ರಾಗಿ ಖರೀದಿ ಕೇಂದ್ರ ಉದ್ಘಾಟನೆ ಮಾಡಿದ ಶಾಸಕ ಕೆಎಂ ಶಿವಲಿಂಗೇಗೌಡ

ಉಮೇಶ್ ಬಾಣಾವರ
Disclosure: This website may contain affiliate links, which means I may earn a commission if you click on the link and make a purchase. I only recommend products or services that I personally use and believe will add value to my readers. Your support is appreciated!



ಅರಸೀಕೆರೆ  ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಕರ್ನಾಟಕ ಸರ್ಕಾರದ  ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಡಿಯಲ್ಲಿ ಬರುವ  ಕರ್ನಾಟಕ ಆಹಾರ ನಾಗರಿಕ ನಿಗಮ ನಿಯಮಿತ ವತಿಯಿಂದ  ರಾಗಿ ಖರೀದಿ ಕೇಂದ್ರವನ್ನು  ಅರಸೀಕೆರೆ ಕ್ಷೇತ್ರದ ಶಾಸಕ  ಹಾಗೂ ಗೃಹ ಮಂಡಳಿ ಅಧ್ಯಕ್ಷರಾದ  ಕೆಎಂ ಶಿವಲಿಂಗೇಗೌಡ ಉದ್ಘಾಟಿಸಿದರು

ನಂತರ ಮಾತನಾಡಿದ ಅವರು   ರೈತರಿಂದ ಬೆಂಬಲ ಬೆಲೆಯಲ್ಲಿ ರಾಗಿ ಖರೀದಿ ಮಾಡುವಾಗ  ರೈತರಿಗೆ ಯಾವುದೇ ತೊಂದರೆ ಆಗಬಾರದು  ಮತ್ತು ಪಡೆದ ರಾಗಿಯನ್ನು  ಯಾವುದೇ ಕಾರಣಕ್ಕೂ  ರಾಗಿಯಲ್ಲಿ  ಕಸ ಮಣ್ಣು ಮಿಶ್ರಿತ ಕಂಡು ಬಂದರೆ  ಯಾವುದೇ ಮುಲಾಜಿಲ್ಲದೆ  ಸರ್ಕಾರದ ಮಠದಲ್ಲಿ ತನಿಖೆಯನ್ನು ನಡೆಸಲಾಗುವುದು  ಎಂದು ತಿಳಿಸಿದರು

ಸರ್ಕಾರದ ಮಾರುಕಟ್ಟೆಗೆ  ರೈತರ ಹೆಸರಿನಲ್ಲಿ ಎಷ್ಟೇ ಪ್ರಮಾಣದಲ್ಲಿ ರಾಗಿ ಬಂದರೂ ಸಹ  ರೈತರಿಗೆ ತೊಂದರೆಯಾಗದಂತೆ ಖರೀದಿ ಮಾಡುವಂತೆ  ಸಂಬಂಧಪಟ್ಟ ಅಧಿಕಾರಿಗಳಿಗೆ  ನಿರ್ದೇಶನ ನೀಡಿದರು

ವಿಧಾನಸಭೆಯ  ಗಲಾಟೆಯಲ್ಲಿ ಮತ್ತೆ ಪುನರುಚ್ಚರಿಸಿ ಮಾತನಾಡಿದ ಶಾಸಕ ಶಿವಲಿಂಗೇಗೌಡ  ನನ್ನನ್ನು ಕೊಬ್ಬರಿ ಕಳ್ಳ ಕಾಯಿ ಕಳ್ಳ ಎಂದು  ಅನ್ಯ ಪಕ್ಷದವರು ತೇಜೋದೆ ಮಾಡಿದರು ನಾನು ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳುವುದಿಲ್ಲ  ಒಬ್ಬರಿಗೆ ಬೆಂಬಲ ಬೆಲೆ ಸಿಗ ಅಂತ ಸಂದರ್ಭದಲ್ಲಿ  ಹೋರಾಟ ನಡೆಸಿದ್ದರ ಬಗ್ಗೆ  ತನ್ನ ಕ್ಷೇತ್ರದ ತಿಳಿದಿದೆ  ಬೆಳಗಾವಿ ಅಧಿವೇಶನದಿಂದ ಪ್ರಾರಂಭವಾದ  ಹೋರಾಟ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಮಟ್ಟದಲ್ಲಿ ಕೇಂದ್ರ ಕೃಷಿ ಸಚಿವರನ್ನು ಸಹ  ಭೇಟಿ ಮಾಡಿ  ಕೊಬ್ಬರಿಯ ಬೆಂಬಲ ಬೆಲೆಗೆ  ಶ್ರಮಿಸಿದ್ದೇನೆ ಎಂದರು 
ಇದಲ್ಲದೆ   ಇತ್ತೀಚಿಗೆ ನಡೆದ ವಿಧಾನಸಭೆ ಅಧಿವೇಶನದಲ್ಲಿ  ನನ್ನ ವಿರುದ್ಧ ಪಿತೂರಿ ನಡೆಸಿ  ಪ್ರತಿ ಬಾರಿಯೂ ನನ್ನನ್ನು ಮಾತನಾಡಲು ಬಿಡದೆ  ಕಳೆದ ಹಲವಾರು ತಿಂಗಳುಗಳಿಂದ ತೊಂದರೆ ನೀಡುತ್ತಿದ್ದರು ನಂತರ ನನ್ನನ್ನು ರಾಗಿ ಕಳ್ಳ ಕೊಬ್ಬರಿ ಕಳ್ಳ ಎಂದು  ಘೋಷಣೆ ಮಾಡಿದಾಗ ನಾನು ತುಂಬಾ ರೋಷಾ ವೇಷದಲ್ಲಿ  ಉತ್ತಮವಾಗಿ ಉತ್ತರ ನೀಡಿದ್ದೇನೆ  ಈ ವಿಚಾರದ ಗಲಾಟೆಯಲ್ಲಿ ಹಲವಾರು ಜನರ ಪಿತೂರಿಯು ನಡೆದಿದೆ  ನಾನು ಇದ್ಯಾವುದಕ್ಕೂ ಜಗ್ಗುವ  ಮನುಷ್ಯನಲ್ಲ ಎಂದು  ನೇರವಾಗಿ ವಿರೋಧ ಪಕ್ಷಗಳಿಗೆ ಉತ್ತರ ನೀಡಿದರು

ರಾಜ್ಯ ರೈತ ಸಂಘದ  ಗೊಲ್ಲರಳಿ ದಯಾನಂದ್  ಬಾಣಾವರ ವರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಜಯಣ್ಣ  ಜಿಲ್ಲಾ ಕೆಎಫ್‌ಸಿಸಿ ಅಧಿಕಾರಿಗಳಾದ ಅನುರಾಧ  ಅಧಿಕಾರಿಗಳಾದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿಗಳಾದ ಸಿದ್ದಲಿಂಗ ಸ್ವಾಮಿ ಅರಸೀಕೆರೆ  ಆಹಾರ ಇಲಾಖೆ ಶಿರಸ್ತೆದರಾದ ಬಾಲಚಂದ್ರ  ಅರಸೀಕೆರೆ ಆಹಾರ ನಿಗಮದ  ಪ್ರಭಾರ ವ್ಯವಸ್ಥಾಪಕರಾದ ಶ್ರೀನಾಥ್  ಸೇರಿದಂತೆ ಹಲವಾರು ಗ್ರಾಮದ ರೈತರುಗಳು ಉಪಸ್ಥಿತರಿದ್ದರು

Share This Article
Leave a Comment

Leave a Reply

Your email address will not be published. Required fields are marked *