

ಸಕಲೇಶಪುರ : “ಅಂತರರಾಷ್ಟ್ರೀಯ ಯೋಗ ದಿನಾಚರಣೆ” ಕಾರ್ಯಕ್ರಮದಲ್ಲಿ ಸಕಲೇಶಪುರ ಶಾಸಕರಾದ ಶ್ರೀಯುತ ಸಿಮೆಂಟ್ ಮಂಜು ಅವರು ಭಾಗವಹಿಸಿ
ಸರ್ವರಿಗೂ 12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಹಾರ್ದಿಕ ಶುಭಾಶಯಗಳನ್ನು ಕೋರಿದರು. ನಗರದ ಲಯನ್ಸ್ ಸೇವಾ ಸಂಸ್ಥೆ ಮಂದಿರದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಯೋಗ ಚೇತನ ಟ್ರಸ್ಟ್ ಮತ್ತು ಭಾರತೀಯ ಜನತಾ ಪಾರ್ಟಿ ವತಿಯಿಂದ ಆಯೋಜಿಸಿದ್ದ ಯೋಗಾಭ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಈ ವರ್ಷ ‘ಆರೋಗ್ಯಕ್ಯರ ವೃದ್ಧಾಪ್ಯಕ್ಕಾಗಿ ಯೋಗ’ ಎಂಬ ಘೋಷವಾಕ್ಯದಡಿ ಯೋಗ ದಿನವನ್ನು ಆಯೋಜಿಸಲಾಗುತ್ತಿದೆ.
ವಿಶ್ವಸಂಸ್ಥೆಯು 2015 ಜೂನ್ 21ರ ದಿನವನ್ನು ಅಂತಾರಾಷ್ಟ್ರೀಯ ಯೋಗ ದಿನವನ್ನಾಗಿ ಘೋಷಣೆ ಮಾಡಿದ್ದು, ಇದು ಭಾರತೀಯ ಪ್ರಾಚೀನ ಪರಂಪರೆಗೆ ದೊರೆತ ಮಹತ್ತರ ಜಾಗತಿಕ ಮನ್ನಣೆ ಎಂಬುದನ್ನು ನಾವು ಮರೆಯುವಂತಿಲ್ಲ.ದೈಹಿಕ ಆರೋಗ್ಯ ಮತ್ತು ಮಾನಸಿಕ ಶಾಂತಿ ನೀಡುವ ಯೋಗವು ಪ್ರಾಚೀನ ಭಾರತದ ಶ್ರೇಷ್ಠ ಕೊಡುಗೆ. ವರ್ತಮಾನ ಜಗತ್ತಿನ ಸ್ವಾಸ್ಥ್ಯ ಮತ್ತು ನೆಮ್ಮದಿಗೆ ಇರುವ ಏಕೈಕ ಮಾರ್ಗ ಯೋಗ ಒಂದೇ ಆಗಿದೆ .ಈ ದಿನಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದ್ದು, ಜಗತ್ತಿನಾದ್ಯಂತ ಒಟ್ಟು 2,500 ಯೋಗ ಕಾರ್ಯಕ್ರಮಗಳು ನಡೆಯಲಿವೆ. ಮೋದಿ ಅವರ ದೂರದೃಷ್ಟಿಯುಳ್ಳ ನಾಯಕತ್ವದಲ್ಲಿ ಯೋಗವು ಜಾಗತಿಕ ಮಟ್ಟದಲ್ಲಿ ಸಾಮೂಹಿಕ ಚಳವಳಿಯಾಗಿ ಬೆಳೆದಿದೆ. ಲಕ್ಷಾಂತರ ಜನರು ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ಯೋಗವನ್ನು ಅಳವಡಿಸಿಕೊಂಡಿದ್ದಾರೆ’ ಎಂದು ತಿಳಿಸಿದರು.
ಯೋಗ ಚೇತನ ಟ್ರಸ್ಟ್ ಅಧ್ಯಕ್ಷರಾದ ಶ್ರೀಯುತ S M ಲಕ್ಷ್ಮಿರಂಗನಾಥ್, ಉಪಾಧ್ಯಕ್ಷರಾದ ಶ್ರೀಯುತ ಕೆ.ಎಂ. ಬಸವರಾಜ್ ಪದಾಧಿಕಾರಿಗಳಾದ ಶ್ರೀಯುತ ಎಸ್. ಪಿ ಸತ್ಯನಾರಾಯಣ ನಾಯ್ಡ ಬಿಜೆಪಿ ತಾಲೂಕು ಅಧ್ಯಕ್ಷರಾದ ಶ್ರೀಯುತ ಅಶ್ವಥ್, ಶ್ರೀ ವಾಸವಿ ಶಾಲೆಯ ಮುಖ್ಯಸ್ಥರಾದ ಚೇತನ್ ಸರ್, ಲಯನ್ಸ್ ಸಂಸ್ಥೆ ಅಧ್ಯಕ್ಷರಾದ ಮಂಜುನಾಥ ಹಾಗೂ ಇತರೆ ಯೋಗ ಪಟುಗಳು,ತಾಲೂಕು ಬಿಜೆಪಿ ಮುಖಂಡರು ಮತ್ತು ಸಾರ್ವಜನಿಕರು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.
✍️ ಭರತ್ ಮಲ್ನಾಡ್