ಅರಸೀಕೆರೆ ತಾಲೂಕಿನ ಮಾಡಾಳು ಗ್ರಾಮದಲ್ಲಿ ಭಾದ್ರಪದ ಮಾಸದ ತದಿಗೆ ದಿನ ನೂತನ ದೇವಾಲಯದಲ್ಲಿ ಅಮ್ಮನವರನ್ನು ಪ್ರತಿ ಸ್ಥಾಪಿಸಲಾಯಿತು ಅರಸೀಕೆರೆ ನಾಡಿನ ಲಕ್ಷಾಂತರ ಮಂದಿ ಭಕ್ತರ ಆರಾಧ್ಯ ದೈವ ಶಕ್ತಿ ದೇವತೆ ಹಾಗೂ ಮೂಗೂತಿ ಸುಂದರಿ ಮಾಡಾಳು ಗ್ರಾಮದ ಮೂಲ ಸ್ಥಾನ ಶ್ರೀ ಸ್ವರ್ಣ ಗೌರಿ ದೇವಿ ನೂತನ ದೇವಾಲಯದಲ್ಲಿ ಗೌರಿ ಹಬ್ಬದ ಅಂಗವಾಗಿ ಹಾರನಹಳ್ಳಿ ಸುಷೇತ್ರ ಕೋಡಿ ಮಠದ ಉತ್ತರಾ ಧಿಕಾರಿ ಚೇತನ್ ಮರಿದೇವರ ಸಾನಿಧ್ಯದಲ್ಲಿ ಅಮ್ಮನವರನ್ನು ನೂರಾರು ಭಕ್ತರ ಸಮ್ಮುಖದಲ್ಲಿ ಶ್ರ ದ್ದಾ ಭಕ್ತಿಯಿಂದ ಪ್ರತಿಷ್ಠಾಪಿಸಲಾಯಿತು ಇಂದು ಬೆಳಿಗ್ಗೆ ಮೂಲ ಸನ್ನಿಧಿಗೆ ಆಗಮಿಸಿದ ಶ್ರೀಗಳು ದೇವರ ಮನೆಯಲ್ಲಿಲಿಂಗ ಪೂಜಾ ಅನುಷ್ಠಾನ ಮಾಡಿದರು ಬಳಿಕ ತಾಯಿ ಜಗನ್ಮಾತೆ ಅಮ್ಮನವರಿಗೆ ಮೂ ಗೂತಿ ಧಾರಣೆ ಮಾಡಿ ಆಶೀರ್ವದಿಸಿದರು ಮುತ್ತೈದೆಯರು ಗಂಗಾ ಬಾವಿಗೆ ಪೂಜೆ ಸಲ್ಲಿಸಿದರು ಗ್ರಾಮದ ಆರಾಧ್ಯ ದೈವ ಚನ್ನಬಸವೇಶ್ವರ ಸ್ವಾಮಿ ಹಾಗೂ ಶ್ರೀಗಳ ಸಮ್ಮುಖದಲ್ಲಿ ನೂರಾರು ಭಕ್ತರೊಡಗೂಡಿಕರದೇವು ಮಂಗಳವಾದ್ಯ ದೊಂದಿಗೆ ಗ್ರಾಮದ ಪ್ರಮುಖ ಬೀದಿಗೆಳಲ್ಲಿ ಉತ್ಸವದ ಮೂಲಕ ಯರೇಹಳ್ಳಿ ರಸ್ತೆ ಬದಿ ಇರುವ ಗೌರಮ್ಮದೇವಿ ದೇವಾಲಯಕ್ಕೆ ತೆರಳಲಾಯಿತು ದೇವಾಲಯದಲ್ಲಿ ಶ್ರೀಗಳ ಸಮ್ಮುಖದಲ್ಲಿ ಪ್ರತಿ ಸ್ಥಾಪಿಸಿದ ನಂತರ ಭಕ್ತರನ್ನು ಉದ್ದೇಶಿಸಿ ಆಶೀರ್ವಚನ ನೀಡಿದ ಶ್ರೀಗಳು ಮಾನವನ ಬದುಕಿನಲ್ಲಿ ಶಿವಜ್ಞಾನದ ಬೀಜವನ್ನು ಬಿತ್ತಿ ಸತ್ ಸಂಸ್ಕಾರವನ್ನು ಕಲಿಸುವಾತನೇ ನಿಜವಾದ ಗುರು ಎಂದರು ಮನುಷ್ಯನ ಬಾಳು ಚಿಗುರೊಡೆದು ಸಮೃದ್ಧವಾಗಲು ಗುರು ಕಾರುಣ್ಯ ಅತ್ಯಂತ ಮುಖ್ಯ ಭಕ್ತಿಯ ಭಾವ ತುಂಬಿದಭಕ್ತನ ಹೃದಯವೇ ಭಗವಂತ ನೆಲೆಸಿರುವ ನಿಜವಾದ ಗುಡಿ ಎಂದು ನಮ್ಮ ಪೂಜ್ಯರು ಭಕ್ತರಿಗೆ ಬೋಧಿಸಿದ್ದಾರೆ ಎಂದು ಹೇಳಿದರು 167 ವರ್ಷಗಳ ಇತಿಹಾಸವನ್ನು ಹೊಂದಿರುವ ಈ ಗ್ರಾಮವುಜಾತ್ರಾ ಮಹೋತ್ಸವದ ಅಂಗವಾಗಿ ಮಾವಿನ ತಳಿರು ತೋರಣಬಾಳೆಕಂದುಗಳಿಂದಶೃಂಗರಿಸಿದ್ದುಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕೃತಗೊಂಡು ಜನರ ಕಣ್ಮನ ಸೆಳೆಯುತ್ತಿದೆ ದೇವಿಗೆ ಪ್ರತಿನಿತ್ಯ ತ್ರಿಕಾಲ ಪೂಜೆ ನಡೆಯಲಿದೆ ದೇವಿ ದರ್ಶನಕ್ಕೆ ರಾಜ್ಯದ ನಾನಾ ಭಾಗಗಳಿಂದ ಲಕ್ಷಾಂತರ ಮಂದಿ ಬರುವ ನಿರೀಕ್ಷೆಯಿದ್ದು ದೇವಿ ಕೃಪೆಗೆ ಪಾತ್ರರಾಗಲಿದ್ದಾರೆ
