ಅರಸಿಕೆರೆ ನಗರದಲ್ಲಿ ಇಂದು ಗೌರಿ ಗಣೇಶ ಹಬ್ಬದ ಪ್ರಯುಕ್ತ ಮಲ್ಲೇಶ್ವರ ನಗರದ ಕೊಪ್ಪಲು ಕೆರೆಗೆ ನಗರದ ನಾಗರಿಕರು ಗಣಪತಿ ಭಕ್ತಾದಿಗಳು ಗಣೇಶ ವಿಸರ್ಜನೆ ವೇಳೆ ಸ್ವಚ್ಛತೆ ಕಾಪಾಡಬೇಕೆಂದು ಮತ್ತು ಕೆರೆಗೆ ಯಾವುದೇ ವಸ್ತುಗಳನ್ನು ಹಾಕಿ ಗಲೀಜು ಮಾಡಬಾರದೆಂದು ನಗರ ಸಭೆಯ ವತಿಯಿಂದ ಹಿರಿಯ ಆರೋಗ್ಯ ನಿರೀಕ್ಷಕರಾದ ಎಮ್ ಲಿಂಗರಾಜು ಗಣೇಶ ವಿಸರ್ಜನೆಗೆ ಬರುವ ಭಕ್ತರಿಗೆ ಮನವಿ ಮಾಡಿದರು
ನಗರಸಭೆ ವತಿಯಿಂದ ವಾಹನದ ವ್ಯವಸ್ಥೆಯನ್ನು ಕೆರೆಯ ಬಳಿ ನಿಲ್ಲಿಸಿ ನಾಗರೀಕರು ತ್ಯಾಜ್ಯ ವಸ್ತುಗಳನ್ನು ನಗರಸಭೆ ವಾಹನಕ್ಕೆ ಆಗುವಂತೆ ಮತ್ತು ಗೌರಿ ಗಣೇಶ ಮೂರ್ತಿಗಳನ್ನು ಕೆರೆಯಲ್ಲಿ ನಿಗದಿಪಡಿಸಿದ ಸ್ಥಳಕ್ಕೆ ವಿಸರ್ಜಿಸುವಂತೆ ಭಕ್ತಾದಿಗಳಿಗೆ ನಾಗರಿಕರಿಗೆ ಹಿರಿಯ ಆರೋಗ್ಯ ನಿರೀಕ್ಷಕ ಎಂ ಲಿಂಗರಾಜು ತಿಳಿಸಿದರು ಸಿಬ್ಬಂದಿಗಳಾದ ವಿಜಯ್ ಮೂರ್ತಿ ಜಗದೀಶ್. ಇದ್ದರು

