ಲಕ್ಷ್ಮಿ ದೇವರ ಹಳ್ಳಿಯ ಶ್ರೀ ಅಮ್ಮನವರ ಆಷಾಢ ಮಾಸದ ವಿಶೇಷ ಪೂಜಾ ಕಾರ್ಯಕ್ರಮ. ಅರಸೀಕೆರೆ ತಾಲೂಕು ಸೂಳೆಕೆರೆ ಗೇಟ್ ಲಕ್ಷ್ಮಿ ದೇವರ ಹಳ್ಳಿಯ ಶ್ರೀ ಚೌಡೇಶ್ವರಿ ದೇವಿ ಯವರ ಆಷಾಢ ಮಾಸದ ವಿಶೇಷ ಪೂಜಾ ಕಾರ್ಯಕ್ರಮವು ಸೋಮವಾರ ಮತ್ತು ಮಂಗಳವಾರ ನಡೆಯುತ್ತಿದ್ದು ಇಂದು ಸಂಜೆ ರಾತ್ರಿ 8 ಗಂಟೆಗೆ ಮಹಾ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಇಂದು ದೇವಾಲಯದ ಶ್ರೀ ಗುರುವೇಗೌಡರ ವಂಶಸ್ಥರು ಹೊನ್ನೇನಳ್ಳಿ ಮತ್ತು ಲಕ್ಷ್ಮಿದೇವರಳ್ಳಿಯ ಗ್ರಾಮಸ್ಥರು ತಿಳಿಸಿದ್ದಾರೆ ಈ ಅದ್ದೂರಿ ಧಾರ್ಮಿಕ ಸಮಾರಂಭದಲ್ಲಿ ಅರಸೀಕೆರೆ ತಾಲೂಕಿನ ಕೆಜಿ ಅಗ್ರಹಾರ ಗ್ರಾಮದ ಕೆಂಚಪ್ಪ ದೇವರು ಚನ್ನರಾಯಪಟ್ಟಣದ ಶ್ರೀ ತಗ್ಯಮ್ಮ ದೇವಿ ಲಕ್ಷ್ಮಿ ದೇವರ ಅಳಿಯ ಕೆಂಚಪ್ಪ ಸ್ವಾಮಿ ಕೊಡಮ್ಮ ದೇವಿ ಕೆಜಿ ಅಗ್ರಹಾರ. ಹೊನ್ನೇನಹಳ್ಳಿಯ ಶ್ರೀ ಮಲ್ಲಿಕಾರ್ಜುನ ಸ್ವಾಮಿ. ಲಕ್ಷ್ಮಿದೇವರ ಹಳ್ಳಿಯ ಶ್ರೀ ಲಕ್ಕಮ್ಮ ದೇವಿ ದೇವಿ ದೇವತೆಗಳು ಅದ್ದೂರಿ ಧಾರ್ಮಿಕ ಸಮಾರಂಭದಲ್ಲಿ ಭಾಗವಹಿಸಲಿವೆ. ಸಂಜೆ ನಡೆಯುವ ಮಹಾ ಅನ್ನ ಸಂತರ್ಪಣೆ ಕಾರ್ಯಕ್ರಮದಲ್ಲಿ ಸಹಸ್ರಾರು ಜನರು ಭಕ್ತಾದಿಗಳು ಪಾಲ್ಗೊಂಡು ದೇವರ ಭಕ್ತಿಯಲ್ಲಿ ತಲ್ಲೀನರಾಗಲಿದ್ದಾರೆ