
ಕಡೂರು ತಾಲೂಕು ಸರಸ್ವತಿಪುರ ವಲಯ ಚಿಕ್ಕ ಪಟ್ಟಣಗೆರೆ ಕಾರ್ಯಕ್ಷೇತ್ರದಲ್ಲಿ ಅಮೃತ ಬಿಂದು ಜ್ಞಾನವಿಕಾಸ ಕೇಂದ್ರದಲ್ಲಿ ಬೀದಿ ನಾಟಕ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಈ ಕಾರ್ಯಕ್ರಮವನ್ನು ಕಡೂರು ತಾಲೂಕಿನ ಮಾನ್ಯ ಯೋಜನಾಧಿಕಾರಿಗಳಾದ ನಾಗವೇಣಿ ಮೇಡಂ ಅವರು ಒಕ್ಕೂಟದ ಅಧ್ಯಕ್ಷರಾದ ರೇಖಾ ಒಕ್ಕೂಟದ ಕಾರ್ಯದರ್ಶಿಯಾದ ನಾಗೇಶ್ ಹಾಗೂ ಮಲ್ಲಿಕಾರ್ಜುನ ಕಲಾತಂಡದ ಅಧ್ಯಕ್ಷರಾದ ಶಂಕ್ರಪ್ಪ ತಾಲೂಕು ಸಮನ್ವಯ ಅಧಿಕಾರಿಯಾದ ಭಾಗ್ಯ ಸೇವಾ ಪ್ರತಿನಿಧಿಯಾದ ಜ್ಯೋತಿ ಹಾಗೂ ಅಮೃತ ಬಿಂದು ಜ್ಞಾನವಿಕಾಸ ಕೇಂದ್ರದ ಸದಸ್ಯರುಗಳು ದೀಪ ಬೆಳಗುವ ಮೂಲಕ ಹಾಗೂ ಕಂಜಾರ ಬಾರಿಸುವ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು ಪ್ರಾಸ್ತಾವಿಕ ನುಡಿಯನ್ನು ಮಾನ್ಯ ಯೋಜನಾಧಿಕಾರಿಗಳು ಜ್ಞಾನವಿಕಾಸ ಕಾರ್ಯಕ್ರಮಗಳ ಬಗ್ಗೆ ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಸವಿಸ್ತಾರವಾದ ಮಾಹಿತಿ ನೀಡಿದರು ಒಕ್ಕೂಟದ ಪದಾಧಿಕಾರಿಗಳು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು ಹಾಗೂ ಮಲ್ಲಿಕಾರ್ಜುನ ನಾಟಕ ಕಲಾ ವೃಂದದವರು ಕಾರ್ಯಕ್ರಮದಲ್ಲಿ ಬಾಲ್ಯ ವಿವಾಹದಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಹಸಿ ಕಸ ಒಣ ಕಸ ವಿಲೇವಾರಿ ಬಗ್ಗೆ ಮಳೆ ನೀರು ಸಂರಕ್ಷಣೆ ಬಗ್ಗೆ ರೈತರ ಕೃಷಿ ಚಟುವಟಿಕೆ ಬಗ್ಗೆ ಗ್ರಾಮದ ಸ್ವಚ್ಛತೆಯ ಬಗ್ಗೆ ಪರಿಸರ ಸಂರಕ್ಷಣೆಯ ಬಗ್ಗೆ ಯೋಜನೆಯ ಕಾರ್ಯಕ್ರಮಗಳ ಬಗ್ಗೆ ರೂಪಕವಾಗಿ ಹಾಗೂ ಜಾನಪದ ಹಾಡುಗಳನ್ನು ಹೇಳುವ ಮೂಲಕ ಬೀದಿ ನಾಟಕವನ್ನು ಮಾಡುವ ಮೂಲಕ ಕಾರ್ಯಕ್ರಮವನ್ನು ಅನುಷ್ಠಾನ ಮಾಡಿದರು