Home ರಾಜಕಾರಣ ಶ್ರೀ ಬಿ.ಬಿ.ಶಿವಪ್ಪ ರವರ ಪುಣ್ಯಸ್ಮರಣೆ ದಿನದಂದು ಗೌರವ ನಮನಗಳು….ಭಾರತೀಯ ಜನತಾ ಪಕ್ಷ(ಬಿಜೆಪಿ)ದ ಹಿರಿಯ ಬಿಜೆಪಿ ಮುಖಂಡರು...

ಶ್ರೀ ಬಿ.ಬಿ.ಶಿವಪ್ಪ ರವರ ಪುಣ್ಯಸ್ಮರಣೆ ದಿನದಂದು ಗೌರವ ನಮನಗಳು….ಭಾರತೀಯ ಜನತಾ ಪಕ್ಷ(ಬಿಜೆಪಿ)ದ ಹಿರಿಯ ಬಿಜೆಪಿ ಮುಖಂಡರು ಹಾಗೂ ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ಶ್ರೀ ಬಿಬಿ ಶಿವಪ್ಪನವರು,ಶ್ರೀ ಬಿ.ಬಿ.ಶಿವಪ್ಪ ಸೆಪ್ಟೆಂಬರ್ 27,1929 ರಂದು ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನಲ್ಲಿ ಜನಿಸಿದರು. ಅವರ ರಾಜಕೀಯ ಜೀವನವು ಕಾಂಗ್ರೆಸ್ಸಿನ ಕೆ.ಕಾಮರಾಜ್ ಮತ್ತುಮೊರಾರ್ಜಿದೇಸಾಯಿಯವರ ಆರಂಭಿಕ ಒಡನಾಟದಿಂದ ಪ್ರಾರಂಭವಾಯಿತು.ಬಿಜೆಪಿಗೆ ಸೇರಿದ ಶಿವಪ್ಪನವರು 1983ರಲ್ಲಿ ಎ.ಕೆ.ಸುಬ್ಬಯ್ಯನವರ ನಂತರ ಬಿಜೆಪಿ ಪಕ್ಷದ ಎರಡನೇ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದರು. 1984 ರ ಅವಧಿಯಲ್ಲಿ, ಶಾಸಕಾಂಗದಿಂದ ವಿಧಾನಪರಿಷತ್ತಿಗೆ ಆಯ್ಕೆಯಾದರು ಮತ್ತು 1990 ರವರೆಗೆ ಸದನದ ಸದಸ್ಯರಾಗಿ ಮುಂದುವರೆದರು. ಬಿಜೆಪಿಯ ಅನುಭವಿ ಬಿ.ಬಿ. ಶಿವಪ್ಪನವರು ನಂತರ ಸಕಲೇಶಪುರದಿಂದ ಚುನಾವಣೆಗೆ ಸ್ಪರ್ಧಿಸಿದರು ಮತ್ತು 1994 ರಲ್ಲಿ ಮೊದಲ ಬಾರಿಗೆ ಆಯ್ಕೆಯಾದರು. ಅವರು 1999 ರಲ್ಲಿ ಮರು ಆಯ್ಕೆಯಾದರು ಮತ್ತು 2004 ರವರೆಗೆ ಸದಸ್ಯರಾಗಿ ಮುಂದುವರೆದರು88 ವರ್ಷದ ಶಿವಪ್ಪ ಅವರು ರಾಜ್ಯ ಬಿಜೆಪಿ ಘಟಕದ ಹಲವಾರು ಹಿರಿಯ ನಾಯಕರಿಗೆ ಮಾರ್ಗದರ್ಶಕರಾಗಿದ್ದರು ಮತ್ತು ಕರ್ನಾಟಕದಲ್ಲಿ ಪಕ್ಷದ ಸಂಸ್ಥಾಪಕರಲ್ಲಿ ಒಬ್ಬರಾಗಿದ್ದರು. 1980ರ ದಶಕದಲ್ಲಿ ಮಾಜಿ ಪಕ್ಷದ ಅಧ್ಯಕ್ಷರಾದ ಬಿ.ಎಸ್.ಯಡಿಯೂರಪ್ಪನವರ ಉದಯಕ್ಕೂ ಮುನ್ನವೇ ರಾಜ್ಯದಲ್ಲಿ ಬಿಜೆಪಿ ಇನ್ನೂ ಉಗಮದ ಹಂತದಲ್ಲಿದ್ದಾಗ ಪಕ್ಷವನ್ನು ಕಟ್ಟಿ ಬೆಳೆಸಿದ ಕೀರ್ತಿ ಶಿವಪ್ಪನವರಿಗೆ ಸಲ್ಲುತ್ತದೆ.ಕರ್ನಾಟಕ ಬಿಜೆಪಿ ಇತಿಹಾಸಕ್ಕೆ ಮೆರುಗು ಮತ್ತು ಶೋಭೆ ತಂದು ಕೊಟ್ಟವರು ಬಿ ಬಿ ಶಿವಪ್ಪನವರು ಇಂದಿನವರಂತೆ ಅವರು ಪಕ್ಷದಿಂದ ಏನೂ ಬಯಸಿದವರಲ್ಲ. ಪಕ್ಷ ಸಂಘಟನೆಗಾಗಿ ಮನೆ ಮಾರಿಕೊಂಡರಲ್ಲದೇ ತನು,ಮನ, ಧನವನ್ನು ಸಮರ್ಪಣೆ ಮಾಡಿದ ಸಜ್ಜನ ರಾಜಕಾರಣಿ. ಪಕ್ಷದ ವರಿಷ್ಠ ನಾಯಕರಾಗಿದ್ದ ಶ್ರೀ ದೀ ಅಟಲ್ ಬಿಹಾರಿ ವಾಜಪೇಯಿ ಅವರು ಹಾಗ ಕರ್ನಾಟಕಕ್ಕೆ ಬಂದರೆ ಉಳಿದುಕೊಳ್ಳುತ್ತಿದ್ದು ಬೆಂಗಳೂರಿನ ಶಾಂತಿನಗರದಲ್ಲಿದ್ದ ಶಿವಪ್ಪನವರ ಮನೆಯಲ್ಲೇ.ಬಿಜೆಪಿಯ ನಾಯಕರಾದ ವೆಂಕಯ್ಯನಾಯ್ಡು, ಅನಂತ್ ಕುಮಾರ್, ಯಡಿಯೂರಪ್ಪರಿಗೆ ಬಿಫಾರಂ ಕೊಟ್ಟಿದ್ದರು. ಪಕ್ಷದಿಂದ ಕೊಟ್ಟಿದ್ದ ಕಾರಿನಲ್ಲಿ ಶ್ರೀಯುತಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ ಅಡ್ವಾಣಿಯವರನ್ನು ರಾಜ್ಯಾದ್ಯಂತ ಸುತ್ತಾಡಿಸಿದ್ದರು ಅವೆಲ್ಲವೂ ಇಂದು ಸವಿ ನೆನಪು ಮಾತ್ರ.

45
0

ವರದಿ : ಭರತ್ ಮಲ್ನಾಡ್

LEAVE A REPLY

Please enter your comment!
Please enter your name here