ತುಮಕೂರು ಜಿಲ್ಲೆ ಮಧುಗಿರಿ ತಾಲೂಕು ಮರುವೆಕೆರೆ ಪಂಚಾಯಿತಿಗೆ ಸೇರುವ ಬಂದ್ರೆ ಹಳ್ಳಿಯಲ್ಲಿ ಶ್ರೀ ಸಾಯಿ ಸೇವಾ ವೃದ್ಧಾಶ್ರಮ ಉದ್ಘಾಟನಾ ಸಮಾರಂಭ
ತುಮಕೂರು
ತುಮಕೂರು ಜಿಲ್ಲೆ ಮಧುಗಿರಿ ತಾಲೂಕು ಮರುವೆಕೆರೆ ಪಂಚಾಯಿತಿಗೆ ಸೇರುವ ಬಂದ್ರೆ ಹಳ್ಳಿಯಲ್ಲಿ ಶ್ರೀ ರಂಗನಾಥ ಸೇವಾ ಟ್ರಸ್ಟ್ ವತಿಯಿಂದ ಸೇವಾ ವೃದ್ಧಾಶ್ರಮ ಉದ್ಘಾಟನಾ ಸಮಾರಂಭ ಇಂದು ನಡೆಯಿತು
ಈ ಸಮಾರಂಭದಲ್ಲಿ ಭಕ್ತ ಮುನೇಶ್ವರ ಕ್ಷೇತ್ರದ ಮಾದಿಗೊಂಡನಹಳ್ಳಿ ಮಾಗಡಿ ತಾಲೂಕಿನ ಶ್ರೀ ಶ್ರೀ ರಂಗನಾಥಾನಂದ ಸ್ವಾಮೀಜಿ. ಅವರು ಹಾಗೂ ಕೊರಟಗೆರೆ ತಾಲೂಕಿನ ಸಿದ್ದರಬೆಟ್ಟದ ಪೀಠಾಧ್ಯಕ್ಷರಾದ ಶ್ರೀ ಶ್ರೀ ವೀರಭದ್ರ ಶಿವಾಚಾರ್ಯ ಶ್ರೀಗಳು ಉಪಸ್ಥಿತರಿದ್ದರು ಮಧುಗಿರಿ ಕ್ಷೇತ್ರದ ಶಾಸಕರು ಹಾಗೂ ಮಾಜಿ ಸಚಿವರಾದ ಕೆ ಎನ್ ರಾಜಣ್ಣ. ಹಾಗೂ ಶ್ರೀರಂಗನಾಥ ಸೇವಾ ಟ್ರಸ್ಟ್ ನ ಗೌರವಾಧ್ಯಕ್ಷರು ಹಾಗೂ ಕಾಂಗ್ರೆಸ್ ಮುಖಂಡರಾದ ಬಿವಿ ನಾಗರಾಜು. ಬೆಂಗಳೂರಿನ ಜ್ಯೋತಿಷಿಗಳಾದ ಟಿಎಸ್ ಪ್ರಕಾಶ್. ನಿಮ್ಮ ಜಾಗಕ್ಕೆ ಮೀನುಗೊಂದಿ ರಂಗನಾಥ ಸ್ವಾಮಿ ದಾಸೋಹ ಸೇವಾ ಸಮಿತಿ ಅಧ್ಯಕ್ಷರಾದ ಎಂ ಆರ್ ನಾರಾಯಣ ಶೆಟ್ಟರು. ನಿವೃತ ಸಹಾಯಕ ಕಾರ್ಯ ಪಾಲಕ ಅಭಿಯಂತರರು ಹಾಗೂ. ಸಂಸ್ಥೆಯ ಕಾರ್ಯದರ್ಶಿಗಳು ಆಗಿರುವ ಬಸವರಾಜು ಉಪಸ್ಥಿತರಿದ್ದರು
ನಿವೃತ್ತ ಕಾರ್ಯಪಾಲಕ ಅಭಿಯಂತರರು ಹಾಗೂ ಕಾರ್ಯದರ್ಶಿಗಳಾದ ಬಸವರಾಜ್ ರವರು ಮಾತನಾಡಿ ನಮ್ಮ ಸಂಸ್ಥೆಯ ವತಿಯಿಂದ ದಾಸೋಹ ಪ್ರಾರಂಭವಾಗಿದ್ದು ನಾಗರಿಕರು ಅಭಿಮಾನಿಗಳು ಹಾಗೂ ವಿಶಾಲ ಹೃದಯವುಳ್ಳ ಅಂತ ಸ್ನೇಹಿತರು ಹೆಚ್ಚಿನ ರೀತಿಯಲ್ಲಿ ಸಹಕಾರ ನೀಡುತ್ತಿದ್ದು ಸರ್ಕಾರದಿಂದಾಗಲಿ ಅಥವಾ ಯಾವುದೇ ಸಂಸ್ಥೆ ಮತ್ತು ಇನ್ನಿತರ ವ್ಯಕ್ತಿಗಳಿಂದ ಪಲಾಪೇಕ್ಷೆ ಇಲ್ಲದೆ ದಾಸೋಹ ವ್ಯವಸ್ಥೆ ನಡೆಯುತ್ತಿದ್ದು ಮುಂದಿನ ದಿನಗಳಲ್ಲಿ ವೃದ್ಧಾಶ್ರಮಕ್ಕೆ ವಯಸ್ಸಾದಂತ ಹಿರಿಯ ಜೀವಗಳಿಗೆ ಆಸರೆ ನಿಲ್ಲುವಂತಹ ಕೆಲಸವನ್ನು ಮಾಡುತ್ತಿರುವುದಾಗಿ ಇದಕ್ಕೆ ನಮ್ಮ ಸಂಸ್ಥೆಯ ಎಲ್ಲಾ ಸದಸ್ಯರು ಹರ ಗುರು ಚರಮೂರ್ತಿಗಳು ಆಶೀರ್ವಾದ ಸಲಹೆ ಸಹಕಾರ ದಿಂದ ಈ ಕಾರ್ಯಕ್ರಮ ನಡೆಯುತ್ತಿದೆ ಎಂದು ಬಸವರಾಜ್ ತಿಳಿಸಿದರು ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಅಮೂಲ್ಯ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರು ಹಾಗೂ ಕರ್ನಾಟಕ ರಾಜ್ಯ ಅರಣ್ಯ ಪರಿಸರ ಸಂರಕ್ಷಣಾ ವೇದಿಕೆ ಅಧ್ಯಕ್ಷರು ಕೆ ಎನ್ ಮಂಜುನಾಥ್ ಉಪಸ್ಥಿತರಿದ್ದರು

