ಮಾಡಾಳು ರಾಜ್ಯದಲ್ಲಿಯೇ ಇತಿಹಾಸ ಪ್ರಸಿದ್ದಿ ಹೊಂದಿರುವ ಪುಣ್ಯಕ್ಷೇತ್ರ ಮೂಲ ಸ್ವರ್ಣ ಗೌರಿ ಗೌರಮ್ಮ ದೇವಿ ದೇವಾಲಯದ ಆವರಣದಲ್ಲ ಕೋಡಿ ಮಠ ಮಹಾ ಸಂಸ್ಥಾನದ ವತಿಯಿಂದನೂತನವಾಗಿ ನಿರ್ಮಿಸಿರುವ ಶಿಲಾ ದೇವಾಲಯದ ಪ್ರಾರಂಭೋತ್ಸವ ಹಾಗೂ ಕಳಸಾ ರೋಹಣ ಆ 16 ಮತ್ತು 17ರಂದು ಹಾರನಹಳ್ಳಿ ಕೋಡಿಮಠದ ಜಗದ್ಗುರುಗಳಾದ ಶ್ರೀ ಶ್ರೀ ಡಾ! ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಯವರ ಸಾನಿಧ್ಯದಲ್ಲಿ ನೂರಾರು ಭಕ್ತರೊಂದಿಗೆ .ಶ್ರದ್ಧಾ ಕ್ತಿಯೊಂದಿಗೆ
ನೆರವೇರಲಿದೆ ಎಂದು
ಸ್ವರ್ಣ
ಗೌರಮ್ಮ ದೇವಿಸೇವಾ ಸಮಿತಿ ಅಧ್ಯಕ್ಷ ಎಂಎಸ್ ನಟರಾಜ ಶನಿವಾರ ತಿಳಿಸಿದರು ದೇವಾಲಯದ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹಾರನಹಳ್ಳಿ ಸುಕ್ಷೇತ್ರ ಕೋಡಿಮಠದ ಜಗದ್ಗುರು ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಯವರ ಅಪ್ಪಣೆ ಮೇರೆಗೆ ಹಾಗೂ ಶ್ರೀಗಳ ಸಾನಿಧ್ಯದಲ್ಲಿ ಎರಡು ದಿನಗಳ ಕಾಲ ಧಾರ್ಮಿಕ ವಿಧಿ ವಿಧಾನಗಳಿಂದ ನಡೆಯಲಿದೆ ಎಂದರು ಆ 16ರಂದು ಈ ಕಾರ್ಯಕ್ರಮಕ್ಕೆ ಮಾಡಾಳು ಗ್ರಾಮದ ಸುತ್ತಮುತ್ತಲ ಇಪ್ಪತ್ತಕ್ಕೂ ಹೆಚ್ಚು ಗ್ರಾಮಗಳ ದೇವರುಗಳ ಆಗಮಿಸಲಿದೆ ಅಂದು ಸಂಜೆ ನಾಲ್ಕು ಗಂಟೆಗೆ ಗ್ರಾಮದ ಮೂಲ ಸನ್ನಿಧಿಯಲ್ಲಿಮುತ್ತೈದೆಯರು ಗಂಗಾ ಪೂಜೆ ಸಲ್ಲಿಸಿ ನಂತರ ಗ್ರಾಮದ ಆರಾಧ್ಯ ದೈವ ಶ್ರೀ ಗುರು ಚನ್ನಬಸವೇಶ್ವರ ಸ್ವಾಮಿ ಸಮ್ಮುಖದಲ್ಲಿ ಕೆರೆ ಏರಿ ಮೇಲೆ ಇರುವ ದೇವಾಲಯಕ್ಕೆ ಕುಂಭಗಳೊಂದಿಗೆ ತೆರಳುವರು ಎಂದು ಹೇಳಿದರು ನಂತರ ಅಲ್ಲಿಂದ ಮಂಗಲ ಕರಡೇ ವು ವಾದ್ಯದೊಂದಿಗೆ ನೂರಾರು ಭಕ್ತರೊಂದಿಗೆ ದೇವರುಗಳ ಉತ್ಸವದೊಂದಿಗೆ ಭಕ್ತರೊಡಗೋಡಿ ಮೂಲಸ್ಥಾನ ದೇವಾಲಕ್ಕೆದಯಮಾಡಿಸಲಿವೆ ಎಂದು ಹೇಳಿದರು ದೇವಾಲಯ ಮುಂಭಾಗ ಸಿದ್ಧಗೊಳಿಸಿರುವಪುಷ್ಪಾಲಕೃತ ವೇದಿಕೆಯಲ್ಲಿಎಲ್ಲಾ ದೇವರುಗಳನ್ನು ಕೂರಿಸಲಾಗುವುದು ಬಳಿಕ ಬಂದ ಭಕ್ತಾದಿಗಳಿಗೆ ದಾಸೋಹ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದರು ಆ 17ರಂದು ದೇವಾಲಯ ಮುಂಭಾಗ ಪುರೋಹಿತರ ತಂಡವು ಹವನ ಹೋಮ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿದೆ ಎಂದರು ಬೆಳಗ್ಗೆ 10 ಗಂಟೆಗೆ ಕೆ ಬಿದರೆ ದೊಡ್ಡ ಮಟ್ಟದ ಪ್ರಭುಕುಮಾರ ಶಿವಾಚಾರ್ಯ ಸ್ವಾಮೀಜಿ. ನೂತನ ಶಿಖರಕ್ಕೆ ಕಳಸಾರೋಹಣವನ್ನು ನೂರಾರು ಭಕ್ತಜಯ ಘೋಷದೊಂದಿಗೆ ದೊಂದಿಗೆಗೋಪುರದ ಮೇಲೆ ಪ್ರತಿಷ್ಠಾಪಿಸುವರು ಎಂದು ಹೇಳಿದರು ಈ ಸಂದರ್ಭದಲ್ಲಿ ಕೋಡಿಮಠದ ಉತ್ತರಾಧಿಕಾರಿ ಚೇತನ್ ಮರಿದೇವರು ಮಾಡಾಳು ನಿರಂಜನ ಪೀಠದ ಶ್ರೀ ರುದ್ರಮುನಿ ಸ್ವಾಮೀಜಿಯವರು ಉಪಸ್ಥಿತರಿರುವರು ಎಂದರು ಕೋಡಿಮಠದ ಏಜೆಂಟ್ ಹೆಚ್ ಸಿ ಮಹದೇವಪ್ಪ ಇದ್ದರು

