ಅರಸೀಕೆರೆ ನಗರಸಭೆ ವತಿಯಿಂದ ನಗರದ ಅತಿ ಹೆಚ್ಚು ಅಂಕಗಳಿಸಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಿದ ನಗರ ಸಭೆ ಅಧ್ಯಕ್ಷರಾದ ಎಮ್ ಸಮೀವುಲ್ಲಾ.

ಉಮೇಶ್ ಬಾಣಾವರ
Disclosure: This website may contain affiliate links, which means I may earn a commission if you click on the link and make a purchase. I only recommend products or services that I personally use and believe will add value to my readers. Your support is appreciated!

ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ನಗರಸಭೆ ವತಿಯಿಂದ ವಿದ್ಯಾರ್ಥಿ ವೇತನ ವಿತರಣೆ
ಅರಸೀಕೆರೆ
2025 26 ನೇ ಸಾಲಿನ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಕಲ್ಯಾಣ ಕಾರ್ಯಕ್ರಮದ ಅಡಿಯಲ್ಲಿ ಎಸ್ ಎಫ್ ಸಿ ಯೋಜನೆ ಅನುದಾನದ ಅಡಿಯಲ್ಲಿ ಪರಿಶಿಷ್ಟ ಜಾತಿ ಮಕ್ಕಳ 74 ವಿದ್ಯಾರ್ಥಿಗಳ 4,36,500 ರೂಗಳು ಮತ್ತು ಪರಿಶಿಷ್ಟ ಪಂಗಡದ 11 ವಿದ್ಯಾರ್ಥಿಗಳಿಗೆ ಒಟ್ಟು 48,000 ರೂಗಳ ಸಹಾಯಧನ ಒಟ್ಟು 85 ವಿದ್ಯಾರ್ಥಿಗಳಿಗೆ ಒಟ್ಟು 4,84,500 ಅತಿ ಹೆಚ್ಚು ಅಂಕಗಳನ್ನು ಗಳಿಸಿ ಉತ್ತೀರ್ಣರಾಗಿದ್ದ ಮಕ್ಕಳಿಗೆ ಅರಸೀಕೆರೆ ನಗರಸಭೆ ವತಿಯಿಂದ ದಾಖಲೆ ಪ್ರಮಾಣದ ಹಣವನ್ನು ವಿದ್ಯಾರ್ಥಿ ವೇತನವನ್ನಾಗಿ ನಗರದ ಮಕ್ಕಳು ಇನ್ನೂ ಹೆಚ್ಚಿನ ರೀತಿಯಲ್ಲಿ ಅಂಕಗಳನ್ನು ಪಡೆದು ಉತ್ತೀರ್ಣರಾಗಲು ನಗರಸಭೆ ವತಿಯಿಂದ ಸ್ಫೂರ್ತಿ ತುಂಬಲಾಗಿದೆ ಎಂದು ಅರಸಿಕೆರೆ ನಗರಸಭೆ ಅಧ್ಯಕ್ಷರಾದ ಎಮ್ ಸಮೀವುಲ್ಲಾ. ಹೇಳಿದರು.
ಎಸ್ ಎಸ್ ಎಲ್ ಸಿ ಪಿಯುಸಿ ಸ್ನಾತ ಕೋತ್ತ ರ ಪದವಿ ಪಿ ಎಚ್ ಡಿ ಸೇರಿದಂತೆ ವಿವಿಧ ಹಂತಗಳಲ್ಲಿ ಬಡತನ ರೇಖೆಯಿಂದ ಕಷ್ಟಪಟ್ಟು ವಿದ್ಯಾಭ್ಯಾಸ ನಡೆಸುತ್ತ ತಮ್ಮ ಮುಂದಿನ ಹಂತದ ವಿದ್ಯಾಭ್ಯಾಸದಲ್ಲಿ ಸಹಾಯವಾಗಿ ಅರಸೀಕೆರೆ ನಗರದ ಕೀರ್ತಿಯನ್ನು ಹೆಚ್ಚಿಸಲು ಮಕ್ಕಳು ಮುಂದಾಗಬೇಕೆಂದು ನಗರಸಭೆ ಅಧ್ಯಕ್ಷ ಎಮ್ ಸಮೀವುಲ್ಲಾ ಮಕ್ಕಳು ಮತ್ತು ಪೋಷಕರಿಗೆ ಕಿವಿ ಮಾತು ಹೇಳಿದರು ನಗರಸಭೆಯ ಕಚೇರಿ ಆವರಣದಲ್ಲಿ ವಿದ್ಯಾರ್ಥಿ ವೇತನ ವಿತರಣೆ ಮಾಡಿ ಮಾತನಾಡಿದ ಅವರು ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಕನಸು ನನಸು ಮಾಡಲು ಸಮಾಜದ ಅತ್ಯಂತ ಕೆಳಮಟ್ಟದ ಮಕ್ಕಳು ಕಷ್ಟಪಟ್ಟು ವಿದ್ಯಾಭ್ಯಾಸ ಮಾಡಿ ಮುಂದೆ ಬರಲು ಸಹಕಾರಿಯಾಗಬೇಕು ಹೀಗಾಗಿ ನಗರಸಭೆ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿ ಅವರೊಂದಿಗೂ ಚರ್ಚಿಸಿ ಅರಸೀಕೆರೆ ನಗರದ ಮಕ್ಕಳಿಗೆ ಸಹಾಯವಾಗುವಂತೆ ಈ ಹೆಚ್ಚಿನ ಹಣವನ್ನು ನೀಡುತ್ತಿರುವುದಾಗಿ ಮುಂದೆ ಬರುವ ನಗರಸಭೆ ಅಧಿಕಾರಿಗಳಾಗಲಿ ಅಥವಾ ನಗರ ಸಭೆಯ ಅಧಿಕಾರ ನಡೆಸುವ ಸಂಬಂಧಪಟ್ಟವರಾಗಲಿ ಈ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯನ್ನು ಮುಂದೆ ಮುಂದುವರಿಸಿಕೊಂಡು ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಕನಸು ನನಸು ಮಾಡಬೇಕೆಂದು ಎಮ್ ಸಮೀವುಲ್ಲಾ ತಿಳಿಸಿದರು . ನಗರ ಸಭೆ ಉಪಾಧ್ಯಕ್ಷರಾದ ಮನೋಹರ್. ಸದಸ್ಯರುಗಳಾದ ಅನ್ನಪೂರ್ಣ ಅವಿನಾಶ್ ಸುಬ್ರಹ್ಮಣ್ಯ ರೋಷನ್. ನಗರಸಭೆ ನಾಮನಿರ್ದೇಶತ ಸದಸ್ಯರಾದ ಮತ್ತು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರಾದ ಕಿರಣ್ ಮತ್ತು ನಗರಸಭೆಯ ಪ್ರಭಾರಿ ಲೆಕ್ಕಾಧಿಕಾರಿಗಳಾದ ಜಮೀಲ್ ಸಮುದಾಯ ಸಂಘಟನಾಧಿಕಾರಿಗಳಾದ ಎಂ ಹೆಚ್ ರಾಜಶೇಖರ್ ಸೇರಿದಂತೆ ಹಲವಾರು ನಗರಸಭಾ ಸದಸ್ಯರುಗಳು ಸಿಬ್ಬಂದಿಗಳು ವಿದ್ಯಾರ್ಥಿ ವೇತನ ಪಡೆಯಲು ಬಂದಿದ್ದ ಪೋಷಕರು ಉಪಸ್ಥಿತರಿದ್ದರು.

ಚಿತ್ರ ವಿಷು ಕುಮಾರ್
Share This Article
Leave a Comment

Leave a Reply

Your email address will not be published. Required fields are marked *