ಅರಸೀಕೆರೆಯ ಸ .ಪ್ರ .ದರ್ಜೆ ಕಾಲೇಜಿನಲ್ಲಿಕನ್ನಡ ನುಡಿ ಹಬ್ಬ

ಉಮೇಶ್ ಬಾಣಾವರ
Disclosure: This website may contain affiliate links, which means I may earn a commission if you click on the link and make a purchase. I only recommend products or services that I personally use and believe will add value to my readers. Your support is appreciated!

ಸ .ಪ್ರ .ದರ್ಜೆ ಕಾಲೇಜಿನಲ್ಲಿಕನ್ನಡ ನುಡಿ ಹಬ್ಬ
ಅರಸೀಕೆರೆ ನಗರದ ಹೊರ ವಲಯದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಕರ್ನಾಟಕ ರಾಜ್ಯ ಬರಹಗಾರರ ಸಂಘ ತಾಲೂಕು ಘಟಕ ಅರಸೀಕೆರೆ ಇವರ ಸಹಯೋಗದೊಂದಿಗೆ ಕನ್ನಡ ನುಡಿ ಹಬ್ಬ ಆಚರಿಸಲಾಯಿತು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ. ಎಸ್. ನಾರಾಯಣ್ ಅವರು ಕನ್ನಡ ಶ್ರೇಷ್ಠವಾದ ಭಾಷೆ ಈ ನಾಡಿನಲ್ಲಿ ಹುಟ್ಟಿದ ನಾವೇ ಧನ್ಯರು ನಮ್ಮ ಕಾಲೇಜಿನಲ್ಲಿ ನಿರಂತರವಾಗಿ ಕನ್ನಡ ನಾಡು ನುಡಿಯನ್ನು ಪ್ರತಿಬಿಂಬಿಸುವ ಕಾರ್ಯಕ್ರಮಗಳು ಪ್ರತಿ ವರ್ಷ ನಡೆಯುತ್ತವೆ ಕನ್ನಡವೆಂದರೆ ಅದೊಂದು ಭಾಷೆಯಲ್ಲ ಸಂಸ್ಕೃತಿ, ಜೀವನ ವಿಧಾನ ನಾವೆಲ್ಲರೂ ಕನ್ನಡಿಗರಾಗಿ ಬದುಕೋಣ ಎಂದು ಹೇಳಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬರಹಗಾರರ ಸಂಘದ ತಾಲೂಕು ಅಧ್ಯಕ್ಷ ಡಾ. ಬಸವರಾಜು ಕನ್ನಡವನ್ನು ಉಳಿಸಲು ಹೋರಾಡಬೇಕಿಲ್ಲ ಕನ್ನಡಿಗರಾದ ನಾವು ಪರಿಣಾಮಕಾರಿಯಾಗಿ ಕನ್ನಡವನ್ನು ಬಳಸಬೇಕು ಆಗ ಮಾತ್ರ ಕನ್ನಡ ಉಳಿಸಲು ಬೆಳೆಸಲು ಸಾದ್ಯ ಇಂಗ್ಲಿಷ್ ವ್ಯಾಮೋಹ ಕನ್ನಡಕ್ಕೆ ಮಾರಕವಾಗದಿರಲಿ ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ಸಾಕಷ್ಟು ಅವಕಾಶಗಳಿವೆ ಪರಿಶ್ರಮ ದಿಂದ ಪ್ರಯತ್ನಿಸಿ ಎಂದು ಕರೆ ನೀಡಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ. ಕುಮಾರ್ ಅವರು ನ್ಯಾಯಾಂಗ, ಬ್ಯಾಂಕಿಂಗ್, ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಕನ್ನಡವನ್ನು ಪರಿಣಾಮಕಾರಿಯಾಗಿ ಬಳಸಿದಾಗ ಕನ್ನಡ ಭಾಷೆ ಮತ್ತಷ್ಟು ಬೆಳೆಯಲು ಸಾದ್ಯ ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕ. ರಾ. ವೆ. ತಾಲೂಕು ಅಧ್ಯಕ್ಷ ಕಿರಣ್ ಕುಮಾರ್ ಕನ್ನಡ ನೆಲ ಜಲ ಸಂಸ್ಕೃತಿಗೆ ಧಕ್ಕೆಯಾದರೆ ಸಹಿಸಲು ಸಾದ್ಯವಿಲ್ಲ ಕನ್ನಡ ಶಾಲಾ ಕಾಲೇಜುಗಳಿಗೆ ಹೆಚ್ಚಿನ ಸೌಲಭ್ಯ ಸಿಗುವಂತಾಗಬೇಕು ನಾವೆಲ್ಲರೂ ಕನ್ನಡ ಸಂಸ್ಕೃತಿ ಉಳಿಸುತ್ತಾ  ಸ್ವಾಭಿಮಾನದಿಂದ ಬದುಕೋಣ ಎಂದರು.  ಕಾರ್ಯಕ್ರಮದ ಮುಖ್ಯ ಭಾಷಣಕಾರರಾಗಿ ಆಗಮಿಸಿದ ಕೆ. ಸಿ. ನಟರಾಜ್ ಅವರು ಕನ್ನಡ ನಾಡು ನುಡಿಯ ಪ್ರಾಚೀನತೆಯ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದರೆ ಪಂಪ, ರನ್ನ, ಕುಮಾರವ್ಯಾಸ, ಶರಣರು, ದಾಸಸಾಹಿತ್ಯದ ವಿಶೇಷತೆಯನ್ನು ಸ್ವಾರಸ್ಯಕರವಾಗಿ ವಿವರಿಸಿದರು. ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯ ಚಂದ್ರೇಗೌಡರು ಕನ್ನಡ ಜಾನಪದ ಸಾಹಿತ್ಯದ ಮಹತ್ವವನ್ನು ತಿಳಿಸುವಜೊತೆಗೆ ತಮ್ಮ ಶಿಷ್ಯ ಬಳಗ ಚಿಕ್ಕೂರು ಕಲಾತಂಡದೊಂದಿಗೆ ಕೋಲಾಟ ಪ್ರದರ್ಶನ ನೀಡಿದರೆ. ಶಿಕ್ಷಕರು ಹಾಡುಗಾರರೂ ಆದ ಪಾಜಿಲ್ ಅಹಮದ್ ಖಾನ್ ಅವರು ಕನ್ನಡ ನಾಡು ನುಡಿ ಪ್ರತಿಬಿಂಬಿಸುವ ಹಾಡುಗಳನ್ನು ಹಾಡಿ ರಂಜಿಸಿದರು. ಕಾಲೇಜಿನ ವಿದ್ಯಾರ್ಥಿಗಳು ಸಾಂಪ್ರದಾಯಿಕ ಉಡುಗೆ ಧರಿಸಿ  ಸಡಗರದಿಂದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದರು.ಡಾ. ಹರೀಶ್ ಕುಮಾರ್ ಎಲ್ಲರಿಗೂ ಸ್ವಾಗತ ಕೋರಿದರು ಉಪನ್ಯಾಸಕ ರವಿ ಎಲ್ಲರನ್ನು ವಂದಿಸಿದರು ವಿದ್ಯಾರ್ಥಿಗಳಾದ ಕಲಾವತಿ ಹಾಗೂ ಚಂದ್ರ ಶೇಖರ ನಿರೂಪಣೆ ಮಾಡಿದರು. ಪ್ರೊ. ಶಿವಕುಮಾರ್ ಪ್ರೊ. ಚಿತ್ರಕಲಾ ಉಪನ್ಯಾಸಕರಾದ  ಹರೀಶ್ ರಾಘವೇಂದ್ರ ಡಾ. ಸುನೀಲ್ ಡಾ. ರಾಜೇಶ್ ಖನ್ನಾ ಮಲ್ಲಿಕಾರ್ಜುನ ಪ್ರಕಾಶ್ ಪಿಂಟು ರತ್ನಮ್ಮ ಗಂಗಾ ವೀಣ ಪ್ರತಿಭಾ ಮೋಹನ್ ಸೇರಿದಂತೆ ಎಲ್ಲಾ ಉಪನ್ಯಾಸಕರು  ಭಾಗವಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *