ಶ್ರೀ ಸ್ವರ್ಣ ಗೌರಮ್ಮನವರ ಪುಣ್ಯಕ್ಷೇತ್ರದಲ್ಲಿ ಅಮಾವಾಸ್ಯೆಯ ಪೂಜೆ

ಉಮೇಶ್ ಬಾಣಾವರ
Disclosure: This website may contain affiliate links, which means I may earn a commission if you click on the link and make a purchase. I only recommend products or services that I personally use and believe will add value to my readers. Your support is appreciated!

ಮಾಡಾಳು ಇತಿಹಾಸ ಪ್ರಸಿದ್ಧ ಪುಣ್ಯಕ್ಷೇತ್ರ ಗ್ರಾಮದ ಮೂಲಸ್ಥಾನ ಶ್ರೀ ಸ್ವರ್ಣ ಗೌರಮ್ಮ ದೇವಿ ದೇವಾಲಯದಲ್ಲಿ ಕಾತ್ಯಾಯಿನಿ ಅಮಾವಾಸ್ಯೆ ಅಂಗವಾಗಿ ಸುಕ್ಷೇತ್ರ ಹಾರನಹಳ್ಳಿ ಕೋಡಿ ಮಠದ ಉತ್ತರಾಧಿಕಾರಿ ಶ್ರೀ ಚೇತನ್ ಮರಿದೇವರ ಪಾದಪೂಜೆ ನೂರಾರು ಭಕ್ತರ ಸಮ್ಮುಖದಲ್ಲಿ ಸೋಮವಾರ ಸಂಜ ಶ್ರದ್ಧಾಭಕ್ತಿಯಿಂದ ಜರುಗಿತು                   ಕೋಡಿಮಠ ಜಗದ್ಗುರು ಡಾ. ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಯವರ ಸಂಕಲ್ಪದಂತೆ ಲೋಕಕಲ್ಯಾಣಾ ರ್ಥವಾಗಿ ಪ್ರತಿ ತಿಂಗಳ ಅಮಾವಾಸ್ಯೆ ಯಂದು ಶ್ರೀ ತಾಯಿ ಜಗನ್ಮಾತೆ ಅಮ್ಮನವರ ಸನ್ನಿಧಿ ಯಲ್ಲಿ ವಿಶೇಷ ಪೂಜೆಯನ್ನು ಹಮ್ಮಿಕೊಳ್ಳಲಾಗುತ್ತದೆ    ಜೂನ್ 15ರಂದು ಸಂಜೆ ಶ್ರೀ ಚೇತನ್ ಮುರಿ ದೇವರ ಪಾದಪೂಜೆ ಯು ಧಾರ್ಮಿಕ ವಿಧಿ ವಿಧಾನಗಳಿಂದ ಶಾಸ್ತ್ರೋಕ್ತವಾಗಿಬ ಭಕ್ತಿ ಭಾವದಿಂದ ನೆರವೇರಿತು       ನಂತರ ಸೇರಿದ್ದ ಭಕ್ತರನ್ನು ಉದ್ದೇಶಿಸಿ ಆಶೀರ್ವಚನ ನೀಡಿದ  ಸ್ವಾಮೀಜಿ ಮನುಷ್ಯನ ನಡೆ ನುಡಿ ಆಚಾರ ವಿಚಾರ ಸತ್ಯದ ಪರವಾಗಿರಬೇಕು  ಸಜ್ಜನರಿಗೆ ಬರುವ ಆಪತ್ತು ದುರ್ಜನರಿಗೆ ಬರುವ ಸಂಪತ್ತು ಯಾವುದು ಬಹಳ ದಿನ ಉಳಿಯುವುದಿಲ್ಲ ಎಂದರು           .ನುಷ್ಯನಿಗೆ ಶಿವಜ್ಞಾನದ ಬೀಜ ಬಿತ್ತಿ  ಸಂಸ್ಕಾರ ನೀಡುವಾತನೇ ಶ್ರೀ ಗುರು ಆತನ  ಜೀವನ ಉತ್ತಮವಾಗಿ ಸಾಗಲು ಗುರು ಕಾರುಣ್ಯದ ಕಿರಣ ಮುಖ್ಯಭಕ್ತನ ಹೃದಯ ಭಗವಂತ ನೆಲೆಸಿರುವ ಗುಡಿಯಾಗಿದೆ ಎಂದು ಸ್ವಾಮೀಜಿ ಹೇಳಿದರು ನಂತರ ಸ್ವರ್ಣ ಗೌರಮ್ಮ ದೇವಿ ಮಹಾ ತಪಸ್ವಿ ಶಿವಲಿಂಗಜ್ಜಯ್ಯ ಮೂರ್ತಿ ಹಾಗೂ ಗ್ರಾಮದ ಆರಾಧ್ಯ ದೈವ ಶ್ರೀ ಗುರು ಚನ್ನಬಸವೇಶ್ವರ ಸ್ವಾಮಿಗೆ ಅರ್ಚಕರು ಪೂಜೆ ಸಲ್ಲಿಸಿ ಕರ್ಪೂರದಾರತಿ ಬೆಳಗಿದರು        ಅಮಾವಾಸ್ಯೆ ನಿಮ್ಮಿತ್ತ ದೇವಾಲಯವನ್ನು ತಳಿರು ತೋರಣ ಬಾಳೆ ಕಂದುಗಳಿಂದ ಸಿಂಗರಿಸಿದ್ದು ಬಣ್ಣ ಬಣ್ಣದ ವಿದ್ಯುತ್ ದೀಪಗಳ ಅಲಂಕಾರ ಭಕ್ತರ ಕಣ್ಮನ ಸೆಳೆಯಿತು   ಬಂದ ಭಕ್ತಾದಿಗಳಿಗೆ ಈ ರೇಗೌಡರ ಶಿವಲಿಂಗಪ್ಪ ಮತ್ತು ಮಕ್ಕಳು ದಾಸೋಹ ವ್ಯವಸ್ಥೆಯನ್ನು ಕಲ್ಪಿಸಿದ್ದರು         ಮಾಡಾಳು ಗ್ರಾಮಸ್ಥ ರು ಸೇರಿದಂತೆ ಸೀತಾಪುರ ಕೊಪ್ಪಲು ಯರೇ ಹ ಳ್ಳಿಸಸಿವಾಳ ರಾಂಪುರ ಡಿ ಎ೦ ಕುರ್ಕೆಹಾರನಹಳ್ಳಿ ಅಣ್ಣಾಯಕನಹಳ್ಳಿನಾಗತಿಹಳ್ಳಿ ವೈಜಿಹಳ್ಳಿ ಪಿ ಹೊಸಳ್ಳಿ ಕಿತ್ತನಕೆರೆ ದೋಣಕಟ್ಟೆ ಬೊಮ್ಮಸಮುದ್ರ ಶಂಕರನ ಹಳ್ಳಿ ಕಡಲ ನಮಗೆ ಗ್ರಾಮಸ್ಥರು ಪಾಲ್ಗೊಂಡು ದೇವಿ ದರ್ಶನ ಪಡೆದು ಪುನೀತರಾದರು

Share This Article
Leave a Comment

Leave a Reply

Your email address will not be published. Required fields are marked *