ರಾಜಕಾರಣ

ಅರಸೀಕೆರೆ ನಗರಸಭೆಯಿಂದ ಮುಂದುವರೆದ ಸ್ವಾಗತ ಕಮಾನು ನಿರ್ಮಾಣ.

ಅರಸಿಕೆರೆಯ ಧಾರ್ಮಿಕ ಆದ್ಯಾತ್ಮಿಕ ಕೇಂದ್ರಗಳ ಬಗ್ಗೆ ಇತಿಹಾಸಗಳನ್ನು ತಿಳಿ ಹೇಳುವ ನಾಮಫಲಕ ಸ್ವಾಗತ ಕಮಾನುಗಳು ರಾಷ್ಟ್ರೀಯ ಹೆದ್ದಾರಿ ಮತ್ತು ಪ್ರಮುಖ ಹೆದ್ದಾರಿಗಳಲ್ಲಿ ನಿರ್ಮಾಣಗೊಂಡು ಅರಸಿಕೆರೆ ನಗರದ ಅಂದವನ್ನು…

49 ಕರುಗಳನ್ನು ಸಾಗಿಸುತ್ತಿದ್ದ ವಾಹನವನ್ನು ತಡೆದು ಗಂಡಸಿ ಪೊಲೀಸರಿಂದ ಯಶಸ್ವಿ ಕಾರ್ಯಚಾರಣೆ.

ಗಂಡಸಿ ಪೊಲೀಸ್ ಠಾಣೆ ವತಿಯಿಂದ ಅರಸೀಕೆರೆ ಗಂಡಸಿ ಮಾರ್ಗದಲ್ಲಿ ಗಂಡಸಿ ಇಂದ ಹಿಂದೆ ದಾಸನಹಳ್ಳಿ ಗೇಟ್ ಹತ್ತಿರ ಶನಿಮಾ ದೇವಸ್ಥಾನದ ಹತ್ತಿರ ಮುಬಾರಕ್ ಎಂಬುವವರ ಶೆಡ್ಡಿನಲ್ಲಿ 49…

“ಸದಾ ಜನಪರ ಕಾಳಜಿಯ ಶಾಸಕರು” ಮತ್ತು”ವಿಶೇಷ ಚೇತನನ ವಿಶಿಷ್ಟ ಕಾಳಜಿ”

ಕ್ಷೇತ್ರದ ಕಾರ್ಯಕ್ರಮ ನಿಮಿತ್ತ ಸಕಲೇಶಪುರ ತಾಲ್ಲೂಕಿನ ಹೆತ್ತೂರು ಮಾರ್ಗಮಧ್ಯೆ ವಿಶೇಷ ಚೇತನ “ಜಯರಾಮ್”  ಅವರನ್ನು ಆಕಸ್ಮಿಕವಾಗಿ
ಭೇಟಿ ಮಾಡಿದ ಸನ್ಮಾನ್ಯ  ಶಾಸಕರಾದ ಶ್ರೀ ಯುತ  ಸಿಮೆಂಟ್ ಮಂಜು, ಸಕಲೇಶಪುರ ವಿಧಾನಸಭಾ ಕ್ಷೇತ್ರ,ಕುಸಾಲೋಪಾರಿ ವಿಚಾರಿಸುತ್ತಾ
ಅಂಗವೈಕಲ್ಯತೆ ಇದ್ದರೂ ಸಹ ಇವರ ಜೀವನೋತ್ಸಾಹ ನೋಡಿ  ಮನ ಸೋತು, ಸರ್ಕಾರದ ಸೌಲಭ್ಯಗಳ ಏನಾದರು ಬೇಕೆ ಎಂಬ ಪ್ರಶ್ನೆಗೆ ? “ನಮ್ಮೂರಿನ ರಸ್ತೆ ನಿರ್ಮಾಣ ಮಾಡಿಕೊಡಿ” ಎಂಬುದು ಅವರ ಉತ್ತರ !
ಜಯರಾಮ್ ರವರು ಶನಿವಾರಸಂತೆಯ ಗಂಗಾವಾರ ಗ್ರಾಮದ ನಿವಾಸಿ (ಮಡಿಕೇರಿ ವಿಧಾನಸಭಾ ಕ್ಷೇತ್ರ) ಇವರ ಬೇಡಿಕೆಯನ್ನು ಸದ್ಯದಲ್ಲೇ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರ
  ಶಾಸಕರಾದ ಶ್ರೀ ಯುತ  ಮಂತರ್ ಗೌಡ , ಅವರ ಗಮನಕ್ಕೆ ತರುವ ಭರವಸೆ ನೀಡಿದರು.

ವರದಿ : ಭರತ್ ಮಲ್ನಾಡ್