Home ರಾಜಕಾರಣ ರಾಜಣ್ಣ ವಜಾ ಹಿಂದುಳಿದ ವರ್ಗಕ್ಕೆ ಅವಮಾನ

ರಾಜಣ್ಣ ವಜಾ ಹಿಂದುಳಿದ ವರ್ಗಕ್ಕೆ ಅವಮಾನ

14
0


ಸಂತೋಷ್ ಚಿಕ್ಕನಾಯಕನಹಳ್ಳಿ
ಚಿಕ್ಕನಾಯಕನಹಳ್ಳಿ : ಬಡವರ, ಎಲ್ಲಾ ಸಮಾಜದ ರೈತರ ಪರವಾಗಿ ಕೆ.ಎನ್. ರಾಜಣ್ಣ ನವರು ಕೆಲಸ ಮಾಡಿರುವುದನ್ನು ಇಡೀ ರಾಜ್ಯಕ್ಕೆ ತಿಳಿದಿದೆ.ರಾಜ್ಯ ಸರ್ಕಾರಕ್ಕೂ ಕೆ.ಎನ್.ರಾಜಣ್ಣ ನವರ ಕೊಡುಗೆ ಸಾಕಷ್ಟಿದೆ, ರಾಜಣ್ಣನವರನ್ನು ಸಂಪುಟದಿಂದ ಕೈಬಿಟ್ಟಿರುವುದು ರಾಜಣ್ಣ ನವರಿಗೆ ಮಾತ್ರವಲ್ಲ, ರಾಜ್ಯದ ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದ ಜನರಿಗೆ ಮಾಡಿರುವ ಅವಮಾನವಾಗಿದೆ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಸಿಂಗದಹಳ್ಳಿ ರಾಜ್ ಕುಮಾರ್ ಆಕ್ರೋಶ ವ್ಯಕ್ತ ಪಡಿಸಿದರು.

ಪಟ್ಟಣದಲ್ಲಿ ಸೋಮವಾರ ಕನ್ನಡ ಸಂಘ ವೇಧಿಕೆಯಿಂದ ತಾಲ್ಲೂಕು ಕಛೇರಿವರೆಗೆ ಪ್ರತಿಭಟನಾ ಮೆರವಣಿಗೆ ಮೂಲಕ ತೆರಳಿ ತಹಶೀಲ್ದಾರ್ ಗೆ ಮನವಿ ಪತ್ರ ನೀಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಯಡಿಯೂರಪ್ಪನವರನ್ನು ಬಿಟ್ಟರೆ ಕೆ.ಎನ್.ರಾಜಣ್ಣ ನವರ ಪರವಾಗಿಯೇ ಜನರು ಸ್ವಯಂ ಪ್ರೇರಿತವಾಗಿ ಬೆಂಬಲಿಸಿ ಪ್ರತಿಭಟಿಸುತ್ತಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ಸರ್ಕಾರ ಯೋಚಿಸಬೇಕು, ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರಿಗೆ ಬಲಗೈ ಭಂಟನಾಗಿರುವ ರಾಜಣ್ಣನವರು ಸಿದ್ದರಾಮಯ್ಯನವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ಹೆಚ್ಚು ಶ್ರಮ ಪಟ್ಟಿದ್ದಾರೆ. ಕೆಲವರ ಪಿತೂರಿಯಿಂದ ಬೆನ್ನೆಲುಬಾಗಿದ್ದ ರಾಜಣ್ಣನವರನ್ನು  ದೂರ ಮಾಡಲು ಪ್ರಯತ್ನ ಪಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರಕ್ಕಾಗಿ ರಾಜಣ್ಣನವರ ಕೊಡುಗೆ ಅಪಾರವಿದೆ, ರಾಜಣ್ಣನವರ ಪರವಾಗಿ ಈಗಾಗಲೇ ಪಕ್ಷಾತೀತವಾಗಿ, ಜಾತ್ಯಾತೀತವಾಗಿ ರಾಜ್ಯಾದ್ಯಂತ ಹೋರಾಟದ ಅಲೆ ಎದ್ದಿದೆ.ರಾಜಣ್ಣನವರನ್ನು ಮತ್ತೆ ಸಚಿವ ಸ್ಥಾನ ಸಿಗುವ ವರೆಗೂ ಈ ಹೋರಾಟ ನಿಲ್ಲುವುದಿಲ್ಲ. ತಕ್ಷಣ ಹೈ ಕಮಾಂಡ್ ಎಚ್ಚೆತ್ತುಕೊಳ್ಳಬೇಕು ಇಲ್ಲವಾದಲ್ಲಿ ದೆಹಲಿಯಲ್ಲೂ ನಮ್ಮ ಹೋರಾಟ ನಡೆಯುತ್ತದೆ ಎಂದರು.

ಮಾಜಿ ಜಿ.ಪಂ.ಸದಸ್ಯೆ ಲೋಹಿತಬಾಯಿ ಮಾತನಾಡಿ, ಜಿಲ್ಲೆಗೆ ಬಡವರ ಪರವಾಗಿ ಧ್ವನಿಯಾಗಿರುವವರು ಕೆ.ಎನ್.ರಾಜಣ್ಣನವರು.ಅವರ ಪರವಾಗಿ ಮಹಿಳೆಯರು, ಮಕ್ಕಳು, ಸೇರಿದಂತೆ ಜನರೆಲ್ಲರೂ ಅವರ ಪರವಾಗಿ ಹೋರಾಟ ಮಾಡುತ್ತಿರುವುದು ನೋಡಿದರೆ ಕೆ.ಎನ್.ಆರ್ ಜನಪರ ಕೆಲಸಗನ್ನು ಹೆಚ್ಚಾಗಿ ಮಾಡಿದ್ದಾರೆಂದು ಸರ್ಕಾರ ಅರ್ಥ ಮಾಡಿಕೊಳ್ಳಬೇಕು.ಕಾಂಗ್ರೆಸ್ ಸರ್ಕಾರದ ಹೈಕಮಾಂಡ್ ಇದನ್ನು ತಿಳಿದು ಮತ್ತೊಮ್ಮೆ ಕೆ.ಎನ್.ಆರ್ ರವರನ್ನು ಸಂಪುಟಕ್ಕೆ ಮರು ಸೇರ್ಪಡೆ ಮಾಡಬೇಕೆಂದು ಒತ್ತಾಯಿಸಿದರು.

ಭೀಮಸೇನಾ ಜಿಲ್ಲಾ ಸಂಚಾಲಕ ಕುಂದೂರು ಮುರಳಿ ಮಾತನಾಡಿ ಈ ರಾಜ್ಯದ ದೊರೆಯೇ ತನ್ನ ಸಹಪಾಠಿ ಕೆ ಎನ್ ರಾಜಣ್ಣನವರನ್ನು ಸಚಿವ ಸ್ಥಾನದಿಂದ ವಜಾ ಗೊಳಿಸಿರುವುದನ್ನು ಪ್ರಶ್ನೆ ಮಾಡದಿರುವ ಬಗ್ಗೆ ಗಮನಿಸಿದರೆ ರಾಜ್ಯ ಸರ್ಕಾರದ ಸ್ಥಿತಿ ಹೇಗಿದೆ ಎಂಬುದು ತಿಳಿಯುತ್ತದೆ. ತುಮಕೂರು ಜಿಲ್ಲೆಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಗಳಿಸಲು ಕೆಎನ್ ರಾಜಣ್ಣನವರೇ ಮುಖ್ಯ ಕಾರಣ. ಜಿಲ್ಲೆಯ ಅಹಿಂದ ವರ್ಗದ ಜನರ ಮತವನ್ನು ಕಾಂಗ್ರೆಸ್ ಪಕ್ಷಕ್ಕೆ ಕೊಡುಗೆಯಾಗಿ ನೀಡುವುದಕ್ಕೆ ರಾಜಣ್ಣನವರ ಪರಿಶ್ರಮ ತುಂಬಾ ಇದೆ ಎಂದರು.

ಪ್ರತಿಭಟನೆಯಲ್ಲಿ ಕೆ.ಎನ್.ಆರ್ ಅಭಿಮಾನಿಗಳು,ದಲಿತ ಮುಖಂಡ ಗೋ.ನಿ.ವಸಂತ್ ಕುಮಾರ್, ಕಸಬಾ ಸೊಸೈಟಿ ಅದ್ಯಕ್ಷ ಶಿವಣ್ಣ, ಶೆಟ್ಟಿಕೆರೆ ಸೊಸೈಟಿ ನಾಗಣ್ಣ, ಮೂರ್ತಣ್ಣ, ರಾಮಚಂದ್ರಯ್ಯ, ಶಶಿಧರ್, ಮಂಜುನಾಥ್, ಮಂಜುನಾಥ್ ಕ್ಯಾತನಾಯಕನಹಳ್ಳಿ, ರಮೇಶ್ ಯರೇಕಟ್ಟೆ, ರಮೇಶ್ ಸೋರಲಮಾವು, ರಾಮು ಯರೇಕಟ್ಟೆ ಸೇರಿದಂತೆ ಅನೇಕರು ಭಾಗವಹಿಸಿದ್ದರು.



     

      

ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಕ್ರಿಯಾ ಸಮಿತಿ ಹಾಗೂ ಕೆ.ಎನ್.ಆರ್ ಅಭಿಮಾನಿ ಬಳಗ ಹಾಗೂ ಸಹಕಾರಿ ಬಂಧುಗಳು ಕೆ.ಎನ್.ಆರ್ ರವರನ್ನು ಮತ್ತೆ ಸಂಪುಟಕ್ಕೆ ಸೇರ್ಪಡಿಸಿಕೊಳ್ಳಬೇಕೆಂದು ಒತ್ತಾಯಿಸಿ ನೆಹರು ಸರ್ಕಲ್ ನಿಂದ ತಾಲ್ಲೂಕು ಕಛೇರಿಯವರೆಗೆ ಪ್ರತಿಭಟನೆ ಡಿಸಿಸಿ ಬ್ಯಾಂಕ್ ನಿರ್ದೇಶಕ ಸಿಂಗದಹಳ್ಳಿ ರಾಜ್ ಕುಮಾರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.



.

LEAVE A REPLY

Please enter your comment!
Please enter your name here