Home Uncategorized ದೈವ ಸಂಕಲ್ಪದಂತೆ ಜಗತ್ತು ಸಾಗುತ್ತಿದೆ ಶಾಸಕ ಕೆ. ಎಮ್ ಶಿವಲಿಂಗೇಗೌಡ

ದೈವ ಸಂಕಲ್ಪದಂತೆ ಜಗತ್ತು ಸಾಗುತ್ತಿದೆ ಶಾಸಕ ಕೆ. ಎಮ್ ಶಿವಲಿಂಗೇಗೌಡ

16
0

ಮಾಡಾಳು  – ದೈವ ಸಂಕಲ್ಪದಂತೆ ಜಗತ್ತು ಸಾಗುತ್ತಿದೆ ವಿಜ್ಞಾನ ಲೋಕದಲ್ಲಿ ಆಗಿರುವ ಆಗುತ್ತಿರುವ ಆವಿಷ್ಕಾರಗಳೆ ಮುಂದಿನ ದಿನಗಳಲ್ಲಿ ಮನುಕುಲದ ಅವನತಿಗೆ ಕಾರಣ ಆಗುವುದರಲ್ಲಿ ಸಂದೇಹವಿಲ್ಲ ಎಂದು ರಾಜ್ಯಗೃಹ ನಿರ್ಮಾಣ ಮಂಡಳಿಯ ಅಧ್ಯಕ್ಷರು ಆದ ಶಾಸಕ ಕೆ,ಎಂ  ಶಿವಲಿಂಗೇಗೌಡ ಪ್ರತಿಪಾದಿಸಿದರು.

    ಅರಸೀಕೆರೆ ತಾಲೂಕಿನ ಮಾಡಾಳು ಗ್ರಾಮದ ಮೂಲಸ್ಥಾನ  ಸ್ವರ್ಣ ಗೌರಿ ಅಮ್ಮನವರದೇವಾಲಯದ ಆವರಣದಲ್ಲಿ ಆಯೋಜಿಸಿದ ಸುಕ್ಷೇತ್ರ ಕೋಡಿಮಠದ ಲಿಂಗೈಕ್ಯ ಶ್ರೀ ನೀಲಲೋಚನ ಮಹಾಸ್ವಾಮಿಗಳ ಪುಣ್ಯ ಸ್ಮರಣೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಭೂಮಿಯ ಮೇಲೆ ಅಧರ್ಮ ಹೆಚ್ಚಾದಗಲೆಲ್ಲ ದಶಾವತಾರದ ಮೂಲಕ ಭಗವಂತ ಧರೆಯನ್ನು ಉದ್ದರಿಸಿದ್ದನ್ನು ನಾವು ನಮ್ಮ ಪುರಾಣದ ಮೂಲಕ ತಿಳಿದುಕೊಂಡಿದ್ದೇವೆ ಅದೇ ರೀತಿ ಕಲಿಯುಗದಲ್ಲಿ ಭಗವಂತ ಕಲ್ಲಾಗಿ ಇದ್ದರು ವಿಜ್ಞಾನಿಗಳ ಮೂಲಕ ಕ್ಷಣಮಾತ್ರದಲ್ಲಿ ಲಕ್ಷಾಂತರ ಮಂದಿಯನ್ನು ಕೊಳ್ಳುವಂತ ಅಣುಬಾಂಬ್ ಗಳನ್ನು ಭಗವಂತನೇ ಸಿದ್ದ ಪಡಿಸಿಟ್ಟಿರುವಂತೆ ಕಾಣುತ್ತದೆ ಎಂದ ಎಂದವರು ಮನುಕುಲ ಈ ದುಷ್ಪತ್ತಿನಿಂದ ತಪ್ಪಿಸಿಕೊಳ್ಳಬೇಕಾದರೆ ಮಹಾ ತಪಸ್ವಿಗಳಾದಂತ ಕೋಡಿಮಠದಂತ ಶ್ರೀಗಳ ಹಿತವಚನವನ್ನು ಆಲಿಸಿ ಅದರಂತೆ ಬದುಕು ಸಾಗಿಸದೇ ಹೋದರೆ ಮನುಕುಲದ ಅವನತಿ ಮನುಷ್ಯನಿಂದಲೇ ಆಗಲಿದೆ ಎಂದು ಹೇಳಿದರು.

    ಮೂಲ ಸ್ವರ್ಣ ಗೌರಿ ಅಮ್ಮನವರ ದ್ವಾರ ಬಾಗಿಲು ನಿರ್ಮಾಣಕ್ಕೆ 10 ಲಕ್ಷ ನೀಡಿದ್ದು ಮುಂದಿನ ದಿನಗಳಲ್ಲೂ ಸಹ ದೇವಾಲಯದ ಅಭಿವೃದ್ಧಿಗೆ ಸಂಬಂಧಿಸಿದಂತೆ ನನ್ನ ಸಂಪೂರ್ಣ ಸಹಕಾರ ನೀಡುವುದಾಗಿ ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.

     ಬೆಕ್ಕಿನ ಕಲ್ಮಠದ ಡಾ, ಮಲ್ಲಿಕಾರ್ಜುನ ಮುರುಘರಾಜೇಂದ್ರ ಶ್ರೀಗಳು ಮಾತನಾಡಿ ಲಿಂಗ ನಿಷ್ಠರಾಗಿದ್ದ ನೀಲಲೋಚನ ಸ್ವಾಮೀಜಿಗಳು ಮಹಾ ತಪಸ್ವಿಗಳಾಗಿದ್ದರು ಆ ಮೂಲಕ ಈ ಭಾಗದ ಭಕ್ತರಿಗೆ ದಾರಿದೀಪವಾಗಿದ್ದರು ದೈಹಿಕವಾಗಿ ನೀಲಲೋಚನ ಶ್ರೀಗಳು ನಮ್ಮೊಂದಿಗೆ ಇಲ್ಲದಿದ್ದರೂ ಅವರ ಮಹಿಮೆ ಭಕ್ತರನ್ನು ಇಂದಿಗೂ ಉದ್ಧರಿಸುತ್ತಾ ಇದೆ ಎಂದರು.

    ಶಿವಲಿಂಗಜ್ಜಯ್ಯನವರು ಕೋಟಿ ಜಪದ ಮೂಲಕ ಸಿದ್ಧಿಸಿ ಕೊಟ್ಟಿರುವ ಮೂಲ ಸ್ವರ್ಣ ಗೌರಿ ಅಮ್ಮನವರಿಗೆ ತೊಡಿಸುವ ಮೂಗುತಿ ಹಾಗೂ ಪ್ರಸ್ತುತ ಕೋಡಿಮಠದ ಜಗದ್ಗುರುಗಳಾದ ಡಾ, ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳ ಅನುಗ್ರಹದಿಂದ ಈ ಕ್ಷೇತ್ರ ಮುಂದಿನ ದಿನಗಳಲ್ಲಿ ಉತ್ತುಂಗಕ್ಕೆ ಏರುವುದಷ್ಟೇ ಅಲ್ಲದೆ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಮಹಾ ಕ್ಷೇತ್ರವಾಗಿ ಬೆಳಗಲಿದೆ ಎಂದರು.

   ಮಾಜಿ ಶಾಸಕ ಜಿ,ಎಸ್ ಪರಮೇಶ್ವರಪ್ಪ ಮಾತನಾಡಿ ಸುಕ್ಷೇತ್ರ ಹಾರನಹಳ್ಳಿ ಕೋಡಿಮಠವು ಯಾವುದೇ ಒಂದು ಜಾತಿ ಧರ್ಮಕ್ಕೆ ಸೀಮಿತವಾಗದೆ ನಂಬಿ ಬರುವ ಭಕ್ತರ ಪಾಲಿಗೆ ವರ ನೀಡುವ ಶಕ್ತಿ ಪೀಠವಾಗಿದೆ ಶಿವಲಿಂಗಜ್ಜಯ್ಯ, ನೀಲಮ್ಮಜ್ಜಯ್ಯ, ಅವರಂತ ಮಹಾಂತಪಸ್ವಿಗಳು ನಡೆದಾಡಿದ ಪುಣ್ಯಭೂಮಿ ಈ ಪ್ರದೇಶವಾಗಿದ್ದು ಲಿಂಗೈಕ್ಯ ನೀಲಲೋಚನ ಸ್ವಾಮಿಗಳು ತೋರಿದ ದಾರಿಯಲ್ಲಿ ಪ್ರಸ್ತುತ ಜಗದ್ಗುರುಗಳಾದ ಡಾ, ಶಿವಯಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ನಮ್ಮೆಲ್ಲರಿಗೂ ಮಾರ್ಗದರ್ಶಕರಾಗಿ ಮುನ್ನಡೆಸಿಕೊಂಡು ಹೋಗುತ್ತಿರುವುದು ನಮ್ಮ ಸೌಭಾಗ್ಯವಾಗಿದೆ ಎಂದು ತಮ್ಮ ನುಡಿ ನಮನ ಸಲ್ಲಿಸಿದರು.

   ಕಾರ್ಯಕ್ರಮದಲ್ಲಿ ಕೋಡಿಮಠದ ಉತ್ತರಾಧಿಕಾರಿಗಳಾದ ಚೇತನ್ ಮರಿದೇವರು, ಹಾನಗಲ್ ವಿರಕ್ತಮಠದ ಶಿವಯೋಗಿಸ್ವರ ಸ್ವಾಮೀಜಿ, ಹಿರೇಮಠದ ಮೃತ್ಯುಂಜಯ ಸ್ವಾಮೀಜಿ, ಮಾಡಳು ನಿರಂಜನ ಪೀಠದ ರುದ್ರಮುನಿ ಸ್ವಾಮೀಜಿ, ಕಡೂರು ಮೂರು ಕಳಸ ಮಠದ ಜ್ಞಾನಪ್ರಭು ದೇಶಿ ಕೇಂದ್ರ ಸ್ವಾಮೀಜಿ.ಕೊಳಗುಂದ ಕೇದಿಗೆ ಮಠದ ಜಯಚಂದ್ರ ಶೇಖರ ಸ್ವಾಮೀಜಿ. ಆಶೀರ್ವಚನ ನೀಡಿದರೆ, ಮಾಜಿ ಶಾಸಕ ಕೆಪಿ ಪ್ರಭುಕುಮಾರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಶಶಿಧರ್, ವೈದ್ಯ ಡಾ,ಶಿವಕುಮಾರ್, ಕೋಡಿಮಠದ ಏಜೆಂಟ್ ಮಾದೇವಪ್ಪ, ಮೂಲ ಸ್ವರ್ಣ ಗೌರಿ ಅಮ್ಮನವರ ದೇವಾಲಯದ ಅಭಿವೃದ್ಧಿ ಸಮಿತಿ ಅಧ್ಯಕ್ಷ ನಟರಾಜ್, ಮುಖಂಡರಾದ ಮಾಡಳು  ಶಿವಲಿಂಗಪ್ಪ ಸೇರಿದಂತೆ ಮತ್ತು ಇತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here