ಐತಿಹಾಸಿಕ ಕಲ್ಲಿನ ಕೋಟೆ ಶ್ರೀ ಹಿಂದೂ ಮಹಾಗಣಪತಿಯ ಮಹೋತ್ಸವ ಹಾಗೂ ಅದ್ದೂರಿ ಶೋಭಾ ಯಾತ್ರೆ
ವಿಶ್ವಹಿಂದೂಪರಿಷತ್ ಹಾಗೂ ಭಜರಂಗದಳ ಹಾಗೂ ವಿವಿಧ ಸಂಘಟನೆಗಳಿಂದ ಇಂದು ಐತಿಹಾಸಿಕ ಕಲ್ಲಿನಕೋಟೆ ಚಿತ್ರದುರ್ಗ ನಗರದಲ್ಲಿ ಹಿಂದೂ ಮಹಾಗಣಪತಿ ಮಹೋತ್ಸವದ ಶೋಭಾಯಾತ್ರೆಯ ಧಾರ್ಮಿಕ ಸಮಾರಂಭದ ಭವ್ಯ ವೇದಿಕೆಯಲ್ಲಿ ದಿವ್ಯ ಸಾನಿದ್ಯ ಅಲಂಕರಿಸಿ ಆಶೀರ್ವದಿಸಿ...

ವಿಶ್ವಹಿಂದೂಪರಿಷತ್ ಹಾಗೂ ಭಜರಂಗದಳ ಹಾಗೂ ವಿವಿಧ ಸಂಘಟನೆಗಳಿಂದ ಇಂದು ಐತಿಹಾಸಿಕ ಕಲ್ಲಿನಕೋಟೆ ಚಿತ್ರದುರ್ಗ ನಗರದಲ್ಲಿ ಹಿಂದೂ ಮಹಾಗಣಪತಿ ಮಹೋತ್ಸವದ ಶೋಭಾಯಾತ್ರೆಯ ಧಾರ್ಮಿಕ ಸಮಾರಂಭದ ಭವ್ಯ ವೇದಿಕೆಯಲ್ಲಿ ದಿವ್ಯ ಸಾನಿದ್ಯ ಅಲಂಕರಿಸಿ ಆಶೀರ್ವದಿಸಿದ ಶ್ರೀ ಭಗೀರಥಗುರುಪೀಠದ ಜಗದ್ಗುರುಗಳಾದ ಶ್ರೀ ಶ್ರೀ ಡಾ ಪುರುಷೋತ್ತಮಾನಂದಪುರಿ ಮಹಾಸ್ವಾಮಿಗಳು,ಶ್ರೀ ಕಬೀರಾನಂದಾಶ್ರಮದ ಸದ್ಗುರು ಶ್ರೀ ಶ್ರೀ ಶಿವಲಿಂಗಾನಂದ ಮಹಾಸ್ವಾಮಿಗಳು, ಶ್ರೀ ಸಂಗಮೇಶ್ವರ ಕುಂಚಿಟಿಗ ಗುರುಪೀಠದ ಜಗದ್ಗುರು ಶ್ರೀ ಶ್ರೀ ಡಾ ಶಾಂತವೀರ ಮಹಾಸ್ವಾಮಿಗಳು, ಶ್ರೀ ಶಿವಶರಣ ಮಾದರಚನ್ನಯ್ಯ ಗುರುಪೀಠದ ಜಗದ್ಗುರು ಶ್ರೀ ಶ್ರೀ ಡಾ, ಬಸವಮೂರ್ತಿ ಮಾದರಚನ್ನಯ್ಯ ಮಹಾಸ್ವಾಮಿಗಳು, ಶ್ರೀ ಶಿವಯೋಗಿ ಸಿದ್ದರಾಮೇಶ್ವರಗುರುಪೀಠದ ಜಗದ್ಗುರು ಶ್ರೀ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಮಹಾಸ್ವಾಮಿಗಳು, ಶ್ರೀ ಕೃಷ್ಣ ಯಾದವ ಗುರುಪೀಠದ ಜಗದ್ಗುರು ಶ್ರೀ ಶ್ರೀಕೃಷ್ಣಯಾದವಾನಂದ ಮಹಾಸ್ವಾಮಿಗಳು, ಶ್ರೀ ಸರ್ದಾರ್ ಸೇವಾಲಾಲ್ ಬಂಜಾರ ಗುರುಪೀಠದ ಜಗದ್ಗುರು ಶ್ರೀ ಶ್ರೀ ಸರ್ದಾರ್ ಸೇವಾಲಾಲ್ ಮಹಾಸ್ವಾಮಿಗಳು, ಮುಖ್ಯ ಭಾಷಣಕಾರರಾಗಿ ಅಯೋದ್ಯೆ ಶ್ರೀ ರಾಮಮಂದಿರದ ಸೇವೆಯಲ್ಲಿರುವ ಶ್ರೀ ಗೋಪಾಲ್ ಜಿ, ಚಿತ್ರದುರ್ಗ ಸಂಸದರು ಮಾಜಿ ಉಪಮುಖ್ಯಮಂತ್ರಿಗಳಾದ ಶ್ರೀ ಗೋವಿಂದ ಕಾರ್ಜೋಳ ರವರು, ಶಾಸಕರಾದ ಶ್ರೀ ವೀರೇಂದ್ರಪಪ್ಪಿ ರವರು, ಮಾಜಿ ಸಚಿವರು ಶಾಸಕರಾದ ಶ್ರೀ ಸಿ ಟಿ ರವಿಯವರು, ಎಂ ಎಲ್ ಸಿ ಶ್ರೀ ನವೀನ್ ರವರು, ಶಾಸಕರಾದ ಶ್ರೀ ಚಂದ್ರಪ್ಪ ನವರು, ಮಾಜಿ ಶಾಸಕರಾದ ಶ್ರೀ ಜಿ ಹೆಚ್ ತಿಪ್ಪಾರೆಡ್ಡಿಯವರು, ಹೈ ಕೋರ್ಟ್ ನ್ಯಾಯಾದೀಶರಾದ ಶ್ರೀ ವೆಂಕಟೇಶ್ ನಾಯಕ್ ರವರು, ಶ್ರೀ ಅಮಿತ್ ಸಿದ್ದೇಶ್ ರವರು, ವಿಶ್ವ ಹಿಂದೂ ಪರಿಷತ್, ಭಜರಂಗದಳ, ಆರ್ ಎಸ್ ಎಸ್ ವಿವಿಧ ಸಂಘಟನೆಗಳ ಪ್ರಮುಖರು ಉಪಸ್ಥಿತರಿದ್ದರು, ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಆರು ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸಿ ಶೋಭಾ ಯಾತ್ರೆಯಲ್ಲಿ ಜಾನಪದ ಕಲಾ ಮೇಳಗಳು, ವಿವಿಧ ವಾದ್ಯಗಳು, ಡಿ ಜೆ ಸಂಗೀತಕ್ಕೆ ಕುಣಿದು ಕುಪ್ಪಳಿಸಿ ಪ್ರತಿಯೊಬ್ಬರು ಸಂಭ್ರಮ ಆನಂದದಲ್ಲಿ ತಲ್ಲೀನರಾದ ದೃಶ್ಯ ಕಂಡು ಬಂದಿತು, ಪ್ರತೀ ವರ್ಷ ಮಹಾರಾಷ್ಟ್ರದ ಮುಂಬೈ, ಹಾಗೂ ಪೂನಾ ನಗರಗಳಲ್ಲಿ ದೇಶದಲ್ಲೇ ಅತ್ಯಂತ ಬೃಹತ್ ಕಾರ್ಯಕ್ರಮಗಳು ಹತ್ತಾರು ಲಕ್ಷ ಜನರು ಸೇರಿ ಶೋಭಾ ಯಾತ್ರೆಯಲ್ಲಿ ಭಾಗವಹಿಸುತ್ತಾರೆ, ದೇಶದಲ್ಲಿ ಎರಡನೇ ಬೃಹತ್ ಶೋಭಾ ಯಾತ್ರೆ ಚಿತ್ರದುರ್ಗ ನಗರದಲ್ಲಿ ಐದಾರು ಲಕ್ಷ ಜನರು ಸ್ವಯಂ ಪ್ರೇರಿತರಾಗಿ ಭಾಗವಹಿಸಿ ಹಿಂದುಗಳೆಲ್ಲ ಒಂದೇ ಎಂದು ಒಗ್ಗಟ್ಟು ಪ್ರದರ್ಶಿಸಿ ಸಂಭ್ರಮಿಸುವುದು ಹೆಮ್ಮೆಯ ಸಂಗತಿ,



