ಮಾಡಾಳು ಮಕ್ಕಳಿಗೆ ಅಂಕ ಗಳಿಕೆಯಷ್ಟೇ ಶಿಕ್ಷಣ ಮುಖ್ಯವಾಗದೆ ನೈತಿಕ ನೆಲಗಟ್ಟು ಸಾಮಾಜಿಕ ಪ್ರಜ್ಞೆ ಮೂಡಿಸುವಂತಹ ಶಿಕ್ಷಣ ಕೊಡಬೇಕು ಇಂದುವಿದ್ಯಾವಂತರು ಹೆಚ್ಚಾಗುತ್ತಿದ್ದಾರೆ ಆದರೆ ಅವರಲ್ಲಿ ನೈತಿಕ ಮತ್ತು ಸಾಮಾಜಿಕ ಪ್ರಜ್ಞೆಯ ಕೊರತೆಯಿಂದಸಮಾಜ ಘಾತುಕ ಕೆಲಸಗಳು ನಿರಂತರವಾಗಿ ನಡೆಯುತ್ತಿದೆ ಎಂದು ಮಾಜಿ ಸಚಿವ ಜೆ ಸಿ ಮಾಧುಸ್ವಾಮಿ ಶನಿವಾರ ಸಂಜೆ ಆತಂಕ ವ್ಯಕ್ತಪಡಿಸಿದರು ಅರಸೀಕೆರೆ ತಾಲೂಕಿನ ದೊಡ್ಡ ಮೇಟಿಕುರ್ಕೆ ಗ್ರಾಮದ ಎಸ್ಎನ್ಎಸ್ ಆಂಗ್ಲ ಮಾಧ್ಯಮ ಶಾಲೆ ಯಲ್ಲಿ 2025 26 ನೇ ಸಾಲಿನ ವಾರ್ಷಿಕೋತ್ಸ ವ ಚಿಣ್ಣರ ಲೋಕ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು ನಮ್ಮ ವಿದ್ಯಾರ್ಥಿಗಳಿ ಗೆಕಲಿಯುವಂತಹ ಹಸಿವಿರಬೇಕು ಸೋಲನ್ನೇ ಗೆಲುವಿನ ಮೆಟ್ಟಿಲನ್ನಾಗಿ ಮಾಡಿ ಕೊಳ್ಳುವ ಛಲ ಮತ್ತು ಮನೋಬಲ ಇರಬೇಕು ಕ್ರಮ ಬದ್ಧ ಅಧ್ಯಯನ ಶಿಸ್ತುಪರಿಶ್ರಮ ಮತ್ತು ವಿನಯ ಇವುಗಳನ್ನ ಆಭರಣಗಳನ್ನಾಗಿ ಮಾಡಿ ಕೊಂಡರೆಜ್ಞಾನಕ್ಕಿಂತ ಸಂಪತ್ತು ಮತ್ತೊಂದಿಲ್ಲ ಎಂದು ಅವರು ಹೇಳಿದರು ಮಕ್ಕಳಿಗೆ ಅದ್ಭುತವಾದ ಪ್ರತಿಭೆ ಇದೆ ಇದನ್ನು ಹೇಗೆ ಹೊರ ತರಬೇಕುಎನ್ನುವ ಅರಿವು ಶಿಕ್ಷಕರಿಗೆ ಹಾಗೂ ಪೋಷಕರಿಗೆ ಇರಬೇಕು ನಮ್ಮ ಮಕ್ಕಳು ಸುಂದರವಾದ ಶಿಲ್ಪಿಗಳು ದುರಭ್ಯಾಸಗಳನ್ನು ಮನಸ್ಸಿನಿಂದ ಕಿತ್ತಾಕಿ ಸದ್ಭಾವನೆಗಳನ್ನು ಬೆಳೆಸಿಕೊಂಡಾಗ ಮಾತ್ರಉನ್ನತ ಗುರಿ ಮುಟ್ಟಲು ಸಾಧ್ಯ ಎಂದು ಅವರು ಕಿವಿಮಾತು ಹೇಳಿದರು ಕಣಕಟ್ಟೆ ಹೋಬಳಿ ಶಿಕ್ಷಣ ಸಂಯೋಜಕ ಬಿಬಿ ಸತೀಶ್ ಮಾತನಾಡಿ ಮಕ್ಕಳಿಗೆ ಶಿಸ್ತನ್ನು ಬಲವಂತವಾಗಿ ಹೇರಬಾರದುಪ್ರೀತಿ ವಿಶ್ವಾಸದಿಂದ ಅವರನ್ನು ಶಿಸ್ತಿಗೆ ಒಳಪಡಿಸಬೇಕು ಜೀವನದ ಎಲ್ಲಾ ಕನಸುಗಳನ್ನು ಈಡೇರಿಸಬೇಕಾದರೆ ಪುಸ್ತಕ ಪ್ರೇಮವನ್ನು ಬೆಳೆಸಿಕೊಳ್ಳಬೇಕು ಪೋಷಕರು ಮಕ್ಕಳಿಗೆ ಪ್ರೋತ್ಸಾಹಿಸಬೇಕು ಎಂದು ತಿಳಿಸಿದರು ಎಸ್ಎಂಎಸ್ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಶ್ರೀ ಅಭಿನವ ಶಿವಲಿಂಗ ಸ್ವಾಮಿಗಳು ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು ಇದೇ ಸಂದರ್ಭದಲ್ಲಿ ಕಳೆದ ವರ್ಷ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ಸಹನ (622ಅಂಕ) ಗಳಿಸಿದ ವಿದ್ಯಾರ್ಥ ನಿಗೆ ಶಾಲಾ ಅಭಿವೃದ್ಧಿ ಸಮಿತಿ ನಿರ್ದೇಶಕ ಎಂ ಎಸ್ ನಟರಾಜ್ ಲ್ಯಾಪ್ ಟಾಪ್ ಕೊಡುಗೆಯಾಗಿ ನೀಡಿದ್ದು ಮಾಧುಸ್ವಾಮಿ ಯವರು ವಿತರಿಸಿದರು ಡಿಎಂ ಕುರ್ಕೆ ಕ್ಲಸ್ಟರ್ ಧನಂಜ ಯ ಮಾತನಾಡಿದರು ಆರಂಭದಲ್ಲಿಶಾಲಾ ಅಭಿವೃದ್ಧಿ ಸಮಿತಿ ಕಾರ್ಯದರ್ಶಿ ಎಸ್ ಎಂ ನಂದೀಶ್ ವರದಿಓದಿದರು ಶಾಲಾ ಅಭಿವೃದ್ಧಿ ಸಮಿತಿ ನಿರ್ದೇಶಕ ರುಗಳಾದ ಡಿ ಎಸ್ ಸ್ಸಿದ್ದಪ್ಪ ಎಸ್ ಮಲ್ಲಿಕಾರ್ಜುನಪ್ಪ ಎಂ ಸಿ ನಟರಾಜ್ ಎಂ ಎನ್ ಓಂಕಾರಪ್ಪ ಶಂಕರನಳ್ಳಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಶಿವಣ್ಣಸ್ವಾಮಿ ಮಾಡಾಳು ಶಿವಲಿಂಗಪ್ಪ ಎಂಡಿ ಸೋಮಶೇಖರ್ ಮುಖ್ಯ ಶಿಕ್ಷಕ ಸತೀಶ್ ಉಪಸ್ಥಿತರಿದ್ದರು







