ರಾಜಕಾರಣ

ಸ್ಥಗಿತಗೊಂಡ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿಗಳ ಸೃಜನ ಕಾರ್ಯಕ್ರಮ.

ಪ್ರಧಾನ ಮಂತ್ರಿಗಳ ಉದ್ಯೋಗ ಸೃಷ್ಟಿ ಕಾರ್ಯಕ್ರಮ ಪಿಎಂಇಜಿಪಿ ಎಂಬುದು ಕೇಂದ್ರ ಸರ್ಕಾರದ ಯೋಜನೆಯಾಗಿದ್ದು ಹೊಸ ವ್ಯವಹಾರಗಳನ್ನು ಸ್ಥಾಪಿಸುವ ವ್ಯಕ್ತಿಗಳಿಗೆ ವಿಶೇಷವಾಗಿ ಗ್ರಾಮೀಣ ಪ್ರದೇಶಗಳಿಗೆ ಸಹಾಯಧನವನ್ನು ಒದಗಿಸುತ್ತದೆಈ ಯೋಜನೆ…

ಸಂಗೊಳ್ಳಿ ರಾಯಣ್ಣ ಪತ್ತಿನ ಸಹಕಾರ ಸಂಘದ ಪ್ರಥಮ ಮಹಿಳಾ ಅಧ್ಯಕ್ಷರಾಗಿ ಶ್ರೀ ಮತಿ. ಶೃತಿ ಮೋಹನ್ ಕುಮಾರ್ ಅವಿರೋಧ ಆಯ್ಕೆ.

ಸಹಕಾರ ಸಂಘದ ಅಧ್ಯಕ್ಷರಾಗಿದ್ದ ಗಂಡಸಿ ಜಗದೀಶ್ ಅವರ ನಿಧನದ ಬಳಿಕ ಸಂಘದ ಚಟುವಟಿಕೆಗಳನ್ನು ಮುಂದುವರಿಸುವ ನಿಟ್ಟಿನಲ್ಲಿ ಸರ್ವ ಸದಸ್ಯರ ಒಮ್ಮತದಿಂದ ಶ್ರೀ ಮತಿ. ಶೃತಿ ಮೋಹನ್ ಅವರು…

ನಗರಸಭೆ ವತಿಯಿಂದ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಮುಖ್ಯಮಂತ್ರಿ ಉಪ ಮುಖ್ಯಮಂತ್ರಿಗಳ ಸ್ವಾಗತಕ್ಕೆ ಅದ್ದೂರಿ ಸಿದ್ದತೆ.

ಅರಸೀಕೆರೆ ನಗರದ ನಾಗರಿಕರಿಗೆ ನಗರಸಭೆ ಆಗಿರುವ ಅಭಿವೃದ್ಧಿ ಕಾರ್ಯಕ್ರಮ ಗಳಾದ ಈಜುಕೊಳ ಐಡಿಎಸ್‌ಎಮ್‌ಟಿ ಯೋಜನೆಯೆಲ್ಲಿ ತರಕಾರಿ ಮಾರುಕಟ್ಟೆ ನಗರೋತ್ತಾನ ಯೋಜನೆ ಅಡಿಯಲ್ಲಿ ವಾಣಿಜ್ಯ ಸಂಕೀರ್ಣ ಮತ್ತು ನಗರದ…

ಸಕಲೇಶಪುರ : ‘ಮನೆ ಮನೆಗೆ ಪೊಲೀಸ್’ ಅಭಿಯಾನಕ್ಕೆ ಚಾಲನೆಕರ್ನಾಟಕ ಸರ್ಕಾರ ಉಪಕ್ರಮ ‘ಮನೆ ಮನೆಗೇ ಪೊಲೀಸ್’ ಎಂಬ ವಿನೂತನ ಕಾರ್ಯಕ್ರಮ ಅಂಗವಾಗಿ, ಸಕಲೇಶಪುರ ನಗರ ಪೊಲೀಸ್ ಠಾಣೆಯ ಪಿಎಸ್ಐ ಶ್ರೀಯುತ ಮಹೇಶ್ ಅವರು ಚಾಲನೆ ನೀಡಿದರು.ಅಭಿಯಾನದ ಉದ್ದೇಶ ವ್ಯವಸ್ಥೆಯನ್ನು ಉತ್ತೇಜಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಸಮುದಾಯ ಪೊಲೀಸ್ ವ್ಯವಸ್ಥೆಯನ್ನು ಬಲಪಡಿಸುವುದು ಮತ್ತು ಅಸ್ತಿತ್ವದಲ್ಲಿರುವ ಪೊಲೀಸ್ ವ್ಯವಸ್ಥೆಯನ್ನು ಸಾರ್ವಜನಿಕ ಸ್ನೇಹಿ ಮತ್ತು ಕ್ರಿಯಾಶೀಲ ಪಡೆಯನ್ನಾಗಿ ಪರಿವರ್ತಿಸುವುದಾಗಿದೆ.’ಮನೆ ಮನೆಗೇ ಪೊಲೀಸ್’ ಪರಿಕಲ್ಪನೆ, ಪೊಲೀಸ್ ಸೇವೆ ಪ್ರತಿ ಮನೆಗೆ ತಲುಪಲಿ ಮತ್ತು ಪೊಲೀಸರ ಕಾರ್ಯಮನೆ ಮಂದಿಗೆ ಮನವರಿಕೆಯಾಗಲಿ ಎಂಬ ಉದ್ದೇಶದಿಂದ ಸರ್ಕಾರ ಹೊರಡಿಸಿರುವ 27 ಅಂಶಗಳ ಸುತ್ತೋಲೆಯನ್ನು ಮನವರಿಕೆ ಮಾಡಿಕೊಂಡು ಪ್ರತಿ ಮನೆಗಳಿಗೆ ಭೇಟಿ ನೀಡಿ ಕಾರ್ಯಕ್ರಮದ ಮೂಲ ಉದ್ದೇಶ.ಕಾರ್ಯಕ್ರಮದ ಅನುಷ್ಠಾನದಲ್ಲಿ ಸಾರ್ವಜನಿಕರ ಸಹಕಾರವನ್ನು ಕೋರಲಾಗಿದೆ. “ಸಾರ್ವಜನಿಕರು ತಮ್ಮ ಸಹಕಾರವನ್ನು ವಿಸ್ತರಿಸಲು ಪೊಲೀಸ್ ಇಲಾಖೆ ವಿನಂತಿಸುತ್ತದೆ” ಎಂದು ಸಾರ್ವಜನಿಕ ಜಾಗೃತಿಗಾಗಿ ಕಾರ್ಯಕ್ರಮದ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳುವಾಗ ತಿಳಿಸಲಾಗಿದೆ, ಈ ಸಂದರ್ಭದಲ್ಲಿ ಸಾರ್ವಜನಿಕರು ಹಾಗೂ ನಗರ ಪೋಲಿಸ್ ಸಿಬ್ಬಂದಿಗಳಾದ ಶ್ರೀಯುತ ಶ್ರೀಧರ್,ಶ್ರೀಯುತ ರೇವಣ್ಣ ಹಾಗೂ ಶ್ರೀಯುತ ಸುಜಾತ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.

ವರದಿ : ಭರತ್ ಮಲ್ನಾಡ್

ಕರ್ನಾಟಕ ಸ್ಟೇಟ್ ಟೈಲರ್ಸ ಅಸೋಸಿಯೇಷನ್ ರಿ ಕ್ಷೇತ್ರ ಸಮಿತಿ ಉಡುಪಿ ಇದರ ವತಿಯಿಂದ ಸಂಘಟನೆಯ ರಜತ ಸಂಭ್ರಮದ ಪ್ರಯುಕ್ತ ಸ್ನೇಹ ಸಮ್ಮಿಲನ – ಪ್ರತಿಭಾ ಪುರಸ್ಕಾರ ಹಾಗೂ ಮಹಾಸಭೆಯು ಇಂದು ತಾ-20/7/25ರಂದು ಬೆಳಿಗ್ಗೆ 10ಗಂಟೆಗೆ ಉಡುಪಿ ಜಗನ್ನಾಥ ಸಭಾ ಭವನದಲ್ಲಿ ಶ್ರೀ ಸುರೇಶ್ ಪಾಲನ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಕ್ಷೇತ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀ ದಯಾನಂದ ಪ್ರಭು ಅತಿಥಿ ಅಭ್ಯಾಗತರನ್ನು ಸ್ವಾಗತಿಸಿದರು . ವರದಿ,ಲೆಕ್ಕ-ಪತ್ರ ಮಂಡಿಸಿ ಅನುಮೋದನೆ ಪಡೆಯಲಾಯಿತು . ನಂತರ ಜಿಲ್ಲಾ ಸಮಿತಿಯ ಉಪಾಧ್ಯಕ್ಷರಾದ ಶ್ರೀ ಬಿ.ಕೆ.ಶ್ರೀನಿವಾಸ್ ನೂತನ ಸಮಿತಿಯನ್ನು ರಚಿಸಿದರು.ಅಧ್ಯಕ್ಷರಾಗಿ ಸುರೇಶ್ ಪಾಲನ್ ಪುನರಾಯ್ಕೆಯಾದರು. ಶ್ರೀ ಬಾಲಕೃಷ್ಣ ನಾಯ್ಕ್ ಪ್ರಧಾನ ಕಾರ್ಯದರ್ಶಿಯಾಗಿ ,ಶ್ರೀ ದಯಾನಂದ ಪ್ರಭು ಕೋಶಾಧಿಕಾರಿಗಳಾಗಿ ಆಯ್ಕೆಯಾಗಿದ್ದು, ಜೊತೆ ಕಾರ್ಯದರ್ಶಿಗಳಾಗಿ ಸಾವಿತ್ರಿ ಪಾಲ್ ಹಾಗೂ ಶ್ರೀಮತಿ ಬೇಬಿ , ಉಪಾಧ್ಯಕ್ಷರಾಗಿ ಶ್ರೀ ವಾಸು ಆಚಾರ್ಯ, ಶ್ರೀಮತಿ ಮೀನಾಕ್ಷಿ ಆಚಾರ್ಯ, ಶ್ರೀಮತಿ ಸುಲತ ಸೋನ್ಸ್,ಸಂಘಟನಾ ಕಾರ್ಯದರ್ಶಿಗಳಾಗಿ ಹರಿಶ್ಚಂದ್ರ ಆಚಾರ್ಯ , ಶೇಖರ್ ಬಂಢಾರಿ, ಸುಭಾಷ್ ಮಲ್ಪೆ, ಅಚ್ಚುತ ಆಚಾರ್ಯ, ಸುನೀತಾ ಜಯಕರ್, ಸತೀಶ್ ಸಂತೆಕಟ್ಟೆ, ಸುಜಾತಾ ಆಚಾರ್ಯ, ಉಡುಪಿ ಕ್ಷೇತ್ರ ಸಮಿತಿಯಿಂದ ಚುನಾಯಿತ ಪ್ರತಿನಿಧಿಗಳಾಗಿ ಶ್ರೀ ದಯಾನಂದ ಕೋಟ್ಯಾನ್, ಶ್ರೀ ಕೆ.ರಾಮಚಂದ್ರ, ಶ್ರೀ ಗುರು ರಾಜ್ M ಶೆಟ್ಟಿ, ಶ್ರೀಮತಿ ಉಷಾ ಸೇರಿಗಾರ್ ಮತ್ತು ಈಶ್ವರ ಸೇರಿಗಾರ್ ಆಯ್ಕೆಯಾಗಿರುತ್ತಾರೆ. 10ಹಾಗೂ12ನೇ ತರಗತಿಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುವ 16 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಸ್ನೇಹ ಸಮ್ಮಿಲನದ ಅಂಗವಾಗಿ 25 ವರ್ಷಗಳಿಂದ ಸಂಘಟನೆಯಲ್ಲಿ ಸೇವೆ ಸಲ್ಲಿಸಿದ ಹಿರಿಯರನ್ನು ಗೌರವದಿಂದ ಸನ್ಮಾನಿಸಲಾಯಿತು. ಉತ್ತಮ ಸಂಘಟಕರಾದ ರಾಜ್ಯ ಸಮಿತಿಯ ಮಾಜಿ ಕೋಶಾಧಿಕಾರಿ ಶ್ರೀ ಅಬ್ದುಲ್ ಖಾದರ್ ಮಾತನಾಡಿ ತಮ್ಮ ಅನುಭವಗಳನ್ನು ಹಂಚಿಕೊಂಡರು.ಉಡುಪಿ ಜಿಲ್ಲಾ ಸಮಿತಿಯ ಮಾಜಿ ಪ್ರಧಾನ ಕಾರ್ಯದರ್ಶಿ ಶ್ರೀ ವಿಠ್ಠಲ ಶೆಟ್ಟಿ ಯವರು ಮಾತನಾಡಿ 2000 ನೇ ಇಸವಿಯಲ್ಲಿ ಉಡುಪಿ ಕ್ಷೇತ್ರ ಸಮಿತಿಯು ರಚನೆಯಾಯಿತು.ಅಂದು ಉಡುಪಿಯ ಶ್ಯಾಂ ಕಾಂಪ್ಲೆಕ್ಸ್ ನಲ್ಲಿ ಅಂದಿನ ಪ್ರಸಿದ್ಧ ಟೈಲರ್ ಆಗಿದ್ದ ಶ್ರೀ ದಿ.ಶ್ಯಾಂ ಶೆಟ್ಟಿ ಯವರು ದೀಪ ಬೆಳಗಿಸಿ ಉದ್ಘಾಟಿಸಿದ್ದರು ಸ್ಥಾಪಕ ಅಧ್ಯಕ್ಷರಾಗಿ ಶ್ರೀ ರಾಮಕೃಷ್ಣ ನಾಯಕ್ (ಆರ್.ಕೆ. )ಯವರು ಆಯ್ಕೆಯಾದರು ಎನ್ನುತ್ತಾ ತಮ್ಮ ಹಿಂದಿನ ದಿನಗಳನ್ನು ನೆನಪಿಸಿಕೊಂಡರು.ಉಡುಪಿ ಕ್ಷೇತ್ರ ಸಮಿತಿಯ ಮಾಜಿ ಅಧ್ಯಕ್ಷರಾಗಿ , ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಶ್ರೀಮತಿ ಸಾವಿತ್ರಿ .ಟಿ. ಸಾಲ್ಯಾನ್ ರಾಜ್ಯ ಸಮಿತಿಯ ಕೋಶಾಧಿಕಾರಿ ಶ್ರೀ ಕೆ. ರಾಮಚಂದ್ರ, ಜಿಲ್ಲಾ ಸಮಿತಿಯ ಅಧ್ಯಕ್ಷರಾದ ಶ್ರೀ ಗುರು ರಾಜ್ ಎಂ ಶೆಟ್ಟಿ, ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀ ದಯಾನಂದ ಕೋಟ್ಯಾನ್, ಜಿಲ್ಲಾ ಸಮಿತಿಯ ಉಪಾಧ್ಯಕ್ಷರಾದ ಶ್ರೀ ಬಿ.ಕೆ ಶ್ರೀನಿವಾಸ್,ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದ ಶ್ರೀ ಡಾ.ವಿಷ್ಣುಮೂರ್ತಿ ಪ್ರಭು ಸಹ ಪ್ರಾಧ್ಯಾಪಕರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತೆಂಕನಿಡಿಯೂರು ಹಲವಾರು ಉಪಯುಕ್ತ ಮಾಹಿತಿಗಳನ್ನು ನೀಡಿದರು. ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀ ದಯಾನಂದ ಕೋಟ್ಯಾನ್ ಮಾತನಾಡಿ ಆಗಸ್ಟ್ 10ರಂದು ಉಡುಪಿ ಜಿಲ್ಲಾ ಸಮಾವೇಶ ದ ಪೂರ್ವ ತಯಾರಿ ಕುರಿತು ವಿವರಿಸಿ ಕರಪತ್ರವನ್ನು ಬಿಡುಗಡೆಗೊಳಿಸಿದರು. ಕ್ಷೇತ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀ ದಯಾನಂದ ಪ್ರಭು ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಕೋಶಾಧಿಕಾರಿ ಬಾಲಕೃಷ್ಣ ನಾಯ್ಕ್ ವಂದಿಸಿದರು.