ಅರಸೀಕೆರೆ ನಾಡಿನಾದ್ಯಂತ ಗಣಪನನ್ನು ಹೊತ್ತು ಮೆರೆಸಲು ಭಕ್ತರು ಸಿದ್ಧತೆಯಲ್ಲಿ ತೊಡಗಿದ್ದರೆ ಇತ್ತ ತಾಲೂಕಿನ ಮಾಡಾಳು ಗ್ರಾಮದಲ್ಲಿ ಮೂಲಸ್ಥಾನ ಸ್ವರ್ಣ ಗೌರಮ್ಮ ದೇವಿ ಸೇವಾ ಸಮಿತಿಯವರು ಗಣಪತಿ ಅಮ್ಮ ಗೌರಮ್ಮದೇವಿಯನ್ನು ದರ್ಬಾರಿನಲ್ಲಿ ಮೆರೆಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ರಾಜ್ಯದ ಲಕ್ಷಾಂತರ ಮಂದಿ ಭಕ್ತರ ಆರಾಧ್ಯ ದೇವತೆ ಹಾಗೂ ಶಕ್ತಿ ಸ್ವರೂಪಿಣಿ ಎಂದೇ ಮನೆ ಮನೆ ಮಾತಾಗಿರುವ ಮಾಡಾಳು ಮೂಲಸ್ಥಾನ ಸ್ವರ್ಣ ಗೌರಮ್ಮನವರ 166ನೇ ವರ್ಷದ ಜಾತ್ರಾ ಮಹೋತ್ಸವಕ್ಕೆ ಸೋಮವಾರ ಚಾಲನೆ ದೊರೆತಿದೆ ಸಂಪ್ರದಾಯದಂತೆ ಸುಕ್ಷೇತ್ರ ಹಾರನಹಳ್ಳಿ ಕೋಡಿಮಠದ ಪೂಜ್ಯ ಗುರುಗಳು ದೇವಿಯ ಮೂರ್ತಿಯನ್ನು ಸಿದ್ದ ಪಡಿಸುವ ಮೃತ್ತಿಕೆಗೆ ಪೂಜೆ ಸಲ್ಲಿಸುವ ವಾಡಿಕೆ ಬಹಳ ಹಿ೦ದಿನಿಂದಲೂ ನಡೆದುಕೊಂಡು ಬಂದಿದೆ ಅದರಂತೆ ಇಂದು ಮೂಲ ಸನ್ನಿದಿಯಲ್ಲಿ ಸುಕ್ಷೇತ್ರ ಕೋಡಿಮಠದ ಉತ್ತರಾದಿಕಾರಿಗಳಾದ ಚೇತನ್ ಮುರಿದೇವರ ಸಾನಿಧ್ಯದಲ್ಲಿ ಧಾರ್ಮಿಕ ವಿಧಿ ವಿಧಾನಗಳಿಂದ ಮಹಿಳೆಯರು ಪೂಜೆ ಸಲ್ಲಿಸಿದರು ನಂತರ ಭಕ್ತರೊಡಗೂಡಿ ಶ್ರೀಗಳು ಪಾದಯಾತ್ರೆಯಲ್ಲಿ ಗ್ರಾಮದ ಹೊರ ಭಾಗದಲ್ಲಿರುವ ಶ್ರೀ ಪಂಚಲಿಂಗೇಶ್ವರ ಸ್ವಾಮಿ ದೇವಾಲಯದ ಮುಂಭಾಗ ಇರುವ ತೆಂಗಿನ ತೋಟದ ಮಧ್ಯೆ ಇರುವ ಜಾಗದಲ್ಲಿ ಅಮ್ಮನವರ ಮೂರ್ತಿ ತಯಾರಿಕೆಗೆ ಬೇಕಾಗುವ ಮೃತ್ತಿಕೆಯನ್ನಶ್ರದ್ಧಾ ಭಕ್ತಿಯಿಂದ ಎರಡು ಬಿದಿರು ಕುಕ್ಕೆಯಲ್ಲಿ ಸಂಗ್ರಹಿಸಿ ಪಾದಯಾತ್ರೆಯಲ್ಲಿ ಹೊತ್ತು ಪುನಹ ಮೂಲ ಸನ್ನಿಧಿಗೆ ಹೊತ್ತು ತಂದರು ಈ ಸಂದರ್ಭದಲ್ಲಿ ಮಾತನಾಡಿದ ಚೇತನ್ ಮುರಿದೇವರು ಕೋಡಿಮಠದ ಹಿರಿಯ ಗುರುಗಳ ಶಿವಲಿಂಗ ಅಜ್ಜಯ್ಯ ಅವರ ಆಶೀರ್ವಾದದಿಂದ ಭಕ್ತರ ಕಷ್ಟಕಾರ್ಪಣ್ಯಗಳನ್ನು ದೇವಿಯು ಪರಿಹರಿಸುತ್ತಾ ಬಂದಿದ್ದು ಆ 26ರಂದು ಗೌರಿ ಹಬ್ಬದಿಂದ ಮತ್ತೆ ದರ್ಶನ ನೀಡಲಿದ್ದು ಭಕ್ತರು ದರ್ಶನ ಪಡೆದು ಪುನೀತರಾಗಬೇಕೆಂದು ಹೇಳಿದರು