮಂದಿ ಭಕ್ತರು ಈ ಕ್ಷಣಕ್ಕೆ ಸಾಕ್ಷಿಯಾದರು ಎರಡು ದಿನಗಳ ಕಾಲ ನಡೆದ ದೇವಾಲಯ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಸಹಸ್ರಾರ್ ಮುಂದಿ ಭಕ್ತರು ಭಾಗಿಯಾಗಿ ಕಣ್ತುಂಬಿ ಕೊಂಡರು
ಅರಸೀಕೆರೆ ತಾಲೂಕು ಮಾಡಾಳು ಗ್ರಾಮದ ಮೂಲಸ್ಥಾನಶ್ರೀ ಸ್ವರ್ಣ ಗೌರಮ್ಮ ದೇವಿ ನೂತನ ಶಿಲಾ ದೇವಾಲಯದ ಹೋಮದ ಪೂರ್ಣಾವತಿಯಲ್ಲಿ ಬಿದರೆ ಕೋಡಿಮಠ ಮಾಡಲ್ ನಿರಂಜನ ಪೀಠದ ಸ್ವಾಮೀಜಿಯವರು ಪಾಲ್ಗೊಂಡಿದ್ದರು
