ಸಹಕಾರ ಸಂಘದ ಅಧ್ಯಕ್ಷರಾಗಿದ್ದ ಗಂಡಸಿ ಜಗದೀಶ್ ಅವರ ನಿಧನದ ಬಳಿಕ ಸಂಘದ ಚಟುವಟಿಕೆಗಳನ್ನು ಮುಂದುವರಿಸುವ ನಿಟ್ಟಿನಲ್ಲಿ ಸರ್ವ ಸದಸ್ಯರ ಒಮ್ಮತದಿಂದ ಶ್ರೀ ಮತಿ. ಶೃತಿ ಮೋಹನ್ ಅವರು ಅವಿರೋಧವಾಗಿ ಇಂದು ಆಯ್ಕೆಯಾಗಿದ್ದಾರೆ .
ಅಧ್ಯಕ್ಷರಾಗಿ ಅಧಿಕಾರವಹಿಸಿ ಮಾತನಾಡಿದ ಶ್ರೀಮತಿ ಶ್ರುತಿ ಅವರು ಎಲ್ಲಾ ನಿರ್ದೇಶಕರ ಮಾರ್ಗದರ್ಶನದಲ್ಲಿ ಸಮಾಜದ ಮುಖಂಡರ ಸಹಭಾಗಿತ್ವದೊಂದಿಗೆ ಸಂಗೊಳ್ಳಿ ರಾಯಣ್ಣ ಪತ್ತಿನ ಸಹಕಾರ ಸಂಘವನ್ನು ಮುನ್ನಡೆಸುತ್ತೇನೆ ಸಂಸ್ಥೆಯ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪತ್ತಿನ ಸಹಕಾರ ಸಂಘದ ಗೌರವ ಅಧ್ಯಕ್ಷರು ಕೆ ಹೆಚ್ ಪುಟ್ಟಸ್ವಾಮಿ
ನಿರ್ದೇಶಕರುಗಳಾದ ಎ.ರಂಗಸ್ವಾಮಿ, ಗುರುಮೂರ್ತಿಸಿ ಕೆ, ಚಂದ್ರಶೇಖರ್ ಎಸ್ ಆರ್ ,ಹಾಲಪ್ಪ ಟಿ ಕೆ , ನವೀನ್ ಕುಮಾರ್ ,ಧರ್ಮಶೇಖರ್ ,ಮಂಜೇಶ್ ,ನಾಗರಾಜ,ಎ ಎಸ್ ಕಮಲ ಯೋಗಿಶ್, ಸುಗುಣ ಶಂಕರ್, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪತ್ತಿನ ಸಹಕಾರ ಸಂಘದ ಸಿಬ್ಬಂದಿ ವರವಿವರ ಹೇಮ ಹೆಚ್ ಆರ್ , ಸಿದ್ದಪ್ಪ ನಗರಸಭಾ ಸದಸ್ಯರಾದ ಅವಿನಾಶ್ , ಕುರುಬ ಸಮಾಜದ ಮುಖಂಡ ಮಧು, ಮಹೇಂದ್ರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.