ಸ್ವರ್ಣ ಗೌರಿ ದೇವತೆ ರಾಜ್ಯದಲ್ಲಿ ಹೆಸರುವಾಸಿ ಯಾವುದು ಕೋಡಿ ಶ್ರೀ ಗಳ ಭವಿಶ್ಯ

ಉಮೇಶ್ ಬಾಣಾವರ
Disclosure: This website may contain affiliate links, which means I may earn a commission if you click on the link and make a purchase. I only recommend products or services that I personally use and believe will add value to my readers. Your support is appreciated!

ಮಾಡಾಳು  ತನ್ನ ಇಚ್ಛೆಯಂತೆಆಲಯವನ್ನು ನಿರ್ಮಿಸಿಕೊಂಡಿರುವ ಮಾಡಾಳು ಗ್ರಾಮದ ಮೂಲಸ್ಥಾನ ಸ್ವರ್ಣ ಗೌರಿ ದೇವಿಯು ಮುಂದಿನ ದಿನಗಳಲ್ಲಿ ನಂಬಿ ಬರುವ ಭಕ್ತ ಸಂಕುಲವನ್ನು ಉದ್ದರಿಸುವ ಮೂಲಕ ಮಾಡಾಳು ಗ್ರಾಮ ಪವಿತ್ರ ಧಾರ್ಮಿಕ ಯಾತ್ರಾಸ್ಥಳವಾಗಿ ಹೊರ ಹೊಮ್ಮಲಿದೆ ಎಂದು ಹಾರನಹಳ್ಳಿ ಸುಕ್ಷೇತ್ರ ಕೋಡಿ ಮಠದ ಜಗದ್ಗುರು ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಯವರು ಸೋಮವಾರ ಭವಿಷ್ಯ ನುಡಿದರು      ಮೂಲಸ್ಥಾನ ಶ್ರೀ ಸ್ವರ್ಣ ಗೌರಿ ದೇವಾಲಯ ಲೋಕಾರ್ಪಣೆಗೊಂಡ ಮೇಲೆ ದೇವಾಲಯಕ್ಕೆ ಆಗಮಿಸಿದ ಶ್ರೀಗಳನ್ನು ಗ್ರಾಮಸ್ಥರು ಹಾಗೂ ಭಕ್ತವೃಂದ ಶ್ರದ್ಧಾ ಭಕ್ತಿಯಿಂದ ಮಾಡಿಕೊಂಡು ಕೋಡಿ ಶ್ರೀಗಳ ಪಾದ ಪೂಜೆಯನ್ನು ಮಾಡುವುದರ ಮೂಲಕ ತಮ್ಮ ಭಕ್ತಿಯನ್ನು ಸಮರ್ಪಿಸಿದರು ನಂತರ ಭಕ್ತರನ್ನು ಉದ್ದೇಶಿಸಿ ಆಶೀರ್ವಚನ ನೀಡಿದ ಸ್ವಾಮೀಜಿ ಶ್ರೀ ಸ್ವರ್ಣ ಗೌರಮ್ಮ ದೇವಿ ಶಕ್ತಿ ದೇವತೆಯಾಗಿದ್ದು ಹಾರೋಹಳ್ಳಿ ಕೋಡಿಮಠದ ಕರ್ತೃಗಳಾದ ನೀಲಮ್ಮಜ್ಜಯ್ಯ ಹಾಗೂ ಶಿವಲಿಂಗ ಸ್ವಾಮೀಜಿಯವರ ಕೃಪಾಶೀರ್ವಾದ ಶಕ್ತಿಯಾಗಿದ್ದು ಈ ದೇವಾಲಯದ ಮೂಲಕ ಜಗಜ್ಯೋತಿಯಾಗಿ ಬೆಳಗಲಿದೆ ಬದುಕಿನಲ್ಲಿ ನೊಂದು  ಬೆಂದು ಬರುವ ಭಕ್ತರ ಪಾಲಿಗೆ ಈ ಜ್ಯೋತಿಯು ನಂದಾದೀಪವಾಗಿ ಭಕ್ತರ ಮನೆ ಮತ್ತು ಮನವನ್ನು ಬೆಳಗಲಿದೆ ಎಂದು ಸ್ವಾಮೀಜಿ ನುಡಿದರು         ಕುಪ್ಪೂರು ಗದ್ದಿಗೆ ಮಠದ ವಾಗೀಶ ಪಂಡಿತಾರಾಧ್ಯ      ಗೌರಮ್ಮ ದೇವಿ ಸೇವಾ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಗ್ರಾಮಸ್ಥರು

Share This Article
Leave a Comment

Leave a Reply

Your email address will not be published. Required fields are marked *