ಯು ಪಿ ಎಸ್ ಸಿ ಪರೀಕ್ಷೆಗೆ ಉಚಿತ ತರಬೇತಿ

ಉಮೇಶ್ ಬಾಣಾವರ
Disclosure: This website may contain affiliate links, which means I may earn a commission if you click on the link and make a purchase. I only recommend products or services that I personally use and believe will add value to my readers. Your support is appreciated!

ಯು ಪಿ ಎಸ್ ಸಿ ಪರೀಕ್ಷೆಗೆ ಉಚಿತ ತರಬೇತಿ

ಕರ್ನಾಟಕ ಆರ್ಯವೈಶ್ಯ ಮಹಾಸಭಾ ವಾಸವಿ ಅಕಾಡೆಮಿ ವತಿಯಿಂದ

ಅರಸೀಕೆರೆ:  ಲೋಕಸೇವಾ ಆಯೋಗದ ಐಎಎಸ್‌ಸಿ ಮತ್ತು ಐಪಿಎಸ್ ಪರೀಕ್ಷೆಗಳನ್ನು ಸುಲಭವಾಗಿ ಎದುರಿಸಲು ಅನುಕೂಲವಾಗುವಂತೆ ಬೆಂಗಳೂರಿನ ಕರ್ನಾಟಕ ಆರ್ಯವೈಶ್ಯ ಮಹಾಸಭಾದ ವಾಸವಿ ಅಕಾಡೆಮಿ ಮಧ್ಯಮ ಹಾಗೂ ಬಡ ಕುಟುಂಬಗಳ ವಿದ್ಯಾರ್ಥಿಗಳಿಗೆ 8 ನೇ ಬ್ಯಾಚ್ ನ ಉಚಿತ ತರಬೇತಿ ಕಾರ್ಯಗಾರವನ್ನು ಆಯೋಜಿಸಿದೆ ಎಂದು ಕರ್ನಾಟಕ ಆರ್ಯವೈಶ್ಯ ಮಹಾಸಭಾ ಅಧ್ಯಕ್ಷರಾದ ಆರ್ ಪಿ ರವಿಶಂಕರ್ ತಿಳಿಸಿದ್ದರೆ

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಬೆಂಗಳೂರು ನಗರದ ವಿಜಯನಗರ ಬಡಾವಣೆಯ ಚಂದ್ರ ಲೇಔಟ್ ನಲ್ಲಿರುವ ವಾಸವಿ ಅಕಾಡೆಮಿ ಈಗಾಗಲೇ ಹಲವು ತಂಡಗಳಿಗೆ ಉತ್ತಮ ಶಿಕ್ಷಣ ನೀಡಿದೆ 2027ರಲ್ಲಿ ನಡೆಯುವ ಲೋಕಸೇವಾ ಆಯೋಗದ ಪರೀಕ್ಷೆಗಳನ್ನು ವಿದ್ಯಾರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ ಹಾಸನ ಜಿಲ್ಲೆಯ ಹಾಗೂ ಅರಸೀಕೆರೆ ತಾಲೂಕಿನ ವಿದ್ಯಾರ್ಥಿಗಳು ಇದರ ಲಾಭ ಪಡೆದುಕೊಳ್ಳುವಂತೆ ಮನವಿ ಮಾಡಿದ್ದಾರೆ ಯಾವುದೇ ಪದವೀಧರರು ಯು ಪಿ ಎಸ್ ಸಿ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಅವಕಾಶವಿದೆ 2027 ರಲ್ಲಿ ಪರೀಕ್ಷೆ ಬರೆಯುವ ಆಸಕ್ತ ವಿದ್ಯಾರ್ಥಿಗಳು ಮಾತ್ರ ತರಬೇತಿ ನೀಡಲಾಗುತ್ತಿದ್ದು ಎಲ್ಲಾ ತರಗತಿಗಳು ಸಂಪೂರ್ಣ ಉಚಿತವಾಗಿರುತ್ತದೆ  ಯಾವುದೇ ಸಮುದಾಯದ ವಿದ್ಯಾರ್ಥಿಗಳಿಗೆ ಸಂಸ್ಥೆಯ ನಿಯಮಾನುಸಾರ ಪ್ರವೇಶವನ್ನು ಪಡೆಯಲು ಅವಕಾಶವಿದೆ ಪ್ರವೇಶಸಕ್ತ  ವಿದ್ಯಾರ್ಥಿಗಳು ವಾಸವಿ ಅಕಾಡೆಮಿ ನಡೆಸುವ ಪ್ರವೇಶ ಮತ್ತು ಮೌಖಿಕ ಪರೀಕ್ಷೆಯಲ್ಲಿ ಭಾಗವಹಿಸಿ ಉತ್ತೀರ್ಣರಾಗಬೇಕಿದೆ ವಾಸವಿ ಅಕಾಡೆಮಿ ನಡೆಸುವ ಪ್ರವೇಶ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳಿಂದ ಉತ್ತೀರ್ಣರಾಗುವ ಮೊದಲ 30 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಂಪೂರ್ಣ ಉಚಿತ ಶಿಕ್ಷಣ ನೀಡಲಾಗುತ್ತದೆ ತರಬೇತಿಯ ಅವಧಿ 6 ತಿಂಗಳಾಗಿದ್ದು ಅರ್ಜಿ ಸಲ್ಲಿಸಲು 2026 ನೇ ಜೂನ್ 30 ಕೊನೆಯ ದಿನವಾಗಿದೆ  ಪ್ರವೇಶ ಪರೀಕ್ಷೆ ಮತ್ತು ಮೌಖಿಕ ಪರೀಕ್ಷೆ 2026ರ ಜುಲೈ 19ರಂದು ನಡೆಯಲಿದೆ , ತರಗತಿಗಳು ಆಗಸ್ಟ್ ಒಂದರಿಂದ ಆರಂಭಗೊಂಡಿದ್ದು ಎಲ್ಲಾ ಸೌಲಭ್ಯಗಳನ್ನು ಒದಗಿಸುವ ವಾಸವಿಯ ಅಕಾಡೆಮಿ ನಡೆಸುವ ತರಗತಿಗಳಿಗೆ ಸೇರಲು ಬಯಸುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ ಯಾವುದೇ ಡಿಗ್ರಿ ಮತ್ತು ಸ್ನಾತಕೋತ್ತರ ಪದವಿ ಪಡೆದುಕೊಂಡಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶವಿದೆ ಅತ್ಯಂತ ಹಿರಿಯ ಅನುಭವಿ ಪರಿಣಿತ ಬೋಧಕ ತಂಡದಿಂದ ತರಬೇತಿ ನಡೆಯಲಿದೆ ಆಸಕ್ತರು 9448074528- 9663 900439 ನ್ನು ಸಂಪರ್ಕಿಸಬಹುದಾಗಿದೆ ಅಥವಾ https:// vasavi academy. ಮಧ್ಯಮ ಹಾಗೂ ಬಡ ಕುಟುಂಬಗಳ ಪ್ರತಿಭಾನ್ವಿತ ವಿದ್ಯಾರ್ಥಿಗಳು ತರಬೇತಿ ಪಡೆಯಬಹುದಾಗಿದೆ ಎಂದು ಆರ್ ಪಿ ರವಿಶಂಕರ್ ಮಾಹಿತಿ ನೀಡಿದ್ದಾರೆ,

ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ  ವಾಸವಿ ಅಕಾಡೆಮಿಯ ಒಂದು ಸೇವಾ ಸಂಸ್ಥೆಯಾಗಿದೆ ಸುಮಾರು 117 ವರ್ಷಗಳಿಂದ ಶಿಕ್ಷಣ ಆರೋಗ್ಯ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ  ಸಂಸ್ಥೆ ಸಾವಿರಾರು ವಿದ್ಯಾರ್ಥಿಗಳ ಕುಟುಂಬದ ಉನ್ನತಿಗಾಗಿ ಶ್ರಮಿಸುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಎ ಆರ್ ರವಿಕುಮಾರ್ ಸಂಘಟನಾ ಕಾರ್ಯದರ್ಶಿ ಕೆ ಜಿ ಪಾರ್ಥಸಾರಥಿ
ಉಪಾಧ್ಯಕ್ಷರು ಮೈಸೂರು ವಿಭಾಗ
ಪಿ ಜಿ ಶ್ರೀಕಾಂತ್ ಅಧ್ಯಕ್ಷರು ಹಾಸನ ಜಿಲ್ಲಾ ಸಮಿತಿ  ಕೆ ಆರ್ ನಾರಾಯಣ್ ಕಾರ್ಯದರ್ಶಿ ಹಾಸನ ಜಿಲ್ಲಾ ಸಮಿತಿ

ವರದಿ ಎಂಡಿ ನಾಸೀರ್ ಅರಸೀಕೆರೆ

Share This Article
Leave a Comment

Leave a Reply

Your email address will not be published. Required fields are marked *