ಮುಖ್ಯ ವಿಷಯಕ್ಕೆ ಹೋಗಿ
Latest
ಕರ್ನಾಟಕ

ಭಕ್ತಿ ಮತ್ತು ಶಕ್ತಿಯ ಸಂಕೇತವೇ ಶ್ರೀ ಮಾಡಲು ಗೌರಿ ಮಾತೆ

ಮಾಡಾಳು ಭಕ್ತಿ ಮತ್ತು ಶಕ್ತಿಯ ಮಹಾಸಂಗಮವೇ ಮಾಡಾಳು ಮೂಲಸ್ಥಾನ ಶ್ರೀ ಸ್ವರ್ಣ ಗೌರಮ್ಮ ದೇವಿ ನೆಲೆಸಿರುವ ಈ ಸನ್ನಿಧಿ ಎಂದು ಹಾರನಹಳ್ಳಿ ಸುಕ್ಷೇತ್ರ ಕೋಡಿಮಠದ ಜಗದ್ಗುರು ಡಾ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಬುಧವಾರ ರಾತ್ರಿ ತಿಳಿಸಿ...

ಸಂಪಾದಕ· 1 ನಿಮಿಷ ಓದು
ಭಕ್ತಿ ಮತ್ತು ಶಕ್ತಿಯ ಸಂಕೇತವೇ ಶ್ರೀ ಮಾಡಲು ಗೌರಿ ಮಾತೆ
ಹಂಚಿಕೊಳ್ಳಿ:

ಮಾಡಾಳು ಭಕ್ತಿ ಮತ್ತು ಶಕ್ತಿಯ ಮಹಾಸಂಗಮವೇ ಮಾಡಾಳು ಮೂಲಸ್ಥಾನ ಶ್ರೀ ಸ್ವರ್ಣ ಗೌರಮ್ಮ ದೇವಿ ನೆಲೆಸಿರುವ ಈ ಸನ್ನಿಧಿ ಎಂದು ಹಾರನಹಳ್ಳಿ ಸುಕ್ಷೇತ್ರ ಕೋಡಿಮಠದ ಜಗದ್ಗುರು ಡಾ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಬುಧವಾರ ರಾತ್ರಿ ತಿಳಿಸಿದರು ಕಳೆದ 167 ವರ್ಷಗಳ ಇತಿಹಾಸ ಹೊಂದಿರುವ ಈ ಸುಕ್ಷೇತ್ರದಲ್ಲಿ ಭಾದ್ರಪದಮಾಸದ ತದಿಗೆ ದಿನದಂದು ದೇವಾಲಯದ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಿರುವ ಅಮ್ಮನವರಿಗೆ ಸಂಪ್ರದಾಯದಂತೆ ಹತ್ತನೇ ದಿನ ದೊಡ್ಡಮಂಗಳಾರತಿ (ಮಹಾ ಮಂಗಳಾರತಿ) ಸೇವೆ ಭಕ್ತರ ಶ್ರೀಗಳ ಸಾನಿಧ್ಯದಲ್ಲಿಶ್ರದ್ಧಾ ಭಕ್ತಿಯಿಂದ ಮೂಲಭಕ್ತರು ಹಿಂದಿನಿಂದಲೂ ನಡೆಸಿಕೊಂಡು ಬರುತ್ತಿದ್ದಾರೆ ಶ್ರೀಗಳ ಪಾದಪೂಜೆಯ ನಂತರ ಗೌರಿದೇವಿಯನ್ನು ಆಶೀರ್ವದಿಸಿದ ಸ್ವಾಮೀಜಿ ದರ್ಶನಕ್ಕೆ ಬಂದ ಭಕ್ತರನ್ನು ಉದ್ದೇಶಿಸಿ ಆಶೀರ್ವಚನ ನೀಡಿದರು ಮಾಡಾ ಳಿಗೂ ಕೋಡಿ ಮಠಕ್ಕೂ ಅವಿನಾವಭಾವ ಸಂಬಂಧ ಇದ್ದು ಕೋಡಿಮಠದಲ್ಲಿ ಯೋಗ ಸಮಾಧಿಯಲ್ಲಿರುವ ಮಹಾ ತಪಸ್ವಿ ಶಿವಲಿಂಗ ಸ್ವಾಮಿಗಳವರು ಒಂದು ಕೋಟಿ ಜಪ ಮಾಡಿ ಸಿದ್ಧಿಸಿದ ಬಂಗಾರದ ಮೂಗುತಿಯನ್ನು ಗೌರಿ ಹಬ್ಬದಂದು ಗೌರಮ್ಮ ದೇವಿಗೆ ಧಾರಣೆ ಮಾಡಿದ ನಂತರ ದೇವಿ ಸಾಕ್ಷಾತ್ ಪಾರ್ವತಿ ದೇವಿಯಾಗಿ ಕಂಗೊಳಿಸುತ್ತಾಳೆ ಎಂದು ತಿಳಿಸಿದರು ಅಮ್ಮನವರು ತನ್ನ ನಂಬಿ ಬರುವ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತ ಸಂಕಷ್ಟಗಳನ್ನು ಪರಿಹರಿಸುತ್ತಾ ಬಂದಿರುವುದರಿಂದ ಭಕ್ತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ ಅಲ್ಲದೆ ರಾಜ್ಯದಲ್ಲಿರುವ ಶಕ್ತಿಪೀಠ ಗಳಂತೆಇದು ಮತ್ತೊಂದು ಶಕ್ತಿಪೀಠ ವಾಗಿ ಬೆಳೆಯಲಿದೆ

ಹಂಚಿಕೊಳ್ಳಿ: