ಅಭಿವೃದ್ಧಿ ಬೇಕು, ಆದರೆ ಬಡವರ ಬದುಕನ್ನು ಬಲಿಕೊಟ್ಟು ಅಲ್ಲ! ಮಾಜಿ ಶಾಸಕರು ಹಾಗೂ ಮಾಜಿ ಸಚಿವರಾದ ಎಚ್. ಕೆ. ಕುಮಾರಸ್ವಾಮಿ ಜೆಡಿಎಸ್ (JD(S) ಧ್ವನಿ
ಇಂದು ಸಕಲೇಶಪುರ ಪಟ್ಟಣದ ತೇಜಸ್ವಿ ಸರ್ಕಲ್ ಬಳಿ ರಸ್ತೆ ಅಗಲೀಕರಣದ ಸ್ಥಳಕ್ಕೆ ಭೇಟಿ ನೀಡಿ, ಸಂತ್ರಸ್ತರ ಅಳಲನ್ನು ಆಲಿಸಿದೆ. 60–70 ವರ್ಷಗಳಿಂದ ತಮ್ಮ ಜಾಗವನ್ನು ನಂಬಿಕೊಂಡು ಬದುಕುತ್ತಿರುವ ಬಡ ಮತ್ತು ಸಾಮಾನ್ಯ ಕುಟುಂಬಗಳು, ರಸ್ತೆ ಅಗಲೀಕರಣದ ಹೆಸರಿನಲ್ಲಿ ತಮ್ಮ ಜಾಗವನ್ನು ಹೆಚ್ಚಿನ ಪ್ರಮಾಣದಲ್ಲಿ ಕಳೆದುಕೊಳ್ಳುವ ಆತಂಕವನ್ನು ವ್ಯಕ್ತಪಡಿಸಿದ್ದಾರೆ.
ಅಭಿವೃದ್ಧಿಗೆ ನಮ್ಮ ವಿರೋಧವಿಲ್ಲ. ರಸ್ತೆ ಅಗಲೀಕರಣವಾಗಲಿ, ಪಟ್ಟಣ ಅಭಿವೃದ್ಧಿಯಾಗಲಿ—ಅದಕ್ಕೆ ನಮ್ಮ ಬೆಂಬಲವಿದೆ. ಆದರೆ ಅಭಿವೃದ್ಧಿಯ ಹೆಸರಿನಲ್ಲಿ ಬಡವರ ಬದುಕಿಗೆ ತೊಂದರೆಯಾಗುವ ರೀತಿಯಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಜಾಗವನ್ನು ವಶಪಡಿಸಿಕೊಳ್ಳುವುದು ಎಷ್ಟು ಸರಿ?
ನ್ಯಾಷನಲ್ ಹೈವೇಯ ಅಗಲವೇ 60 ಅಡಿ ಇಲ್ಲದಿರುವಾಗ, ಇಲ್ಲಿ ಸುಮಾರು 105 ಅಡಿ ಜಾಗವನ್ನು ವಶಪಡಿಸಿಕೊಳ್ಳುತ್ತಿರುವುದು ಯಾವ ಮಾನದಂಡದ ಆಧಾರದ ಮೇಲೆ? ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.
ಈ ಹಿನ್ನೆಲೆಯಲ್ಲಿ, ದಿನಾಂಕ 2ರಂದು ನಡೆಯಲಿರುವ ಸಭೆ ಮುಗಿಯುವವರೆಗೂ ಯಾವುದೇ ಮುಂದಿನ ಕ್ರಮ ಕೈಗೊಳ್ಳದೆ, ತಕ್ಷಣವೇ ಯಥಾಸ್ಥಿತಿ ಕಾಪಾಡಬೇಕು ಎಂದು ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳನ್ನು ಒತ್ತಾಯಿಸುತ್ತೇನೆ ಎಂದು ತಿಳಿಸಿದರು.
✍️ ಭರತ್ ಮಲ್ನಾಡ್
ಬಡವರ ಕಾಳಜಿ ಜೊತೆ ಅಭಿವೃದ್ಧಿಯಾಗಲಿ ಎಚ್ ಕೆ ಕುಮಾರಸ್ವಾಮಿ
Leave a Comment
