ಸಕಲೇಶಪುರ : ಸಕಲೇಶಪುರ ತಾಲೂಕು, ಬೆಳಗೋಡು ಹೋಬಳಿಮಟ್ಟದ, ಪ್ರೌಢಶಾಲಾ ಕ್ರೀಡಾಕೂಟಕ್ಕೆ ಭವ್ಯ ಆರಂಭ,
ಬಾಳ್ಳುಪೇಟೆಯ ಶ್ರೀ ರಂಗನಾಥ ಪ್ರೌಢಶಾಲೆಯ ಸಂಯುಕ್ತಾಶ್ರಯದಲ್ಲಿ, ನಗರದ ಸುಭಾಷ್ ಮೈದಾನದಲ್ಲಿ 2025-26ನೇ ಸಾಲಿನ ಸಕಲೇಶಪುರ ತಾಲ್ಲೂಕು, ಬೆಳಗೋಡು ಹೋಬಳಿ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟಕ್ಕೆ ಭವ್ಯವಾದ ಆರಂಭವಾಯಿತು.
ಕಾರ್ಯಕ್ರಮವನ್ನು ಸಕಲೇಶಪುರ-ಆಲೂರು-ಕಟ್ಟಾಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಸಿಮೆಂಟ್ ಮಂಜು ಅವರ ಧರ್ಮಪತ್ನಿ ಶ್ರೀಮತಿ ಪ್ರತಿಭಾ ಮಂಜುನಾಥ್ ಉದ್ಘಾಟಿಸಿ, “ಕ್ರೀಡೆ ಮಾನವ ಜೀವನದಲ್ಲಿ ಶಿಸ್ತು, ಆರೋಗ್ಯ ಮತ್ತು ಸಹಕಾರದ ಮೌಲ್ಯಗಳನ್ನು ಬೆಳೆಸುವ ಅತಿ ಶ್ರೇಷ್ಠ ಸಾಧನ. ವಿದ್ಯಾರ್ಥಿಗಳು ಕ್ರೀಡೆಗೆ ಹೆಚ್ಚು ಪ್ರೋತ್ಸಾಹ ನೀಡಬೇಕು” ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಸಂದರ್ಭದಲ್ಲಿ ತಾಲೂಕು ಶಿಕ್ಷಣಾಧಿಕಾರಿಗಳು, ಸ್ಥಳೀಯ ಗಣ್ಯರು, ಸಮಾಜಮುಖಿ ಮುಖಂಡರು, ಶಾಲಾ ಶಿಕ್ಷಕರು ಹಾಗೂ ಅನೇಕ ವಿದ್ಯಾರ್ಥಿಗಳು ಹಾಜರಿದ್ದು ಕ್ರೀಡಾಕೂಟದ ಸಡಗರವನ್ನು ಮತ್ತಷ್ಟು ಹೆಚ್ಚಿಸಿದರು.
ಉದ್ಘಾಟನಾ ಸಮಾರಂಭದಲ್ಲಿ ವಿದ್ಯಾರ್ಥಿಗಳ ಪಥಸಂಚಲನ, ಸಾಂಸ್ಕೃತಿಕ ಕಚೇರಿ ಹಾಗೂ ರಾಷ್ಟ್ರಧ್ವಜಕ್ಕೆ ಗೌರವ ಸಮರ್ಪಣೆ ಎಲ್ಲರ ಮನ ಸೆಳೆಯಿತು.
ಗ್ರಾಮೀಣ ಭಾಗದಲ್ಲಿ ಪ್ರತಿಭಾವಂತ ಕ್ರೀಡಾಪಟುಗಳಿದ್ದು, ಅವರನ್ನು ಉತ್ತೇಜಿಸುವ ನಿಟ್ಟಿನಲ್ಲಿ ಮಹಿಳಾ ಮತ್ತು ಪುರುಷರಿಗೆ ತಾಲ್ಲೂಕು ಮಟ್ಟದ ಕ್ರೀಡಾಕೂಟ ಆಯೋಜನೆ ವಿದ್ಯಾರ್ಥಿಗಳಲ್ಲಿ ಉತ್ಸಾಹ ಮತ್ತು ಸ್ಪರ್ಧಾತ್ಮಕ ಮನೋಭಾವ ವ್ಯಕ್ತವಾಗಿದ್ದು, ಈ ಕ್ರೀಡಾಕೂಟ ಗ್ರಾಮೀಣ ಪ್ರತಿಭೆಗಳ ಉದಯಕ್ಕೆ ವೇದಿಕೆಯಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.
✍🏻 ಭರತ್ ಮಲ್ನಾಡ್
Home ಕ್ರೀಡೆ ಸಕಲೇಶಪುರ : ಸಕಲೇಶಪುರ ತಾಲ್ಲೂಕು, ಬೆಳಗೋಡು ಹೋಬಳಿ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟ 2025-26ನೇ ಸಾಲಿನ ಚಾಲನೆ