Home Uncategorized ಕುಣಿಗಲ್ ಕಾರ್ಖಾನೆ ರಾಸಾಯನಿಕ ನೀರು ಬಿಡುಗಡೆಗೆ ಗ್ರಾಮಸ್ಥರಿಂದ ವಿರೋಧ

ಕುಣಿಗಲ್ ಕಾರ್ಖಾನೆ ರಾಸಾಯನಿಕ ನೀರು ಬಿಡುಗಡೆಗೆ ಗ್ರಾಮಸ್ಥರಿಂದ ವಿರೋಧ

22
0
ಕುಣಿಗಲ್‌ನಲ್ಲಿ ಕಾರ್ಖಾನೆ ರಾಸಾಯನಿಕ ನೀರು ಬಿಡುಗಡೆಗೆ ಗ್ರಾಮಸ್ಥರಿಂದ ಪ್ರತಿಭಟನೆ

ಕುಣಿಗಲ್ ತಾಲ್ಲೂಕಿನ ಅಂಚೇಪಾಳ್ಯ ಕೈಗಾರಿಕಾ ಪ್ರದೇಶದಲ್ಲಿನ ಕೆಲ ಖಾಸಗಿ ಕಾರ್ಖಾನೆಗಳು ರಾಸಾಯನಿಕ ಮಿಶ್ರಿತ ನೀರನ್ನು ಗೊಟ್ಟಿಕೆರೆ ಕೆರೆಗೆ ಬಿಡುತ್ತಿರುವ ಹಿನ್ನೆಲೆಯಲ್ಲಿ, ಗೊಟ್ಟಿಕೆರೆ ಹಾಗೂ ಮುಧುಗಿರಿಪಾಳ್ಯ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾ ಸ್ಥಳಕ್ಕೆ ತಹಸೀಲ್ದಾರ್ ರಶ್ಮಿ ಹಾಗೂ ಡಿವೈಎಸ್ಪಿ ಓಂ ಪ್ರಕಾಶ್ ಭೇಟಿ ನೀಡಿ ಸ್ಥಳೀಯರೊಂದಿಗೆ ಚರ್ಚಿಸಿದರು. ಗ್ರಾಮಸ್ಥರು, “ಕೆರೆಗೆ ಹರಿಯುತ್ತಿರುವ ಕಲುಷಿತ ನೀರಿಂದ ಬೋರ್‌ವೆಲ್ ನೀರಿಗೆ ದುರ್ವಾಸನೆ ಬರುತ್ತಿದ್ದು, ಕೆಲವರಲ್ಲಿ ಆರೋಗ್ಯ ಸಮಸ್ಯೆಗಳು, ಕ್ಯಾನ್ಸರ್‌ನಂತಹ ಲಕ್ಷಣಗಳು ಕಾಣಿಸುತ್ತಿವೆ,” ಎಂದು ವಿಷಾದ ವ್ಯಕ್ತಪಡಿಸಿದರು.

ತಹಸೀಲ್ದಾರ್ ರಶ್ಮಿ ಅವರು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ತಕ್ಷಣವೇ ತಪಾಸಣೆ ನಡೆಸಿ ವರದಿ ನೀಡುವಂತೆ ಸೂಚಿಸಿ, ಶೀಘ್ರ ಪರಿಹಾರ ಭರವಸೆ ನೀಡಿದರು.

ಈ ಸಭೆಯಲ್ಲಿ ಡಿವೈಎಸ್ಪಿ ಓಂ ಪ್ರಕಾಶ್, ಕೈಗಾರಿಕಾ ಪ್ರದೇಶದ ಉದ್ಯಮಗಳ ಹ್ಯೂಮನ್ ರಿಸೋರ್ಸ್ ಅಧಿಕಾರಿಗಳು, ಗ್ರಾಮಸ್ಥರು ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

                        ವರದಿ: ಮಂಜುನಾಥ್ ಕೆ. ಎನ್

LEAVE A REPLY

Please enter your comment!
Please enter your name here