ಸೆ.10 ಸಕಲೇಶಪುರದಲ್ಲಿ ಇ ಪೌತಿ ಖಾತೆ ಆಂದೋಲನ
ಸಕಲೇಶಪುರ: ಕೃಷಿ ಜಮೀನಿನ ಮಾಲಿಕರು ಮರಣ ಹೊಂದಿದ ನಂತರ ಪೌತಿ / ವಾರಸಾ ರೀತ್ಯ ಮಾಲಿಕತ್ವವು ಮೃತರ ಉತ್ತರಾಧಿಕಾರಿಗಳ ಹೆಸರಿಗೆ ಬದಲಾವಣೆ ಆಗದಿದ್ದಲ್ಲಿ ಅಂತಹಾ ಜಮೀನುಗಳ ಪೌತಿ / ವಾರಸಾ ಸ್ವರೂಪದ ಪ್ರಕ್ರಿಯೆಗಳನ್ನು ಸರಳೀಕೃತಗೊಳಿಸುವ ಉದ್ದೇಶದಿಂದಾಗಿ ಕರ್ನಾಟಕ ಸರ್ಕಾರ ಇ ಖಾತೆ ಆಂದೋಲನ ಹಮ್ಮಿಕೊಂಡಿದೆ.
ಈ ಸಂಬಂಧ ಸಕಲೇಶಪುರ ತಾಲೋಕು ವ್ಯಾಪ್ತಿಯಲ್ಲಿ ದಿನಾಂಕ : 10-09 – 20 25 ರಂದು ಪೌತಿ ಆಂದೋಲನ ಹಮ್ಮಿಕೊಳ್ಳಲಾಗಿದ್ದು ಮರಣ ಹೊಂದಿದ ಖಾತೆದಾರರ ಕುಟುಂಬಸ್ಥರು ಇಪೌತಿ ಖಾತೆ ಬದಲಾವಣೆಗೆ ತಮ್ಮ ತಮ್ಮ ಹೋಬಳಿ ನಾಡಕಛೇರಿಗಳಲ್ಲಿ ಈ ಕೆಳಕಂಡ ದಾಖಲಾತಿಗಳನ್ನು ನೀಡಿ ಅರ್ಜಿಗಳನ್ನು ತಕ್ಷಣವೇ ಸಲ್ಲಿಸಿ ಹಕ್ಕು ಬದಲಾವಣೆ ಮಾಡಿಕೊಳ್ಳಲು ಸಕಲೇಶಪುರ ತಹಸಿಲ್ದಾರ್ ಸುಪ್ರಿತಾ ತಿಳಿಸಿದ್ದಾರೆ.
ಅರ್ಜಿ ಜೊತೆ ಸಲ್ಲಿಸಬೇಕಾದ ದಾಖಲೆಗಳು. ಪ್ರಸ್ತುತ ಸಾಲಿನ ಪಹಣಿ . ವಂಶವೃಕ್ಷ. ಮೃತರ ಮರಣ ಪ್ರಮಾಣ ಪತ್ರ. ಮತ್ತು ಎಲ್ಲಾ ವಾರಸೂದಾರರ ಆದಾರ್ ಕಾರ್ಡ್
✍🏻 ಭರತ್ ಮಲ್ನಾಡ್