ಭಾವಸಾರ ಕ್ಷತ್ರಿಯ ಅಭಿವೃದ್ಧಿ ನಿಗಮ ಪ್ರಾರಂಭಕ್ಕೆ ಸರ್ಕಾರಕ್ಕೆ ಒತ್ತಾಯ

ಉಮೇಶ್ ಬಾಣಾವರ
Disclosure: This website may contain affiliate links, which means I may earn a commission if you click on the link and make a purchase. I only recommend products or services that I personally use and believe will add value to my readers. Your support is appreciated!

ಭಾವಸಾರ ಕ್ಷತ್ರಿಯ ಅಭಿವೃದ್ಧಿ ನಿಗಮ ಪ್ರಾರಂಭಕ್ಕೆ ಸರ್ಕಾರಕ್ಕೆ ಒತ್ತಾಯ

ರಾಜ್ಯದಲ್ಲಿ ಸುಮಾರು 25 ಲಕ್ಷಕ್ಕೂ ಅಧಿಕ  ಮಂದಿ ಮತದಾರರನ್ನು ಹೊಂದಿರುವ  ಭಾವಸಾರ ಕ್ಷತ್ರಿಯ ಜನಾಂಗಕ್ಕೆ  ಕೂಡಲೇ  ಅಭಿವೃದ್ಧಿ ನಿಗಮವನ್ನು ಸ್ಥಾಪಿಸಲು  ಕರ್ನಾಟಕ ಸರ್ಕಾರ ಮುಂದಾಗ ಬೇಕೆಂದು  ಭಾವಸಾರ ಕ್ಷತ್ರಿಯ ರಾಷ್ಟ್ರೀಯ ಯುವ ಅಧ್ಯಕ್ಷರಾದ  ಮಹೇಶ್. ಚ ತೇಲ್ಕರ್ ಸರ್ಕಾರವನ್ನು ಒತ್ತಾಯಿಸಿದ್ದಾರೆ

ಉದಯವಾಹಿನಿ ಪತ್ರಿಕೆಯೊಂದಿಗೆ ಮಾತನಾಡಿದ ಅವರು ರಾಜ್ಯದಲ್ಲಿ  ಪ್ರತಿಯೊಂದು ಜಿಲ್ಲೆಯ ತಾಲೂಕು ಗ್ರಾಮ  ಹಳ್ಳಿ  ಹಳ್ಳಿಗಳಲ್ಲಿಯೂ ಸಹ  ಸಮುದಾಯದ ನಾಗರಿಕರು  ವಾಸಿಸುತ್ತಿದ್ದು  ಬಹುತೇಕ ಶಾಂತಿಯುತ ಸಮಾಜ ವಾಗಿದ್ದು  ಹೆಚ್ಚಾಗಿ ಟೈಲರಿಂಗ್ ವೃತ್ತಿಯಿಂದ ತಮ್ಮ ಜೀವನ ನಡೆಸುತ್ತಿದ್ದು  ಸರ್ಕಾರದ ಯೋಜನೆಗಳು ಮತ್ತು  ಸರ್ಕಾರದಿಂದ  ತಮ್ಮ ಕುಟುಂಬಗಳಿಗಾಗಲಿ ತಮ್ಮ ಮಕ್ಕಳಿಗಾಗಲಿ ಯಾವುದೇ ಸೌಲಭ್ಯಗಳು ದೊರಕದೆ  ವಂಚಿತರಾಗಿ ಬದುಕುತ್ತಿದ್ದಾರೆ  ಇಷ್ಟಲ್ಲದೆ ಸಮುದಾಯದ ವತಿಯಿಂದ  ರಾಜ್ಯದಲ್ಲಿ ಒಬ್ಬ ಶಾಸಕರು ಅಥವಾ ಸಚಿವರು ಸಹ  ಇರುವುದಿಲ್ಲ  ನೂತನ ಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಅವರು  ನಮ್ಮ ಭಾವಸಾರ ಕ್ಷತ್ರಿಯ ಸಮುದಾಯಕ್ಕೆ  ಭಾವಸಾರ ಕ್ಷತ್ರಿಯ ಅಭಿವೃದ್ಧಿ ನಿಗಮವನ್ನು ಘೋಷಿಸಬೇಕೆಂದು  ಕೂಡಲೇ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ  ರಾಜ್ಯದ 25 ಲಕ್ಷಕ್ಕೂ ಹೆಚ್ಚು ಭಾವಸಾರ ಕ್ಷತ್ರಿಯ ಸಮಾಜದ  ಸಮಾಜ ಬಾಂಧವರ ಪರವಾಗಿ  ಹಾಗೂ ಸಮುದಾಯದ ಮುಖಂಡರೊಂದಿಗೆ  ಬೇಡಿಕೆ ಇಡಲಾಗುವುದೆಂದು  ರಾಷ್ಟ್ರೀಯ ಭಾವಸಾರ ಕ್ಷತ್ರಿಯ ಸಮಾಜದ ಯುವ ಮೋರ್ಚಾ ಅಧ್ಯಕ್ಷರಾದ  ಮಹೇಶ್. ಚ.ತೇಲಕರ್  ಪತ್ರಿಕೆಗೆ ತಿಳಿಸಿದ್ದಾರೆ

Share This Article
Leave a Comment

Leave a Reply

Your email address will not be published. Required fields are marked *