ಅಮಾವಾಸ್ಯೆ ಪ್ರಯುಕ್ತ ಮಾಡಾಳು ಗ್ರಾಮದ ಶ್ರೀ ಸ್ವರ್ಣ ಗೌರಮ್ಮ ದೇವಾಲಯದಲ್ಲಿ ಅಮಾವಾಸ್ಯೆ ಪೂಜೆ

ಉಮೇಶ್ ಬಾಣಾವರ
Disclosure: This website may contain affiliate links, which means I may earn a commission if you click on the link and make a purchase. I only recommend products or services that I personally use and believe will add value to my readers. Your support is appreciated!

ಮಾಡಾಳು ಗ್ರಾಮದ ಇತಿಹಾಸ ಪ್ರಸಿದ್ಧ ಪುಣ್ಯ ಕ್ಷೇತ್ರ ಮೂಲಸ್ಥಾನ ಶ್ರೀ ಸ್ವರ್ಣ ಗೌರಮ್ಮ ದೇವಿ ದೇವಾಲಯದಲ್ಲಿಮಾಘಮಾಸದಕೊನೆಯ ಅಮಾವಾಸ್ಯೆ ಪ್ರಯುಕ್ತ ಮಂಗಳವಾರ ರಾತ್ರಿ ನೂರಾರು ಭಕ್ತರ ಸಮ್ಮುಖದಲ್ಲಿಅಮ್ಮನವರಿಗೆ ವಿಶೇಷ ಪೂಜೆ ಶ್ರದ್ಧಾ ಭಕ್ತಿಯಿಂದ ನೆರವೇರಿತು               ಪ್ರತಿ ತಿಂಗಳು ಅಮಾವಾಸ್ಯೆ ಎಂದು ಕೋಡಿಮಠ ಜಗದ್ಗುರುಗಳ ಸಂಕಲ್ಪದರಂತೆ ಲೋಕಕಲ್ಯಾಣಾ ರ್ಥವಾಗಿ ಹಮ್ಮಿಕೊಳ್ಳುವ ವಿಶೇಷ ಪೂಜೆ ಶಾಸ್ತ್ರೋಕ್ತವಾಗಿ ಧಾರ್ಮಿಕ ವಿಧಿ ವಿಧಾ ನಗಳಿಂದ ಜರುಗಿತು               ಪೂಜೆಯ ಅಂಗವಾಗಿ ದೇವಾಲಯವನ್ನು ಮಾವಿನ ತಳಿರು ತೋರಣ ಹಾಗೂ ಬಾಳೆಕಂದು ಹಾಗೂಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಿದ್ದು ಭಕ್ತರ ಕಣ್ಮನ ಸೆಳೆಯಿತು      8 ಗಂಟೆಗೆ ಸರಿಯಾಗಿ ಪುರೋಹಿತರಿಂದಕೋಡಿಮಠದ ಶ್ರೀ ಶಿವಲಿಂಗಜ್ಜಯ್ಯ ಮೂರ್ತಿಗೆ ಹಾಗೂ ಗ್ರಾಮದ ಆರಾಧ್ಯ ದೈವ  ಶ್ರೀ ಗುರು ಚನ್ನಬಸವೇ ಶ್ವರ ಸ್ವಾಮಿ ಮತ್ತು ಅಮ್ಮನವರಿಗೆ ಕರ್ಪೂ ರದಾರತಿ ಹಾಗೂ ಮಹಾಮಂಗಳಾರತಿ ಸಲ್ಲಿಸಲಾಯಿತು          ಬಂದ ಭಕ್ತಾದಿಗಳಿಗೆ ಶಶಿ ವಾಳ ಗ್ರಾಮದ ಲೇಟ್ ಶ್ರೀಮತಿ ರಾಮಕ್ಕ ಸಿದ್ದಪ್ಪ ಮತ್ತು ಮಕ್ಕಳು  ಮೊಮ್ಮಕ್ಕಳು ಬುರ್ಜಿ ಮನೆ ಇವರ ವತಿಯಿಂದ ದಾಸೋಹ ವ್ಯವಸ್ಥೆಯನ್ನು ಕಲ್ಪಿಸ ಲಾಗಿತ್ತು                   .ಮಾಡಾಳು ಕೊಪ್ಪಲು ಸೀತಾಪುರಸೇರಿದಂತೆ ಯರೆಹಳ್ಳಿಡಿ ಎಂ ಕುರ್ಕೆ ಶಶಿವಾಳ ರಾಂಪುರ ಪಿ ಹೊಸಳ್ಳಿ ವೈಜಿಹಳ್ಳಿ ಕಿತ್ತನಕೆರೆ ದೋಣನಕಟ್ಟೆ ಬೊಮ್ಮಸಮುದ್ರ ಕೆ ಶಂಕರನಹಳ್ಳಿ ಕಡಲ ಮಗೆ ಮುಂತಾದ ಗ್ರಾಮಗಳಿಂದ ಭಕ್ತರು ಆಗಮಿಸಿ ದೇವಿ ದರ್ಶನ ಪಡೆದು ಪುನೀತರಾ ದರು

Share This Article
Leave a Comment

Leave a Reply

Your email address will not be published. Required fields are marked *