ರಾಜಕಾರಣ

ಪರಮ ಪೂಜ್ಯ ಶ್ರೀ ಭಾರ್ಗವ ನಂದಗಿರಿ ಸ್ವಾಮೀಜಿಗಳ ಆಶೀರ್ವಾದಗಳೊಂದಿಗೆ ಹಾಗೂ ಆತ್ಮೀಯ ಅಣ್ಣ ಜಿಕೆ ಗಿರೀಶ್ ಉಪ್ಪಾರ್ ರವರು ಮಾಜಿ ಉಪ್ಪಾರ್ ಅಭಿವೃದ್ಧಿ  ನಿಗಮ ಅಧ್ಯಕ್ಷರು ಇವರ ಮಾರ್ಗದರ್ಶನದಲ್ಲಿ  ಸೂರ್ಯ ಜಿ ಕಾಳೇನಹಳ್ಳಿ ಇವರ ನೇತೃತ್ವದಲ್ಲಿ ಅರಸೀಕೆರೆ ವಿಧಾನಸಭಾ ಕ್ಷೇತ್ರದ  ಉಪ್ಪಾರ್ ಸಮಾಜದ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ 80% ಅಧಿಕ ಅಂಕ ಪಡೆದ ಮಕ್ಕಳಿಗೆ ಭಗವದ್ಗೀತಾ  ರಾಜ ಶ್ರೀ ಭಗೀರಥ ಮಹರ್ಷಿ ಹಾಗೂ ಪ್ರತಿಭಾ ಪುರಸ್ಕಾರ ಮಾಡುವ ಮುಖಾಂತರ ಶುಭ ಕೋರಲಾಯಿತು ಇದೇ ಸಂದರ್ಭದಲ್ಲಿ ಅರಸೀಕೆರೆ ಅಧ್ಯಕ್ಷರು ಕುಮಾರ್ , ಚನ್ನ ಬಸಪ್ಪ, ರಂಗಸ್ವಾಮಿ,  ಗಂಗಾಧರಪ್ಪ, ನಾಗಪ್ಪ ,ಗೋವಿಂದಸ್ವಾಮಿ ಜಿಲ್ಲಾಧ್ಯಕ್ಷರು ಹಾಸನ ಮೋಹನ್ , ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಲಕ್ಷ್ಮೀಶ , ಬೆಟ್ಟದಪುರ ಮುಖಂಡರಾದ ಮಂಜು , ಲೋಕೇಶ್ ಹಾಸನ, ಮಂಜು  ಕೊಣನೂರು ,ಮಧು, ಸಂತೋಷ್, ಶಿವು, ಅವರು ಹಾಗೂ ಗ್ರಾಮದ ಮುಖಂಡರು ಸ್ನೇಹಿತರು ಉಪಸ್ಥಿತರಿದ್ದರು.

ವರದಿ ಉಮೇಶ್ ಗುಂಡ್ಕಾನಹಳ್ಳಿ

ರಾಜ್ಯದ ತಲಾ ಆದಾಯವನ್ನು ಹೆಚ್ಚಿಸುವಲ್ಲಿ ದೇಶದಲ್ಲೇ ಪ್ರಥಮ ಸ್ಥಾನ ಪಡೆದುಕೊಂಡಿದೆ ಅರಸಿಕೆರೆಯಲ್ಲಿ ಘರ್ಜಿಸಿದ ಮುಖ್ಯಮಂತ್ರಿ  ಸಿದ್ದರಾಮಯ್ಯ…

ಹೆಚ್‌ ವಿ ನ್ಯೂಸ್ ಅರಸೀಕೆರೆ ಕರ್ನಾಟಕ ರಾಜ್ಯ ತಲಾ ಆದಾಯದಲ್ಲಿ ಇಡೀ ದೇಶದಲ್ಲಿ ಪ್ರಥಮ ಸ್ಥಾನ ಪಡೆದಿದ್ದು ಇದಕ್ಕೆ ಪ್ರಮುಖ ಕಾರಣ ಜನರ ಕೊಳ್ಳುವ ಶಕ್ತಿ ಹೆಚ್ಚಾಗಿದೆ…

ಅರಸಿಕೆರೆಯಲ್ಲಿ ಶನಿವಾರ ನಡೆಯಲಿರುವ ಮುಖ್ಯಮಂತ್ರಿ ಉಪ ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕೆ ಶುಭ ಹಾರೈಸಿ ಭಾವಸಾರ ಕ್ಷತ್ರಿಯ ಸಮಾಜದ ಕಾರ್ಯದರ್ಶಿಗಳಾದ ಕೆ ಹೇಮಂತ್ ಮಾತನಾಡಿ ಅರಸೀಕೆರೆ ನಗರದ ಶ್ರೀ ರುಕ್ಮಿಣಿ ಪಾಂಡುರಂಗ ಸ್ವಾಮಿ ಸಮುದಾಯ ಭವನ ನಿರ್ಮಾಣ ಮಾಡುವಲ್ಲಿ  ಅತಿ ಹೆಚ್ಚು ಸಹಕಾರ ನೀಡಿ ಸರ್ಕಾರದ ಅನುದಾನ ಕೊಡಿಸುವಲ್ಲಿ ಕರ್ನಾಟಕ ರಾಜ್ಯ ಗೃಹ ಮಂಡಳಿ ಅಧ್ಯಕ್ಷರು ಹಾಗೂ ಅರಸೀಕೆರೆ ಕ್ಷೇತ್ರದ ಶಾಸಕರಾದ ಕೆಎಂ ಶಿವಲಿಂಗೇಗೌಡರು ಅತಿ ಹೆಚ್ಚು ಶ್ರಮವಹಿಸಿದ್ದಾರೆ  ಮತ್ತು ನಗರಸಭೆಯ ಅಧ್ಯಕ್ಷರಾದ  ಎಂ ಸಮೀವುಲ್ಲಾ  ರವರು ಪ್ರತಿ ಹಂತದಲ್ಲೂ ಸಹ  ಹೆಚ್ಚಿನ ಸಹಕಾರ ನೀಡಿದ್ದು  ನಮ್ಮ ಅರಸಿಕೆರೆ ಭಾವಸಾರ ಕ್ಷತ್ರಿಯ ಸಮಾಜದ ವತಿಯಿಂದ  ನಾಳೆ ನಡೆಯಲಿರುವ ಕಾರ್ಯಕ್ರಮಕ್ಕೆ ಶುಭ ಹಾರೈಸಲಿದ್ದು ಈ ಸಮಾರಂಭದಲ್ಲಿ ನಮ್ಮ ಸಮಾಜದ ವತಿಯಿಂದ  ಹೆಚ್ಚಿನ  ಸಂಖ್ಯೆಯಲ್ಲಿ  ಭಾಗವಿಸಲಿದ್ದೇವೆ ಎಂದು ಎಂದು ಕೆ ಹೇಮಂತ ತಿಳಿಸಿದರು ಭಾವಸಾರ ಕ್ಷತ್ರಿಯ ಸಮಾಜದ ಅಧ್ಯಕ್ಷರಾದ ನರೇಶ್ ನಾಜರೇ. ಕರ್ನಾಟಕ ಟೈಲರ್ಸ್ ಅಸೋಸಿಯೇಷನ್ ಅಧ್ಯಕ್ಷರಾದ ಲಕ್ಷ್ಮಣ್ ರಾವ್. ರಾಜೇಶ್ ಶೆಂಡಿಗೆ. ವಾವಳೆ ಮಂಜುನಾಥ್. ಪೆಟ್ಕರ್ ಯೋಗೇಶ್. ಉಪಸ್ಥಿತರಿದ್ದರು.

ಸಾಲ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಿ : ಎಂ.ಕೆ ಬಾಲಸುಬ್ರಮಣ್ಯ     ಹಾಸನ        ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯಿಂದ ದೊರೆಯುವ ಸಾಲ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಿ ಎಂದು ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಎಂ.ಕೆ ಬಾಲಸುಬ್ರಮಣ್ಯ ಅವರು ಕರೆ ನೀಡಿದ್ದಾರೆ.

ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ಹಾಸನ ಮತ್ತು ಚಿಕ್ಕಮಗಳೂರು ಶಾಖೆಗಳು ಜಂಟಿಯಾಗಿ ಇತ್ತೀಚೆಗೆ ಹಾಸನದ ಮಲ್ಲಿಗೆ ರೆಸಿಡೆನ್ಸಿಯಲ್ಲಿ ವ್ಯವಹಾರ ಅಭಿವೃದ್ಧಿ ಸಭೆ ಮತ್ತು ಸರ್ಕಾರಿ ಯೋಜನೆಗಳ ಬಗ್ಗೆ…

ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕೆ ಅರಸೀಕೆರೆ ತಾಲೂಕು ವಿಶ್ವಕರ್ಮ ಸಮುದಾಯದಿಂದ ಸ್ವಾಗತ..

ಬರುವ 26ರಂದು ಅಂದರೆ ಶನಿವಾರ ಅರಸೀಕೆರೆ ನಗರಕ್ಕೆ ಆಗಮಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ. ಉಪಮುಖ್ಯಮಂತ್ರಿ  ಡಿ ಕೆ ಶಿವಕುಮಾರ್ ಹಾಗೂ ಇನ್ನಿತರ ಸಚಿವರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ತಾಲೂಕು ವಿಶ್ವಕರ್ಮ ಸಮುದಾಯದ ವತಿಯಿಂದ ಕಾರ್ಯಕ್ರಮ ಯಶಸ್ವಿಯಾಗಲೆಂದು  ಅರಸಿಕೆರೆ ತಾಲೂಕ್  ವಿಶ್ವಕರ್ಮ ಸಮುದಾಯದ  ಅಧ್ಯಕ್ಷರಾದ ಯೋಗೀಶ್ ಆಚಾರ್ ತಿಳಿಸಿದರು. ತಾಲೂಕಿನ  ವಿಶ್ವಕರ್ಮ ಸಮುದಾಯ ಭವನ  ಪ್ರಪ್ರಥಮವಾಗಿ ಜಾಗ ಗುರುತು ಮಾಡಿಸಿ ಕೊಟ್ಟಿದ್ದು  ಈಗಿನ ನಗರಸಭೆಯ ಅಧ್ಯಕ್ಷರಾದ ಎಮ್ ಸಮೀವುಲ್ಲಾ ಅವರು  ನಂತರ ಶಾಸಕ ಶಿವಲಿಂಗೇಗೌಡರು  ನಮ್ಮ ಸಮುದಾಯವನ್ನು ಗುರುತಿಸಿ ನಮ್ಮನ್ನು ಕರೆಸಿ  ಹಂತ ಹಂತವಾಗಿ 65 ಲಕ್ಷಕ್ಕೂ ಹೆಚ್ಚು  ಅನುದಾನವನ್ನು ಕೊಡಿಸಿ  ಇನ್ನು ಮುಂದೆಯೂ ಸಹ  ಸಮುದಾಯ ಭವನ ಪೂರ್ಣಗೊಳಿಸಲು ಸರ್ಕಾರದಿಂದ ಅನುದಾನ ಕೊಡಿಸುವುದಾಗಿ ಭರವಸೆ ನೀಡಿರುವುದು  ನಮ್ಮ ಇಡೀ ವಿಶ್ವಕರ್ಮ ಸಮುದಾಯಕ್ಕೆ  ಸಂತೋಷ ತಂದಿದೆ ಎಂದರು  ಅಲ್ಲದೆ  ರಾಷ್ಟ್ರೀಯ ಹೆದ್ದಾರಿ  206 ರಲ್ಲಿ ಎಪಿಎಂಸಿ ಮುಂಬಾಗ ವಿಶ್ವಕರ್ಮ ವೃತ್ತ ಎಂದು ನಾಮಕರಣ ಮಾಡಲು  ಸರ್ಕಾರಕ್ಕೆ ಮತ್ತು ಶಾಸಕರಿಗೆ ಮನವಿ ನೀಡಿದ್ದು  ಇದಕ್ಕೂ ಸಹ ಶಾಸಕ ಶಿವಲಿಂಗೇಗೌಡರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು. ಗಂಡಸಿಗೆ ಹೋಬಳಿ ಸಂಘಟನಾ ಕಾರ್ಯದರ್ಶಿ ಹಾಗೂ ಕಾಂಗ್ರೆಸ್ ಮುಖಂಡ ದೇವರಾಜ್. ಕಾರ್ಯದರ್ಶಿ ಪ್ರಸನ್ನ ಆಚಾರ್. ಸಹ ಸಂಘಟನಾ ಕಾರ್ಯದರ್ಶಿ ಸ್ವಾಮಿ. ನಿರ್ದೇಶಕರಾದ ನವೀನ್. ಉಪಸ್ಥಿತರಿದ್ದರು