ಶ್ರೀ ಸ್ವರ್ಣ ಗೌರಿ ಅಮ್ಮನವರ ದೇವಾಲಯದಲ್ಲಿ ದಸರಾ ಆಚರಣೆಗೆ ಕೊಡಿ ಶ್ರೀಗಳ ತೀರ್ಮಾನ
ಮಾಡಾಳು ಕಳೆದ ಹಲವು ದಿನಗಳಿಂದ ವೈಭವ ಪೇತವಾಗಿ ಮೆರೆದು ಪ್ರತಿನಿತ್ಯ ರಾಜ್ಯದ ವಿವಿಧ ಭಾಗಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಬಂದ ಭಕ್ತಾದಿಗಳಿಗೆದರ್ಶನ ಭಾಗ್ಯ ಕರುಣಿಸಿದ ಕರ್ಪೂರ ಪ್ರಿಯ ಮೂಗುತಿ ಸುಂದರಿ ಮಾಡಾಳು ಗ್ರಾಮದ ಮೂಲಸ್ಥಾನ ಶ್ರೀ ಸ್ವರ್ಣ ಗ...

ಮಾಡಾಳು ಕಳೆದ ಹಲವು ದಿನಗಳಿಂದ ವೈಭವ ಪೇತವಾಗಿ ಮೆರೆದು ಪ್ರತಿನಿತ್ಯ ರಾಜ್ಯದ ವಿವಿಧ ಭಾಗಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಬಂದ ಭಕ್ತಾದಿಗಳಿಗೆದರ್ಶನ ಭಾಗ್ಯ ಕರುಣಿಸಿದ ಕರ್ಪೂರ ಪ್ರಿಯ ಮೂಗುತಿ ಸುಂದರಿ ಮಾಡಾಳು ಗ್ರಾಮದ ಮೂಲಸ್ಥಾನ ಶ್ರೀ ಸ್ವರ್ಣ ಗೌರಮ್ಮ ದೇವಿ ಕೈಲಾಸ ಸೇರಿದ್ದ ರೂ ದೇವಾಲಯದ ಆವರಣದಲ್ಲಿ ದೇವಿಯ ನಾಮಸ್ಮರಣೆ ಇಂದಿಗೂ ಮೊಳಗುತ್ತಿದೆ ' ನೂತನ ದೇವಾಲಯಕ್ಕೆ ಆಗಮಿಸಿದ ಹಾರನಹಳ್ಳಿ ಸುಕ್ಷೇತ್ರ ಕೋಡಿ ಮಠದ ಜಗದ್ಗುರು ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ತಮ್ಮ ಭಕ್ತವೃಂದಾವನ್ನು ಉದ್ದೇಶಿಸಿ ಮಾತನಾಡಿ,ಇದೇ ಪ್ರಥಮ ಬಾರಿಗೆ ದೇವಾಲಯದಲ್ಲಿ ದಸರಾ ಮಹೋತ್ಸವ.ಆಚರಿಸಬೇಕು ಎಂದು ಕರೆ ನೀಡಿದರು ನಾಡಿನ ಜನರ ಒಳಿತಿಗಾಗಿ ಹಾಗೂ ಲೋಕಕಲ್ಯಾಣಾರ್ಥವಾಗಿ ಆಪದ್ಬಾಂಧವ ಗ್ರಾಮದ ಆರಾಧ್ಯ ದೈವ ಶ್ರೀ ಗುರು ಚನ್ನಬಸವೇಶ್ವರ ಸ್ವಾಮಿ ಯವರನ್ನು ಅ 10 ಅಮಾವಾಸ್ಯೆ ಯಂದು ಪಟ್ಟಕ್ಕೆ ಕೂರಿಸಲಾಗುವುದು ನಂತರ ಸ್ವಾಮಿಯವರ ಸಮ್ಮುಖದಲ್ಲಿ ಪ್ರತಿನಿತ್ಯ ಡಿಎಂ ಕುರ್ಕೆ ರಾಜಶೇಖರ ಶಾಸ್ತ್ರಿಗಳವರು ದೇವಿ ಪಾರಾಯಣವನ್ನು ಪಠಿಸುವರು ಭಕ್ತರು ಸಕಾಲಕ್ಕೆ ಆಗಮಿಸಿ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದೇವಿ ಕೃಪೆಗೆ ಪಾತ್ರರಾಗಬೇಕೆಂದು ನುಡಿದರು. ಕೋಡಿಮಠದಲ್ಲಿ ಅ 20ರಂದು ವಿಜಯದಶಮಿ ಎಂದು ಅಂಬು ಛೇದಿಸಿದರೆ ಅ 21ರಂದು ಬುಧವಾರ ಮಾಡಾಳಿನಲ್ಲಿ ಮಧ್ಯಾಹ್ನ ಶ್ರೀ ಚನ್ನಬಸವೇಶ್ವರ ಸ್ವಾಮಿಯವರನ್ನು ಪುಷ್ಪಾಲಂಕೃತನಮಂಟಪದಲ್ಲಿ ಪ್ರತಿಷ್ಠಾಪಿಸಿ ಮಂಗಲ ಕರಡೆವು ವಾದ್ಯದೊಂದಿಗೆ ದೇವಾಲಯದ ಆವರಣದಲ್ಲಿ ಭಕ್ತರೊಡಗೂಡಿ ಉತ್ಸವ ನಡೆಸಲಾಗುವುದು ಬಳಿಕ ದೇವಾಲಯದ ಮುಂಭಾಗ ಸಿದ್ಧತೆಗೊಳಿಸಿರುವ ಅಂಬನ್ನು ಛೇದಿಸಿ ಬನ್ನಿ ಕಡಿಯಲಾಗುವುದು ಈ ಸಂದರ್ಭದಲ್ಲಿಕೋಡಿಮಠ ಏಜೆಂಟ್. ಮಹದೇವಪ್ಪ ಶ್ರೀ ಗೌರಮ್ಮ ದೇವಿ ಸೇವಾ ಸಮಿತಿ ಅಧ್ಯಕ್ಷರು ಸದಸ್ಯರು ಮಾಡಾಳು ಗ್ರಾಮಸ್ಥರು ಸೇರಿದಂತೆ ವೈಜಿ ಹಳ್ಳಿಪಿ ಹೊಸಹಳ್ಳಿ ಕಿತ್ತನಕೆರೆ ಬೊಮ್ಮಸಮುದ್ರ ಕೆ ಶಂಕರ್ ನಹಳ್ಳಿ ಕಡಲ ಮಗೆ ಶಶಿವಾಳ ಡಿ ಎಂ ಕುರ್ಕೆ ಹಾರನಹಳ್ಳಿ ಅಣ್ಣಾಯಕನಹಳ್ಳಿ ಮುಂತಾದ ಗ್ರಾಮಗಳ ಭಕ್ತರು ಹಿತರಿದ್ದರು



