ಇತ್ತೀಚಿಗೆ ಅರಸೀಕೆರೆ ನಗರಕ್ಕೆ ಬರುವ ಪ್ರವಾಸಿಗರಿಗೆ ಮತ್ತು ಅರಸಿಕೆರೆಯಿಂದ ಬೇರೆ ನಗರಗಳಿಗೆ ಹಾದು ಹೋಗುವ ಪ್ರಯಾಣಿಕರಿಗೆ ರಸ್ತೆಯ ಮಾಹಿತಿ ಇಲ್ಲದೆ ರಸ್ತೆ ಬದಿ ವಾಹನಗಳನ್ನು ನಿಲ್ಲಿಸಿ ಯಾವ ಕಡೆ ಹೋಗುವುದು ಎಂದು ಮಾಹಿತಿ ಪಡೆಯುತ್ತಿದ್ದರು ಇದನ್ನು ಗಮನಿಸಿದ ನಗರಸಭೆ ಇತ್ತೀಚಿಗೆ ಅರಸೀಕೆರೆಯಿಂದ ಹೊರಗಡೆ ಹೋಗುವ ಹೆದ್ದಾರಿಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ದ್ವಾರಗಳಲ್ಲಿ ಸ್ವಾಗತ ಕಮಾನುಗಳನ್ನು ನಿರ್ಮಿಸಲಾಗಿತ್ತು .
ರಾಷ್ಟ್ರೀಯ ಹೆದ್ದಾರಿ 206 ಕ್ಕೆ ಬೆಂಗಳೂರಿನಿಂದ ಅರಸೀಕೆರೆ ನಗರದ ಒಳಗೆ ಪ್ರವೇಶ ಮಾಡಿ ಹೊನ್ನಾವರಕ್ಕೆ ಹೋಗುವ ಹೆದ್ದಾರಿಯಲ್ಲಿ ನಗರದ ಕಂತೇನಹಳ್ಳಿ ಬಳಿ ಇಂದು ಬೆಳಗ್ಗೆ ಸ್ವಾಗತ ಕಮಾನು ನೇತು ಹಾಕಲಾಯಿತು ನಗರಸಭೆ ಅಧ್ಯಕ್ಷರಾದ ಎಮ್ ಸಮೀವುಲ್ಲಾ. ನಗರಸಭೆ ಸಿಬ್ಬಂದಿಗಳು ಮತ್ತು ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಜನರ ಮನೆ ಸೂರೆಗೊಂಡ ಶ್ರೀ ಅಮರಗಿರಿ ಮಾಲೆಕಲ್ಲು ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ಸ್ವಾಗತ.
ರಾಜ್ಯದಲ್ಲಿ ಹೆಸರುವಾಸಿಯಾಗಿರುವ ಚಿಕ್ಕ ತಿರುಪತಿ. ಮಾಲೆಕಲ್ ತಿರುಪತಿ. ಎಂದು ಹೆಸರುವಾಸಿಯಾಗಿರುವ ಶ್ರೀ ಕ್ಷೇತ್ರಕ್ಕೆ ವರ್ಷಕ್ಕೊಮ್ಮೆ ನಡೆಯುವ. ಬ್ರಹ್ಮರಥೋತ್ಸವಕ್ಕೆ ಸಹಸ್ರಾರು ಜನರು ಪ್ರವಾಸಿಗರು. ತಿರುಪತಿ ತಿಮ್ಮಪ್ಪನ ಭಕ್ತರು ರಾಜ್ಯದೆಲ್ಲೆಡೆಯಿಂದ ಬಂದು ಹೋಗುತ್ತಾರೆ. ಈ ರಾಷ್ಟ್ರೀಯ ಹೆದ್ದಾರಿಯಲ್ಲಿ ತೆರಳುವ ಪ್ರವಾಸಿಗರಿಗೆ. ಅರಸಿಕೆರೆ ತಾಲೂಕಿನ ಪಕ್ಕದಲ್ಲಿಯೇ ಶ್ರೀ ಕ್ಷೇತ್ರ ಇದೆ ಎಂಬ ಮಾಹಿತಿ ದೊರಕುವುದಲ್ಲದೆ ಇನ್ನು ಮುಂದೆ ಭಕ್ತರ ಸಂಖ್ಯೆಯೂ ಕೂಡ ಹೆಚ್ಚಾಗಲಿದೆ ಎಂದು ಸಾರ್ವಜನಿಕರ ಅಭಿಪ್ರಾಯವಾಗಿದೆ
ಸ್ಥಳದಲ್ಲಿ ಇದ್ದ ನಗರಸಭೆ ಅಧ್ಯಕ್ಷರು ರಾಷ್ಟ್ರೀಯ ಹೆದ್ದಾರಿ 206 ಕಂತೇನಳ್ಳಿಯ ಬಳಿ ಇಂದು ಬೆಳಗ್ಗೆ ಸ್ವಾಗತ ಕಮಾನು ನೇತು ಹಾಕುವ ವೇಳೆ ವಾಹನ ದಟ್ಟಣೆಯಾಗದಂತೆ ಮತ್ತು ಪ್ರಯಾಣಿಕರಿಗೆ ತೊಂದರೆಯಾಗದಂತೆ ನಗರದ ಪೊಲೀಸ್ ಸಿಬ್ಬಂದಿಗಳು ಮತ್ತು ನಗರಸಭೆಯ ಸಿಬ್ಬಂದಿಗಳೊಂದಿಗೆ ನಗರಸಭೆ ಅಧ್ಯಕ್ಷರಾದ ಎಂ ಸಮೀ ವುಲ್ಲಾ ಉಪಸ್ಥಿತರಿದ್ದರು.

