*ಅರಸೀಕೆರೆಯಲ್ಲಿ ಮುಸ್ಲಿಂ ಬಾಂಧವರಿಂದ ಬಕ್ರಿದ್ ಹಬ್ಬದ ಆಚರಣೆ*
ಅರಸೀಕೆರೆ : ದೇಶಾದ್ಯಂತ ಬಕ್ರೀದ್ ಹಬ್ಬ ಆಚರಣೆ ಮಾಡುತ್ತಿರುವ ಮುಸ್ಲಿಂ ಬಾಂಧವರು ಅರಸೀಕೆರೆ ನಗರದಲ್ಲಿ ಸುನ್ನಿ ಜಾಮಿಯಾ ಮಸೀದಿಯಿಂದ ಮೆರವಣಿಗೆ ಮೂಲಕ ನಡೆದುಕೊಂಡು ಈದ್ಗಾ ಮೈದಾನದಲ್ಲಿ ನಮಾಜ್ ಮಾಡಿದರು,
ನಂತರ ಗುರುಗಳು ಪ್ರಾರ್ಥನೆ ಮಾಡಿ ಬಕ್ರೀದ್ ಹಬ್ಬದ ಪ್ರವಚನಗಳನ್ನು ಬೋಧಿಸಿದರು ಮಾನವ ಇತಿಹಾಸದಲ್ಲಿ ಕೆಲವು ಹಬ್ಬಗಳು ಕೇವಲ ಆಚರಣೆಯ ದಿನಗಳಾಗಿರುವುದಿಲ್ಲ ಅವು ಜೀವನದ ಮೌಲ್ಯಗಳನ್ನು ನೆನಪಿಸುವ ಆತ್ಮೀಯ ಸಂದೇಶಗಳಾಗಿರುತ್ತವೆ ಅಂತಹ ಮಹತ್ವಪೂರ್ಣ ಹಬ್ಬಗಳಲ್ಲಿ ಇಸ್ಲಾಮಿನ ಪವಿತ್ರ ಹಬ್ಬವಾದ ಈದುಲ್ ಅಝ್ಹಾ ಅಥವಾ ಬಕ್ರೀದ್ ಎಂದು
ಅಝ್ಹಾ ಎಂದರೆ ತ್ಯಾಗ ಮನುಷ್ಯ ತನ್ನ ಆಸೆ ಅಹಂಕಾರ ಮತ್ತು ಸ್ವಾರ್ಥವನ್ನು ಅಲ್ಲಾಹನ ಆದೇಶಕ್ಕಾಗಿ ತ್ಯಜಿಸುವ ಮಹೊನ್ನತ ಮನೋಭಾವವೇ ಈ ಹಬ್ಬದ ಆತ್ಮವಾಗಿದೆ.
ಏಕದೇವ ವಿಶ್ವಾಸದ ಸಮಾಜ ಸ್ಥಾಪನೆಗಾಗಿ ಪ್ರವಾದಿ ಇಬ್ರಾಹಿಂ ರವರು ಇಡೀ ಜೀವನವನ್ನೇ ಮುಡುಪಾಗಿರಿಸಿ, ಹಲವಾರು ಸವಾಲು ಸ್ವಪರೀಕ್ಷೆಗಳನ್ನು ಎದುರಿಸಿ, ತ್ಯಾಗ, ಬಲಿದಾನ ಮಾಡಿದ್ದಾರೆ. ಅವರ ಜೀವನ ಎಲ್ಲರಿಗೂ ಮಾದರಿಯಾಗಲಿ ಎಂದು ಈ ಹಬ್ಬವನ್ನು ಆಚರಿಸಲಾಗುತ್ತದೆ ಎಂದು ಹೇಳಿದರು.
ಇಂದು ಕೆಲವರು ಕುರ್ಬಾನಿಯನ್ನು ಕೇವಲ ಒಂದು ಆಚರಣೆಯಾಗಿ ಮಾತ್ರ ನೋಡುತ್ತಾರೆ ಆದರೆ ಇಸ್ಲಾಂ ಕುರ್ಬಾನಿಯ ಮೂಲಕ ಕಲಿಸುವ ಸಂದೇಶ ಬಹಳ ಆಳವಾಗಿದೆ ಕುರ್ಬಾನಿ ಎಂದರೆ, ನಮ್ಮೊಳಗಿನ ಅಹಂಕಾರವನ್ನು ಕೊಲ್ಲುವುದು, ಸ್ವಾರ್ಥವನ್ನು ತ್ಯಜಿಸುವುದು, ದ್ವೇಷವನ್ನು ದೂರ ಮಾಡುವುದು, ಅಲ್ಲಾಹನ ಆದೇಶಕ್ಕೆ ಶರಣಾಗುವುದು, ಬಡವರ ಹಸಿವು ಮತ್ತು ನೋವನ್ನು ಅರ್ಥ ಮಾಡಿಕೊಳ್ಳುವುದು.
ಕುರ್ಬಾನಿಯ ಮಾಂಸವನ್ನು ಬಡವರಿಗೆ ಬಂಧುಗಳಿಗೆ ಮತ್ತು ನೆರೆಹೊರೆಯವರಿಗೆ ಹಂಚುವ ಮೂಲಕ ಸಮಾಜದಲ್ಲಿ ಪ್ರೀತಿ ಮತ್ತು ಸಹೋದರತ್ವವನ್ನು ಬೆಳೆಸುವುದು ಇಸ್ಲಾಮಿನ ಉದ್ದೇಶವಾಗಿದೆ.
ಈ ಹಬ್ಬವು ಬಡವರ ಮನೆಗೂ ಸಂತೋಷ ತಲುಪಬೇಕು ಎಂದು ಕಲಿಸುತ್ತದೆ.
ಹಜ್ ಯಾತ್ರೆಯಲ್ಲಿ ಲಕ್ಷಾಂತರ ಜನರು ಒಂದೇ ರೀತಿಯ ಇಹ್ರಾಮ್(ಬಟ್ಟೆ) ಧರಿಸಿ ಒಂದೇ ಧ್ವನಿಯಲ್ಲಿ ಲಬೈಕ್ ಅಲ್ಲಾಹುಮ ಲಬೈಕ್ ಎಂದು ಘೋಷಿಸುವ ದೃಶ್ಯ ಮಾನವ ಸಮಾನತೆಯ ಅಪೂರ್ವ ಉದಾಹರಣೆಯಾಗಿದೆ.
ಈ ಹಬ್ಬದ ಅತ್ಯಂತ ಸುಂದರ ಅಂಶವೆಂದರೆ ಸಮಾನತೆಯ ಸಂದೇಶ ಈದ್ ನಮಾಜಿನಲ್ಲಿ ಶ್ರೀಮಂತ, ಬಡವ, ಅಧಿಕಾರಿ, ಕಾರ್ಮಿಕ ಎಂಬ ಭೇದ ಭಾವವಿಲ್ಲದೆ ಎಲ್ಲರೂ ಒಂದೇ ಸಾಲಿನಲ್ಲಿ ನಿಂತು ಅಲ್ಲಾಹನ ಮುಂದೆ ತಲೆಬಾಗುತ್ತಾರೆ. ಇದು ಇಸ್ಲಾಂ ಸಾರುವ ಮಹಾನ್ ಸಂದೇಶ ಎಂದು ಪ್ರಯೋಜನ ನೀಡಿದರು
ಈ ಪವಿತ್ರ ಹಬ್ಬವು ನಮ್ಮ ಹೃದಯಗಳಲ್ಲಿ ಭಕ್ತಿ, ಪ್ರೀತಿ ಸಹನುಭೂತಿ ಮತ್ತು ಮಾನವೀಯತೆಯ ಬೆಳಕನ್ನು ಹೆಚ್ಚಿಸಲಿ ನಮ್ಮ ಮನೆಗಳಲ್ಲಿ ಮಾತ್ರವಲ್ಲ ಸಮಾಜದ ಪ್ರತಿಯೊಂದು ಹೃದಯದಲ್ಲು ಈದ್ ಸಂತೋಷ ಅರಳಲಿ ಹಾಗೂ ಸರ್ವಶಕ್ತನಾದ ಅಲ್ಲಾಹ ನಮ್ಮ ದೇಶದಲ್ಲಿ ಹಾಗೂ ಇಡೀ ಜಗತ್ತಿನಲ್ಲಿ ಶಾಂತಿ ಸೌಹಾರ್ದತೆ ಸಹಬಾಳ್ವೆಯನ್ನು ನೆಲೆ ನಿಲ್ಲಿಸಲಿ…ಎಲ್ಲಾ ಜಾತಿ ಧರ್ಮದವರು ಸಹೋದರತೆಯಿಂದ ಬದುಕಲಿ ಎಂದು ಹೇಳಿ ದುವಾ ಮಾಡಿದರು ನಂತರ ಮುಸ್ಲಿಂ ಬಾಂಧವರು ಪರಸ್ಪರ ಸೇರಿ ಹಬ್ಬದ ಶುಭಾಶಯಗಳು ಕೋರಿದರು.
ವರದಿ ಎಂ ಡಿ ನಾಸೀರ್ ಅರಸೀಕೆರೆ






