
ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ ರಿ. ಜಿಲ್ಲಾ ಸಮಿತಿ ಉಡುಪಿ ಕ್ಷೇತ್ರ ಸಮಿತಿ ಉಡುಪಿ ದೊಡ್ಡನಗುಡ್ಡೆ ವಲಯ ಸಮಿತಿಯ ವತಿಯಿಂದ ರೂಡ್ ಸೆಟ್ ಸಂಸ್ಥೆಯ ಸಹಕಾರದೊಂದಿಗೆ 15 ದಿನಗಳ ಉಚಿತ ಕೌಶಲ್ಯ ತರಬೇತಿ ಶಿಬಿರದ ಸಮಾರೋಪ ಸಮಾರಂಭವು ತಾರೀಕು 01.09.26 ರಂದು ಮಧ್ಯಾಹ್ನ ದೊಡ್ಡಣ್ಣ ಗುಡ್ಡೆ ಜನತಾ ವ್ಯಾಯಾಮ ಶಾಲೆಯ ಸಭಾಂಗಣದಲ್ಲಿ ಶ್ರೀಮತಿ ಸೌಮ್ಯ ಭಟ್ ರವರ ಅಧ್ಯಕ್ಷತೆಯಲ್ಲಿ ಜರಗಿತ್ತು ವಿಶೇಷ ಆಹ್ವಾನಿತರಾಗಿ ಉಡುಪಿ ನಗರ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಶ್ರೀ ರತ್ನಾಕರ್ ಕೆ ರೂಡ್ ಸೆಟ್ ಸಂಸ್ಥೆಯ ಹಿರಿಯ ಉಪನ್ಯಾಸಕರಾದ ಶ್ರೀ ಸಂತೋಷ್ ಶೆಟ್ಟಿ ಉಪನ್ಯಾಸಕೀ ಶ್ರೀಮತಿ ಚೈತ್ರ . ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ ಉಡುಪಿ ಜಿಲ್ಲಾಧ್ಯಕ್ಷರಾದ ಶ್ರೀ ದಯಾನಂದ ಕೋಟ್ಯಾನ್ ಕೊರಂಗ್ರಪಾಡಿ ತರಬೇತಿ ಶಿಕ್ಷಕಿಯರಾದ ಶ್ರೀಮತಿ ರೂಪ ಮತ್ತು ಶ್ರೀಮತಿ ಸುಮಂಗಲ ಟೈಲರ್ ಅಸೋಸಿಯೇಷನ್ ಉಡುಪಿ ಕ್ಷೇತ್ರ ಸಮಿತಿಯ ಅಧ್ಯಕ್ಷರಾದ ಶ್ರೀ ಸುರೇಶ್ ಪಾಲನ್, ದೊಡ್ಡನಗುಡ್ಡೆ ವಲಯ ಸಮಿತಿ ನಿಕಟಪೂರ್ವ ಅಧ್ಯಕ್ಷರಾದ ಶ್ರೀಮತಿ ಉಷಾ ಎಸ್ ಸೇರಿಗಾರ್ ಉಪಸ್ಥಿತರಿದ್ದರು ಉಡುಪಿ ಕ್ಷೇತ್ರ ಸಮಿತಿಯ ಕೋಶಾಧಿಕಾರಿ ದಯಾನಂದ ಪ್ರಭು ಕಾರ್ಯಕ್ರಮ ನಿರೂಪಿಸಿದರು ದೊಡ್ಡನಗುಡ್ಡೆ ವಲಯ ಸಮಿತಿಯ ಶ್ರೀಮತಿ ಭುವನೇಶ್ವರಿ ಸ್ವಾಗತಿಸಿ. ಶ್ರೀಮತಿ ನಳಿನಿ ಧನ್ಯವಾದವಿತರು ತರಬೇತಿ ಪಡೆದ ಎಲ್ಲರಿಗೂ ರುಡ್ ಸೆಟ್ ಸಂಸ್ಥೆಯ ಪ್ರಮಾಣ ಪತ್ರ ನೀಡಲಾಯಿತು ಮುಂದಿನ ದಿನದಲ್ಲಿ ಸರ್ಕಾರದ ಅನುಮತಿ ಪಡೆದ ಪ್ರಮಾಣ ಪತ್ರ ನೀಡಲಾಗುವುದು ಎಲ್ಲರಿಗೂ ಶುಭವಾಗಲಿ ಎಂದು ಶ್ರೀಮತಿ ಚೈತ್ರ ವಿವರಿಸಿದ್ದರು. ನಗರ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಪ್ರಮಾಣ ಪತ್ರ ವಿತರಿಸಿ ಅಸೋಸಿಯೇಷನ್ ಕಾರ್ಯವೈಕರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ತರಬೇತಿ ಪಡೆದ ಎಲ್ಲರೂ ನಿಮ್ಮ ವೃತ್ತಿಯನ್ನು ಮುಂದುವರಿಸಿ ಎಲ್ಲರಿಗೂ ಶುಭವಾಗಲಿ ಎಂದು ಹಾರೈಸಿದರು. ಜಿಲ್ಲಾಧ್ಯಕ್ಷರಾದ ದಯಾನಂದ್ ಕೋಟ್ಯಾನ್ ರವರು ಮಾತನಾಡಿ ರುಡ್ ಸೆಟ್ ಸಂಸ್ಥೆಯ ಸಹಯೋಗದೊಂದಿಗೆ ಎಲ್ಲರಿಗೂ ಮಾದರಿಯಾಗಿ ಉಡುಪಿ ಜಿಲ್ಲೆಯಲ್ಲಿ ಪ್ರಥಮತವಾಗಿ ಈ ಶಿಬಿರವು ನಡೆದಿರುತ್ತದೆ ನಮ್ಮ ಸಂಘಟನೆಗೆ ಹೆಮ್ಮೆ ಯ ವಿಚಾರ. .ಮಹಿಳೆಯು ಸ್ವಾವಲಂಬಿಯಾಗಲು ಇದು ಸಹಕರಿಸುತ್ತದೆ ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಿ ಮುಂದಿನ ದಿನದಲ್ಲಿ ಕೌಶಲ್ಯ ತರಬೇತಿಯು ನಿಮ್ಮ ಜೀವನದ ಉಜ್ವಲ ಭವಿಷ್ಯಕ್ಕೆ ಸಹಕಾರಿಯಾಗಲಿ ಎಂದು ಶುಭ ಹಾರೈಸಿದರು🙏
