ಭಾವಸಾರ ನಿಗಮ ಪ್ರಾರಂಭಕ್ಕೆ ಸರ್ಕಾರಕ್ಕೆ ಮನವಿ  ವಿನಯ್ ತಾಂದ್ಲೇ*

ಉಮೇಶ್ ಬಾಣಾವರ
Disclosure: This website may contain affiliate links, which means I may earn a commission if you click on the link and make a purchase. I only recommend products or services that I personally use and believe will add value to my readers. Your support is appreciated!

*ಭಾವಸಾರ ನಿಗಮ ಪ್ರಾರಂಭಕ್ಕೆ ಸರ್ಕಾರಕ್ಕೆ ಮನವಿ  ವಿನಯ್ ತಾಂದ್ಲೇ*

*ಬೆಂಗಳೂರು ಉದಯವಾಹಿನಿ*

ವರದಿ   *ಉಮೇಶ್ ಬಾಣಾವರ*

ಕರ್ನಾಟಕ ರಾಜ್ಯದಲ್ಲಿರುವ  ಭಾವಸಾರ ಕ್ಷತ್ರಿಯ ಜನಾಂಗದ  ಸಮುದಾಯದ   ಜನರು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ  ತಾಲೂಕು  ಪಟ್ಟಣ ಗ್ರಾಮಗಳಲ್ಲಿಯೂ ಸಹ  ವಾಸಿಸುತ್ತಿದ್ದು  ಉತ್ತರ ಕರ್ನಾಟಕ ಹಾಗೂ  ಮೈಸೂರ ಕರ್ನಾಟಕ ಭಾಗಗಳಲ್ಲಿ   ವಿಧಾನಸಭಾ ಲೋಕಸಭಾ ಚುನಾವಣೆಯಲ್ಲಿ  ಹೆಚ್ಚಿನ ರೀತಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಾ ಬರುತ್ತಿದ್ದಾರೆ 

ಆದರೆ ಈ ಸಮುದಾಯವನ್ನು  ಇದುವರೆಗೂ ಸಹ  ಸರ್ಕಾರಗಳು ಗಮನಿಸಿದೆ ಇರುವುದು  ತುಂಬಾ ನೋವಿನ ಸಂಗತಿಯಾಗಿದೆ ಎಂದು ಕಾಂಗ್ರೆಸ್ ಯುವ ಮುಖಂಡರು  ಹಾಗೂ ಶಿವಮೊಗ್ಗ ಜಿಲ್ಲೆಯ  ಅಖಿಲ ಭಾರತ ಭಾವಸಾರ ಕ್ಷತ್ರಿಯ ಯುವ ಪರಿಷತ್ ಜಿಲ್ಲಾಧ್ಯಕ್ಷರು . ಶ್ರೀರಾಮ ಸೇವಾ  ಭಾವಸಾರ ಕ್ಷತ್ರಿಯ ಕ್ರೆಡಿಟ್ ಸೊಸೈಟಿ ಉಪಾಧ್ಯಕ್ಷರು ಆಗಿರುವ ವಿನಯ್ ತಾಂದ್ಲೇ ಯವರು ಯವರು   ವಿಷಾದ ವ್ಯಕ್ತಪಡಿಸಿದ್ದಾರೆ

ಈ ಹಿನ್ನೆಲೆಯಲ್ಲಿ  ರಾಜ್ಯದಲ್ಲಿ ಎಲ್ಲಾ ಜಿಲ್ಲೆಗಳಲ್ಲಿರುವ  ಭಾವಸಾರ ಕ್ಷತ್ರಿಯ ಸಮಾಜದ  ಸಮಾನ ನಮಸ್ಕಾರ   ಯುವ ಮುಖಂಡರೊಂದಿಗೆ  ಸಭೆ ಚರ್ಚೆಯನ್ನು ನಡೆಸಿ  ಎಲ್ಲ ಮುಖಂಡರೊಂದಿಗೆ   ಶೀಘ್ರದಲ್ಲಿಯೇ ನೂತನ ಮುಖ್ಯಮಂತ್ರಿ  ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ  ಭಾವಸಾರ ಅಭಿವೃದ್ಧಿ ನಿಗಮ  ಸ್ಥಾಪನೆಗೆ  ಒತ್ತಾಯ ಮಾಡಲಾಗುವುದೆಂದು  ತಿಳಿಸಿದರು

ಭಾವಸರ ಕ್ಷತ್ರಿಯ ಸಮಾಜದ  ಸಮಾಜ ಬಾಂಧವರು   ರಾಜ್ಯದ ಹಲವಾರು ಜಿಲ್ಲೆಗಳಲ್ಲಿ  ಟೈಲರಿಂಗ್ ವೃತ್ತಿಯನ್ನು ಆದರಿಸಿ  ಬಟ್ಟೆ ವ್ಯಾಪಾರ  ಇನ್ನು ಹಲವಾರು  ವ್ಯಾಪಾರ ಚಟುವಟಿಕೆಗಳನ್ನು ನಡೆಸುತ್ತಾ  ಸರ್ಕಾರಕ್ಕೆ  ತೆರಿಗೆ ರೂಪದಲ್ಲಿ ಆದಾಯವನ್ನು ನೀಡುತ್ತಾ  ಹಲವಾರು ವ್ಯಾಪಾರ ವಹಿವಾಟು  ಉದ್ಯಮಗಳನ್ನು ನಡೆಸುತ್ತಾ   ಯುವಜನರಿಗೆ ನಿರುದ್ಯೋಗವನ್ನು ಹೋಗಲಾಡಿಸಿ  ಉದ್ಯೋಗವನ್ನು ನೀಡುತ್ತಾ ಬರುತ್ತಿರುವ  ಈ ನಮ್ಮ ಸಮುದಾಯವನ್ನು ಗುರುತಿಸಿ  ಶೀಘ್ರದಲ್ಲಿಯೇ ಬಾವಸಾರ ಕ್ಷತ್ರಿಯ ಅಭಿವೃದ್ಧಿ ನಿಗಮವನ್ನು   ಸ್ಥಾಪನೆಗಾಗಿ   ಮನವಿ ಮಾಡಲಾಗುವುದೆಂದು   ಅಲ್ಲದೇ ರಾಜ್ಯದ ಹಲವಾರು ಜಿಲ್ಲೆಗಳಿಂದ   ಭಾವಸರ ಕ್ಷತ್ರಿಯ ಸಮಾಜದ ಯುವ ಮುಖಂಡರು ಈಗಾಗಲೇ ಸಂಪರ್ಕದಲ್ಲಿದ್ದು  ರಾಜ್ಯದ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ  ಭಾವಸಾರ ಕ್ಷತ್ರಿಯ ಸಮಾಜದ  ಸಮಾವೇಶವನ್ನು ನಡೆಸಿ ಇದರ ಮುಖಾಂತರ  ಮುಖ್ಯಮಂತ್ರಿ  ಡಿಕೆ ಶಿವಕುಮಾರ್ ರವರಿಗೆ ಹಾಗೂ ಹಿಂದುಳಿದ ವರ್ಗಗಳ ಸಚಿವರಿಗೆ . ರಾಜ್ಯದ 20 ಲಕ್ಷ ಭಾವಸಾರ ಕ್ಷತ್ರಿಯ ಸಮುದಾಯದ  ಪರವಾಗಿ ಮನವಿ ಮಾಡಲಾಗುವುದೆಂದು   ವಿನಯ್ ತಾಂದಲೆ   ಉದಯವಾಹಿನಿಗೆ ತಿಳಿಸಿದರು

Share This Article
Leave a Comment

Leave a Reply

Your email address will not be published. Required fields are marked *