Home ಅಪರಾಧ ಲಂಚದಾಸೆಗೆ ಬಿದ್ದ ಮೆಸ್ಕಾಂ ಎಇಇ – 5 ಸಾವಿರ ಪಡೆಯುವಾಗಲೇ ಲೋಕಾ ಬಲೆಗೆ ಸಿಕ್ಕ ಅಧಿಕಾರಿ..!!

ಲಂಚದಾಸೆಗೆ ಬಿದ್ದ ಮೆಸ್ಕಾಂ ಎಇಇ – 5 ಸಾವಿರ ಪಡೆಯುವಾಗಲೇ ಲೋಕಾ ಬಲೆಗೆ ಸಿಕ್ಕ ಅಧಿಕಾರಿ..!!

ಲಂಚದಾಸೆಗೆ ಬಿದ್ದ ಮೆಸ್ಕಾಂ ಎಇಇ – 5 ಸಾವಿರ ಪಡೆಯುವಾಗಲೇ ಲೋಕಾ ಬಲೆಗೆ ಸಿಕ್ಕ ಅಧಿಕಾರಿ..!!

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನಲ್ಲಿ ಮೆಸ್ಕಾಂ ಅಧಿಕಾರಿಯೊಬ್ಬರು ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಕಡೂರು ಮೆಸ್ಕಾಂ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಇಇ ತಿರುಪತಿ ನಾಯ್ಕ ಅವರು 5 ಸಾವಿರ ರೂಪಾಯಿ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ.

ಲೇಔಟ್‌ನಲ್ಲಿ ಟಿ.ಸಿ ನಿರ್ಮಾಣಕ್ಕೆ ಅನುಮತಿ ನೀಡುವ ಸಂಬಂಧ ಲೋಕೇಶ್ ಎಂಬುವವರಿಂದ ಲಂಚದ ಬೇಡಿಕೆ ಇಟ್ಟಿದ್ದ ಆರೋಪ ಕೇಳಿಬಂದಿತ್ತು. ಈ ಕುರಿತು ಲೋಕೇಶ್ ಅವರು ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದ್ದರು.

ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಡಿವೈಎಸ್‌ಪಿ ಆರ್ ತಿರುಮಲೇಶ್ ನೇತೃತ್ವದ ತಂಡ, ಕಡೂರಿನ ಮೆಸ್ಕಾಂ ಕಚೇರಿಯಲ್ಲಿ ಲಂಚ ಪಡೆಯುತ್ತಿದ್ದ ವೇಳೆ ದಾಳಿ ನಡೆಸಿ ಎಇಇ ತಿರುಪತಿ ನಾಯ್ಕ ಅವರನ್ನು ರೆಡ್‌ಹ್ಯಾಂಡ್ ಆಗಿ ಬಂಧಿಸಿದೆ.

ಘಟನೆಯ ಬಳಿಕ ಮೆಸ್ಕಾಂ ಕಚೇರಿಯಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿದ್ದು, ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ಮುಂದುವರೆಸಿದ್ದಾರೆ.

LEAVE A REPLY

Please enter your comment!
Please enter your name here