ಬೆಂಗಳೂರಿನ ಯಲಹಂಕ ತಾಲೂಕಿನ ಜಾಲ ಹೋಬಳಿ ಬಳಿ ಇದೆ ಶ್ರೀ ಶನೇಶ್ವರ ಸ್ವಾಮಿಯ ರಾಜಯೋಗ ಕ್ಷೇತ್ರ ಶಕ್ತಿ ಪೀಠ
ಶ್ರೀ ಶನೇಶ್ವರ ಸ್ವಾಮಿ ಎಂದರೆ ನವಗ್ರಹಗಳಲ್ಲಿ ಒಬ್ಬರಾದ ಶನಿದೇವ ಕರ್ಮಫಲದಾತ ನ್ಯಾಯದೇವರು ಅಂತಾನೂ ಕರೆಯುತ್ತಾರೆ
ಶನಿ ದೇವರ ಮುಖ್ಯ ವಿಶೇಷಗಳೆಂದರೆ
*ಸೂರ್ಯದೇವ ಮತ್ತು ಛಾಯಾದೇವಿಯ ಮಗ ಕೃಷ್ಣ ವರ್ಣದವರು ಕಾಗೆಯನ್ನು ವಾಹನವಾಗಿ ಹೊಂದಿದ್ದಾರೆ*
ಕಾರ್ಯ *ಒಬ್ಬರ ಒಳ್ಳೆ ಕೆಟ್ಟ ಕರ್ಮಕ್ಕೆ ತಕ್ಕಂತೆ ಫಲ ಕೊಡುವವರು ಅದಕ್ಕೆ ಕರ್ಮಫಲದಾತ ಶನಿ ಅಂತಾರೆ*
ಶನಿ ದೇವರಿಗೆ ಪ್ರಿಯವಾದ ದಿನ ಶನಿವಾರ ಈ ದಿನ ಕಪ್ಪು ಬಣ್ಣ ಎಳ್ಳು ಎಣ್ಣೆ ದಾನ ಮಾಡುವುದು ವಿಶೇಷ
ದೇವರಿಗೆ ಪ್ರಿಯವಾದ ವಸ್ತುಗಳು ಕಪ್ಪು ಎಳ್ಳು ಎಣ್ಣೆ ನೀಲಿ ಬಣ್ಣದ ಹೂವು ಕಬ್ಬಿಣ
ಇದಲ್ಲದೆ ರಾಜ್ಯದ ನಾನಾ ಭಾಗಗಳಲ್ಲಿ ಶ್ರೀ ಶನೇಶ್ವರ ಸ್ವಾಮಿಯ ಶಕ್ತಿಪೀಠಗಳು ಹೆಚ್ಚಾಗಿದ್ದು ಆಯಾ ಕ್ಷೇತ್ರಕ್ಕೆ ತಕ್ಕಂತೆ ಅಲ್ಲಿನ ವಿಶೇಷ ಆಶೀರ್ವಾದ ಶಕ್ತಿಯನ್ನು ಹೊಂದಿ ಭಕ್ತರಿಗೆ ನಾನಾ ರೀತಿಯಲ್ಲಿ ಆಶೀರ್ವದಿಸುತ್ತಿವೆ
ಮುಖ್ಯವಾಗಿ ಪ್ರತಿಯೊಬ್ಬ ಮನುಷ್ಯನಿಗೆ ತನ್ನ ಜೀವಿತ ಅವಧಿಯಲ್ಲಿ ಶನೇಶ್ವರ ಸ್ವಾಮಿಯು ತಮ್ಮ ರಾಶಿ ನಕ್ಷತ್ರಕ್ಕೆ ಪ್ರವೇಶ ಹೊಂದಿ ಹೋಗುತ್ತಾರೆ ಎಂಬುದು ನಂಬಿಕೆ ಇದೆ


ಇಂತಹ ಸಮಯದಲ್ಲಿ ಶ್ರೀ ಸ್ವಾಮಿಯಿಂದ ರಕ್ಷಣೆ ಪಡೆದುಕೊಂಡು ತಮ್ಮ ಜೀವನದ ಏಳಿಗೆಗಾಗಿ
ಓಂ ಶಂ ಶನೇಶ್ವರಾಯ ನಮಃ
108 ಬಾರಿ ಜಪಿಸಿದರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇದೆ
ಇದಲ್ಲದೆ ಶನಿದೋಷ ಇದ್ದವರಿಗೆ ಎಳ್ಳೆಣ್ಣೆ ಅಭಿಷೇಕ ಕಪ್ಪು ಬಟ್ಟೆ ದಾನ ಮಾಡುವುದು ಶ್ರೇಷ್ಠ ಅಂತ ಧಾರ್ಮಿಕ ನಂಬಿಕೆಯು ಸಹ ಇದೆ
ರಾಜ್ಯದಲ್ಲಿ ಇಂತಹ ಶನೇಶ್ವರ ಸ್ವಾಮಿಯ ಶಕ್ತಿ ಪೀಠಗಳು ಇತ್ತೀಚಿಗೆ ಭಕ್ತರ ನಾನಾ ಸಮಸ್ಯೆಗಳನ್ನು ಬಗೆಹರಿಸುತ್ತಾ ಹೆಚ್ಚು ಖ್ಯಾತಿ ಪಡೆದುಕೊಳ್ಳುತ್ತಿವೆ
ಇದರಲ್ಲಿ ಬೆಂಗಳೂರು ಯಲಹಂಕ ತಾಲೂಕಿನ ಜಾಲ ಹೋಬಳಿಯ ಬಂಡಿ ಕೊಡಿಗೆಹಳ್ಳಿ ಬಳಿ ಇರುವ ಶ್ರೀ ಶನೇಶ್ವರ ಸ್ವಾಮಿ ರಾಜಯೋಗ ಕ್ಷೇತ್ರ ಕಳೆದ 18 ವರ್ಷಗಳ ಹಿಂದೆ ಶ್ರೀ ಸ್ವಾಮಿಯ ಉದ್ಭವಿಸಿದ್ದು ಈಗ ಅದನ್ನು ನಾಲ್ಕು ವರ್ಷಗಳ ಹಿಂದೆ ಪ್ರತಿಷ್ಠಾಪನೆ ಮಾಡಿ 4 ವರ್ಷಗಳಿಂದ ಶ್ರಾವಣ ಮಾಸದಲ್ಲಿ ಲಕ್ಷದೀಪೋತ್ಸವ ಸಮಾರಂಭವನ್ನು ಗ್ರಾಮಸ್ಥರು ಎಲ್ಲಾ ಪಕ್ಷ ಬೇತ ಜಾತಿ ಭೇದವನ್ನು ಮರೆತು ಒಂದೆಡೆ ಸೇರಿ ಅತಿ ವಿಜೃಂಭಣೆಯಿಂದ ಈ ಸಮಾರಂಭವನ್ನು ನಡೆಸಿಕೊಂಡು ಬರುತ್ತಿದ್ದಾರೆ
ಈ ಬಾರಿ ಸೆಪ್ಟೆಂಬರ್ ಐದರಂದು ಕೊನೆಯ ಶ್ರಾವಣ ಮಾಸದ ಶನಿವಾರದಂದು ಶ್ರೀ ಆಂಜನೇಯ ಸ್ವಾಮಿ ಹಾಗೂ ಶ್ರೀ ಮಹಾಗಣಪತಿಯೊಂದಿಗೆ ನೆಲೆಸಿರುವ ಶ್ರೀ ಶನೇಶ್ವರ ಸ್ವಾಮಿಯ ಲಕ್ಷದೀಪೋತ್ಸವ ಸಮಾರಂಭವು ಶನಿವಾರ ನಡೆಯಲಿದ್ದು ಈ ಸಮಾರಂಭದಲ್ಲಿ ನಾಡಿನ ಮಂತ್ರಿ ಮಹೋದಯರು ಹಾಗೂ ಕೇಂದ್ರ ಸಚಿವರು ಶಾಸಕರುಗಳು ಹಾಗೂ ರಾಜಕೀಯ ಮುಖಂಡರುಗಳು ಸಂಘ ಸಂಸ್ಥೆಯ ಮುಖಂಡರು ಪಾಲ್ಗೊಳ್ಳುತ್ತಿದ್ದಾರೆ
ಶ್ರೀ ಕ್ಷೇತ್ರಕ್ಕೆ ಲಕ್ಷದೀಪೋತ್ಸವಕ್ಕೆ ಕೋಡಿ ಶ್ರೀಗಳ ಬೇಟಿ
ಸೆಪ್ಟೆಂಬರ್ 5ರಂದು ಶನಿವಾರ ನಡೆಯಲಿರುವ ಶ್ರೀ ಶನೇಶ್ವರ ಸ್ವಾಮಿಯ ಲಕ್ಷದೀಪೋತ್ಸವಕ್ಕೆ ನಾಡಿನ ಹೆಸರಾಂತ ಕಾಲಜ್ಞಾನದ ಪೀಠಾಧಿಪತಿಗಳು ಹಾಗೂ ದೇಶ ವಿದೇಶಗಳ ಭವಿಷ್ಯವನ್ನು ನುಡಿಯುವುದರಲ್ಲಿ ಹೆಸರುವಾಸಿಯಾಗಿರುವ ಕೋಡಿಮಠದ ಶ್ರೀ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಜಿಗಳು ಪಾಲ್ಗೊಳ್ಳುವುದು ಅತ್ಯಂತ ವಿಶೇಷಕರವಾಗಿದೆ ಗ್ರಾಮದ ಮುಖಂಡರು ತಿಳಿಸಿದ್ದಾರೆ
