ಅರಸೀಕೆರೆ ನಗರದಲ್ಲಿ ಸಂಭ್ರಮದ ವಾತಾವರಣ ಸತತ ನಾಲ್ಕು ಬಾರಿ ಜಯಗಳಿಸಿದ ಅರಸೀಕೆರೆಯ ಜನಮನ ಗೆದ್ದ ಶಾಸಕ ಕೆಎಂ ಶಿವಲಿಂಗೇಗೌಡರಿಗೆ ಮಂತ್ರಿ ಪದವಿ ಲಭಿಸಿದ ಸಂದರ್ಭದಲ್ಲಿ ಪಿಪಿ ವೃತ್ತದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚುವ ಮೂಲಕ ಸಂಭ್ರಮ ಆಚರಣೆ ಮಾಡಿಕೊಂಡ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು
ಅರಸೀಕೆರೆ ತಾಲೂಕಿಗೆ ಪ್ರಥಮ ಬಾರಿಗೆ ಮಂತ್ರಿ ಪದವಿ ಲಭಿಸಿದ ವಿಚಾರ ತಿಳಿಯುತ್ತಿದ್ದಂತೆ ಪಿಪಿ ವೃತದಲ್ಲಿ ಜಮಾಯಿಸಿದ ಕಾರ್ಯಕರ್ತರು ಮುಖಂಡರು ಅಭಿಮಾನಿಗಳು ಜಯ ಘೋಷಣೆಯೊಂದಿಗೆ ಸಂಭ್ರಮಿಸಿದರು ಈ ಸಂದರ್ಭದಲ್ಲಿ ಕಾರ್ಯಕರ್ತರು ಉದ್ದೇಶಿ ಮಾತನಾಡಿದ ಹಾಸನ ಜಿಲ್ಲಾ ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷರಾದ ಶ್ರೀಯುತ ವೆಂಕಟೇಶ್ ಚಲವಾದಿ ತಾಲೂಕಿನ ಅಲ್ಪಸಂಖ್ಯಾತ ದಲಿತ ಹಿಂದುಳಿದ ಹಾಗೂ ಎಲ್ಲಾ ಜನಾಂಗದ ಪ್ರಾಮಾಣಿಕ ಕಾರ್ಯಕರ್ತರ ಶ್ರಮದ ಫಲವಾಗಿ ಹಿಂದು ಅರಸಿಕೆರೆಗೆ ಸಚಿವ ಸ್ಥಾನ ಸಿಕ್ಕಿದ್ದು ನಮಗೆಲ್ಲರಿಗೂ ಅತಿವ ಸಂತೋಷವಾಗಿದೆ ಶಾಸಕರು ಅಭಿವೃದ್ಧಿ ಹರಿಕಾರರಾಗಿದ್ದು ಸಾಕಷ್ಟು ಅರಸಿಕೆರೆ ತಾಲೂಕನ್ನು ಮಾದರಿ ತಾಲೂಕಾಗಿ ಮಾರ್ಪಡಿಸಿದ್ದಾರೆ ಈಗ ಸಚಿವ ಸ್ಥಾನ ಲಭಿಸಿರುವ ಸಂದರ್ಭದಲ್ಲಿ ಇಡೀ ರಾಜ್ಯಕ್ಕೆ ಉತ್ತಮ ಆಡಳಿತವನ್ನು ನೀಡಿ ನಮ್ಮ ಅರಸೀಕೆರೆಯ ಜನತೆಗೆ ಕೀರ್ತಿ ತರುತ್ತಾರೆಂದು ಜನರ ಆಶಯವಾಗಿದೆ ಜಿಲ್ಲೆಯಲ್ಲಿ ಪಕ್ಷವನ್ನು ಸಂಘಟಿಸುತ್ತಾ ಮುಂದಿನ ಎಲ್ಲಾ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳ ಜಯಕ್ಕೆ ಎಲ್ಲಾ ಜಿಲ್ಲಾ ನಾಯಕರ ಸಹಕಾರದೊಂದಿಗೆ ಮುನ್ನಡೆಯಲಿ ಎಂದು ತಿಳಿಸಿದರು
ಶಿವಲಿಂಗೇಗೌಡರಿಗೆ ಸಚಿವ ಸ್ಥಾನ ಪಟಾಕಿ ಸಿಡಿಸಿ ಸಂಭ್ರಮ
Leave a Comment
