Home ರಾಜ್ಯ ಸಕಲೇಶಪುರದಲ್ಲಿ ಭಾರಿ ಮಳೆ

ಸಕಲೇಶಪುರದಲ್ಲಿ ಭಾರಿ ಮಳೆ

34
0

ಸಕಲೇಶಪುರ (ಹಾಸನ ಜಿಲ್ಲೆ): ಭಾರಿ ಮಳೆಯಿಂದಾಗಿ ತಾಲ್ಲೂಕಿನ ಐತಿಹಾಸಿಕ ಹಿನ್ನೆಲೆಯುಳ್ಳ ಮಂಜರಾಬಾದ್ ನಕ್ಷತ್ರಾಕಾರದ ಕೋಟೆಯ ಒಂದು ಭಾಗ ಶನಿವಾರ ತಡರಾತ್ರಿ ಕುಸಿದಿದೆ ಮುಂಜಾನೆ ಕಾವಲುಗಾರ ಸಿಬ್ಬಂದಿ ಕೆಲಸಕ್ಕೆ ಬಂದ ಸಂದರ್ಭದಲ್ಲಿ ಗುರುತಿಸಿದ್ದಾರೆ.
ಮಳೆಗಾಲ ಸಂದರ್ಭದಲ್ಲಿ ಮಲೆನಾಡಿನ ಒಂದೊಂದು ಭಾಗವು ಚೆಲುವಿನಿಂದ ಕಂಗೊಳಿಸುತ್ತವೆ.ಈ ಪೈಕಿ ಐತಿಹಾಸಿಕ ಹಿನ್ನಳೆಯುಳ್ಳ ಮಂಜ್ರಾಬಾದ್ ಕೋಟೆಯು ಒಂದು. ಈ ಬೃಹತ್ ಕೋಟೆಯು ಸಮುದ್ರ ಮಟ್ಟದಿಂದ 988 ಮೀಟರ್ ಎತ್ತರದಲ್ಲಿದೆ/ಸಮುದ್ರ ಮಟ್ಟದಿಂದ ಸುಮಾರು 3241 ಅಡಿ ಎತ್ತರದಲ್ಲಿ ಮೋಡಗಳಿಲ್ಲದೇ ಶುಭ್ರವಾಗಿರುವಾಗ ನೀವು ಇಲ್ಲಿಂದ ಅರಬ್ಬಿ ಸಮುದ್ರವನ್ನು ಸಹ ನೋಡಬಹುದಾಗಿದೆ ಸಕಲೇಶಪುರ ತಾಲೂಕು ಗಿರಿಧಾಮವಾಗಿದ್ದು, ಹಚ್ಚಹಸಿರು ಮತ್ತು ಸುಂದರ ಭೂದೃಶ್ಯಗಳೊಂದಿಗೆ ಪ್ರವಾಸಿಗರನ್ನು ಸೆಳೆಯುತ್ತದೆ
ಮೊದಲ ಹಂತವನ್ನು ಸಕಲೇಶಪುರ ತಾಲ್ಲೂಕು ಐಗೂರಿನ ಪಾಳೇಗಾರ ನಿರ್ಮಿಸಿದ ಎಂಬ ಮಾಹಿತಿ ಇದ್ದು,ನಂತರ ಟಿಪ್ಪುಸುಲ್ತಾನ್ ನಿಂದ ಪುನರ್ ನವೀಕರಣಗೊಂಡಿದೆ.
ಪುರಾತತ್ವ ಇಲಾಖೆಯು 1956 ರಿಂದ ಕೋಟೆಯ ಸಂರಕ್ಷಣಾ ಜವಾಬ್ದಾರಿಯನ್ನು ವಹಿಸಿಕೊಂಡಿದೆ.
ವರದಿ : ಭರತ್ ಮಲ್ನಾಡ್ ಎಚ್ ವಿ ನ್ಯೂಸ್ ಸಕಲೇಶಪುರ

LEAVE A REPLY

Please enter your comment!
Please enter your name here