ಬೊಮ್ಮಸಮುದ್ರ ಗ್ರಾಮದಲ್ಲಿ ಶ್ರೀ ಗುರು ಚನ್ನಬಸವೇಶ್ವರ ಕಳಶಾರೋಹಣ ಕಾರ್ಯಕ್ರಮ

ಉಮೇಶ್ ಬಾಣಾವರ
Disclosure: This website may contain affiliate links, which means I may earn a commission if you click on the link and make a purchase. I only recommend products or services that I personally use and believe will add value to my readers. Your support is appreciated!

ಮಾಡಾಳು  ನಮ್ಮ ಹಿರಿಯರು ಹಾಗೂ ಗುರುಗಳು ಗ್ರಾಮಗಳಲ್ಲಿ ದೇವಾಲಯಗಳನ್ನು ನಿರ್ಮಿಸಿ ಜಾತ್ರಾ ಮಹೋತ್ಸವಗಳಂತಹಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡುಜನರಲ್ಲ ಪ್ರೀತಿ ವಿಶ್ವಾಸ ಸೌಹಾರ್ದತೆ ಸಾಮರಸ್ಯ ಬಾಂಧವ್ಯ ಬೆಸೆಯಲು ಧಾರ್ಮಿಕ ಕಾರ್ಯ ಕ್ರಮದಮೂಲಕಜನರಲ್ಲಿ ಅರಿವು ಮೂಡಿಸುತ್ತಿದ್ದರು ಎಂದುಮಾಡಾಳು ನಿರಂಜನ ಪೀಠದ ರುದ್ರಮುನಿ ಸ್ವಾಮೀಜಿ ಸೋಮವಾರ ತಿಳಿಸಿದರು           ತಾಲೂಕಿನಕಣ ಕಟ್ಟಿ ಹೋಬಳಿಯ ದೈವ ಮೂಲೆ ಎಂದೇ ಹೆಸರುವಾಸಿಯಾಗಿರುವ ಬೊಮ್ಮಸಮುದ್ರ  ಗ್ರಾಮದಲ್ಲಿ ಆಯೋಜಿಸಿದ್ದ ಗ್ರಾಮದ ಶ್ರೀ ಗುರು ಚನ್ನಬಸವೇಶ್ವರ ಸ್ವಾಮಿ ದೇವಾಲಯ ಜೀರ್ಣೋದ್ಧಾರ  ಪ್ರಾರಂಭೋ ತ್ಸವ ಹಾಗೂಶಿಖರ ಕಳಶಾರೋಹಣಕಾರ್ಯಕ್ರಮ ಉದ್ಘಾಟಿಸಿ ಸ್ವಾಮೀಜಿ ಮಾತನಾಡಿದರು ಈ ಗ್ರಾಮ ಪುಟ್ಟಗ್ರಾಮವಾದರೂ ಎಲ್ಲಾ ಪಕ್ಷಗಳಿದ್ದರೂ ರಾಜಕೀಯ ಬೆರಸದೆ ಯಾವುದೇ ಭೇದಭಾವವಿಲ್ಲದೆ ಎಲ್ಲರೂ ಒಗ್ಗೂಡಿ ಇಂತಹ ಕಾರ್ಯಕ್ರಮ ಮಾಡಿರುವುದು ಅಕ್ಕ ಪಕ್ಕದ ಊರುಗಳಿಗೆ ಮಾದರಿಯಾಗಿದೆ ಮುಂದೆಯೂ ಸಹವದಂತಿಗಳಿಗೆ ಕಿವಿಗೊಡದೆ ಎಲ್ಲರೂ ಇದೇ ರೀತಿ ಸಂಘಟನೆಯಾಗಿ ಒಗ್ಗಟ್ಟಾಗಿ ಹೋದಾಗ  ಮಾತ್ರಗ್ರಾಮದ ಅಭಿವೃದ್ಧಿ ಸಾಧ್ಯ ಎಂದುಕಿವಿಮಾತು ಹೇಳಿದರು        ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಹಾರನಹಳ್ಳಿ ಸುಕ್ಷೇತ್ರ ಕೋಡಿಮಠದ ಉತ್ತರ ಅಧಿಕಾರಿ ಚೇತನ್ ಮರಿದೇವರು ಮಾತನಾಡಿ ಮನುಷ್ಯನ ಸುಖ ಸಂತೋಷದ ಬದುಕಿಗೆ ಧರ್ಮಚರಣೆ  ಮುಖ್ಯ ಭೌತಿಕ ಬದುಕಿಗೆ ಸಂಪತ್ತಷ್ಟೇ ಮುಖ್ಯವಲ್ಲಜ್ಞಾನ Iದಾಸೋಹದ ಅರಿವು ಹಾಗೂ ಆಚರಣೆ ಮುಖ್ಯಎಂದು ಶ್ರೀಗಳು ತಿಳಿಸಿದರು     ಜೀವನದಲ್ಲಿ   ಮನುಷ್ಯ ಒಳ್ಳೆಯ ಮಾತು ಉತ್ತಮ ನಡೆನುಡಿಗಳನ್ನು ಅಳವಡಿಸಿಕೊಂಡು ಆಚರಣೆಗೆ ತಂದಾಗ  ಮಾತ್ರ ಜೀವನ ಸಾರ್ಥಕವಾಗಲಿದೆ ಎಂದು ಶ್ರೀಗಳು ತಿಳಿಸಿದರು ಕಾಂಗ್ರೆಸ್ ಮುಖಂಡ ಜಿ ಬಿ ಶಶಿಧರ್ ಮಾತನಾಡಿ ಸರ್ಕಾರಗಳು ಮಾಡದಿರುವ ಕೆಲಸಗಳನ್ನು ಮಠಮಾನ್ಯಗಳು ಮಠಾಧೀಶರು  ಮಾಡಿ ಗುರುಕುಲಗಳನ್ನು ತೆರೆದುಮಕ್ಕಳಿಗೆ ಶಿಕ್ಷಣ ನೀಡಿ ಶಿಕ್ಷಣಕ್ಕೆ ಅಪಾರ ಕೊಡುಗೆ ನೀಡಿದ್ದು ಅದನ್ನು ಮರೆಯಲು ಸಾಧ್ಯವಿಲ್ಲ ಎಂದು ಹೇಳಿದರು ‘ ‘     ಜೆಡಿಎಸ್ ಮುಖಂಡ ಎನ್ ಆರ್ ಸಂತೋಷ್ ಮಾತನಾಡಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಯುವ ಸಮುದಾಯದ ಕೊರತೆ ಎದ್ದು ಕಾಣುತ್ತಿದೆ ಹಿಂದಿನ ದಿನಗಳಲ್ಲಿ   ಸ ಡಿಲಗೊಳ್ಳುತ್ತಿರುವ ಧಾರ್ಮಿಕ  ಭಾವನೆಗಳು ಆತಂಕ ಹುಟ್ಟಿಸುತ್ತಿದೆ ಯುವಕರು ಜ್ಞಾನ ಶಕ್ತಿ ಕ್ರಿಯಾಶೀಲತೆ ಹಾಗೂ ಇಚ್ಛಾಶಕ್ತಿಯನ್ನು ಬೆಳೆಸಿಕೊಂಡರೆ ಜೀವನದಲ್ಲಿ ಏನೆಲ್ಲಾ ಸಾಧನೆ ಮಾಡಬಹುದು ಎಂದು ಅವರು ಸಲಹೆ ನೀಡಿದರು        .  ಚಿಕ್ಕನಾಯಕನಹಳ್ಳಿ ತಾಲೂಕು ಬಿಜೆಪಿ ಮಾಜಿ ಶಾಸಕಕಿರಣ್ ಕುಮಾರ್ ಜಿಲ್ಲಾ ಪಂಚಾಯತಿ ಸದಸ್ಯ ಮಾಡಾಳು ಎಂ ಎಸ್ ವಿ ಸ್ವಾಮಿ ಉಪನ್ಯಾಸಕರಾದ ಕೆ ಎಸ್ ಹರಶಿವಮೂರ್ತಿತಿದಿಬ್ಬದಹಳ್ಳಿ ಶಾಮ ಸುಂದರ್ ಮಾತನಾಡಿದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗುಡಿ ಗೌಡ ಬಿಸಿ ಬಸವರಾಜ್ ವಹಿಸಿದ್ದರು ಸಮಿತಿ ಗೌರವಾಧ್ಯಕ್ಷ ಬಸವರಾಜ್       ತಾಲೂಕು ಜೆಡಿಎಸ್ ಅಧ್ಯಕ್ಷ ಕೆಎಸ್ ಚಂದ್ರಶೇಖರ್ ಗ್ರಾಪಂಸದಸ್ಯ ಕುಂಬಾರಘಟ್ಟ ಚನ್ನಬಸಪ್ಪ ಮಾಜಿ ಸದಸ್ಯರಾದ ಮಹೇಶ್ ಬಿ ಎಂ  ಮಲ್ಲಿಕಾರ್ಜುನ ಶಿಕ್ಷಕ ಯೋಗೀಶ್ ಉಪಸ್ಥಿತರಿದ್ದರು

Share This Article
Leave a Comment

Leave a Reply

Your email address will not be published. Required fields are marked *