

ಅರಸೀಕೆರೆ ತಾಲೂಕಿನಲ್ಲಿ 2018ನೇ ಸಾಲಿನಿಂದ ಇಲ್ಲಿಯವರೆಗೆ ಆಹಾರ ಇಲಾಖೆಯಲ್ಲಿ ಆಹಾರ ನಿರೀಕ್ಷಕರಾಗಿ ಸೇವೆ ಸಲ್ಲಿಸಿದ ಕುಮಾರಸ್ವಾಮಿ ಇಂದು ನಿವೃತ್ತಿ ಹೊಂದಿದ್ದರಿಂದ ಆಹಾರ ಇಲಾಖೆಯ ಶಿರಸ್ತೆದರಾದ ಬಾಲಚಂದ್ರ ಆಹಾರ ನಿರೀಕ್ಷಕರಾದ ಶುಭ ರವರು ಕುಮಾರಸ್ವಾಮಿಯವರಿಗೆ ಅಭಿನಂದನೆ ಸಲ್ಲಿಸಿದರು
ನಂತರ ಮಾತನಾಡಿದ ಆಹಾರ ಇಲಾಖೆ ಶಿರಸ್ತೆದಾರರಾದ ಬಾಲಚಂದ್ರ ರವರು ಕುಮಾರಸ್ವಾಮಿ ಕಳೆದ ಆರು ವರ್ಷಗಳಿಂದ ಉತ್ತಮ ಸೇವೆ ಸಲ್ಲಿಸಿದ್ದಾರೆ ಹಾಗೂ ಇಲಾಖೆಯ ಸಿಬ್ಬಂದಿಗಳೊಂದಿಗೆ ಹಾಗೂ ತಾಲೂಕಿನ ಪಡಿತರ ವಿತರಕರೊಂದಿಗೆ ಸದಾ ಅನ್ಯೋನ್ಯತೆಯಿಂದ ಸೇವೆ ಸಲ್ಲಿಸಿದ್ದರು ಅವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಬಾಲಚಂದ್ರ ರವರು ಹಾರೈಸಿದ್ದಾರೆ
ಅರಸೀಕೆರೆ ತಾಲ್ಲೂಕು ಪಡಿತರ ವಿತರಕರ ಸಂಘ ವತಿಯಿಂದ ಅಭಿನಂದನೆ
ಅರಸಿಕೆರೆ ತಾಲೂಕಿನ ಪಡಿತರ ವಿತರಕರ ಸಂಘದ ಅಧ್ಯಕ್ಷರಾದ ವೇದಮೂರ್ತಿ ಉಪಾಧ್ಯಕ್ಷರಾದ ಚನ್ನಾಪುರ ಶಿವರಾಜ್ ಖಜಾಂಚಿಗಳಾದ ಬಾಣಾವರ ಜಯಣ್ಣ ಸೇರಿದಂತೆ ಹಲವಾರು ಪಡಿತರ ವಿತರಕರು ಹಾಗೂ ಅಭಿಮಾನಿಗಳು ಕಚೇರಿಗೆ ತೆರಳಿ ಕುಮಾರಸ್ವಾಮಿ ಅವರಿಗೆ ಶಾಲು ಹೊದಿಸಿ ಅಭಿನಂದಿಸಿದರು







