
*ಕೆಎಚ್ ಮುನಿಯಪ್ಪ ರವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವಂತೆ ಟಿ ಕೃಷ್ಣಪ್ಪ ಒತ್ತಾಯ*
ಕಾಂಗ್ರೆಸ್ ಪಕ್ಷದಲ್ಲಿ ಹಾಗೂ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ರವರ ಸಂಪುಟದಲ್ಲಿ ಹಿರಿಯ ಸಚಿವರು ಆಹಾರ ಇಲಾಖೆಯ ಸಚಿವರು ಆಗಿರುವ ಕೆಎಚ್ ಮುನಿಯಪ್ಪ ರವರನ್ನು ಸಚಿವ ಸಂಪುಟ ವಿಸ್ತರಣೆ ಸಮಯದಲ್ಲಿ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಕರ್ನಾಟಕ ರಾಜ್ಯ ಪಡಿತರ ವಿತರಕರ ಸಂಘದ ರಾಜ್ಯಾಧ್ಯಕ್ಷ ಹಾಗೂ ರಾಷ್ಟ್ರೀಯ ಕಾರ್ಯಾಧ್ಯಕ್ಷ ಟಿ ಕೃಷ್ಣಪ್ಪ ಒತ್ತಾಯಿಸಿದ್ದಾರೆ
ಇಂದು ಬೆಂಗಳೂರಿನಲ್ಲಿ ಹೆಚ್ವಿ ನ್ಯೂಸ್ ಸುದ್ದಿವಾಹಿನಿ ಯೊಂದಿಗೆ ಮಾತನಾಡಿದ ಅವರು ಕೆಎಚ್ ಮುನಿಯಪ್ಪ ರವರು ಏಳು ಬಾರಿ ಲೋಕಸಭಾ ಸದಸ್ಯರಾಗಿ ಹಾಗೂ ಕೇಂದ್ರ ಸಚಿವರು ಆಗಿ ಇದುವರೆಗೆ ಉತ್ತಮವಾಗಿ ಸೇವೆ ಸಲ್ಲಿಸಿದ್ದಾರೆ
ಇದುವರೆಗೆ ಬಡವರು ದೀನದಲಿತರು ಹಾಗೂ ಧ್ವನಿ ಇಲ್ಲದೆ ಬದುಕುತ್ತಿರುವ ನಾಗರೀಕ ಸಮಾಜವನ್ನು ಮೇಲೆತ್ತುವಂತಹ ಕೆಲಸವನ್ನು ಮಾಡಿದ್ದಾರೆ ಈ ಬಾರಿ ದೇವನಹಳ್ಳಿ ಕ್ಷೇತ್ರದಿಂದ ಶಾಸಕರಾಗಿ ಕರ್ನಾಟಕ ಸರ್ಕಾರದ ಸಚಿವ ಸಂಪುಟದಲ್ಲಿ ಎರಡನೇ ಬಾರಿ ಆಹಾರ ಸಚಿವರಾಗಿ ರಾಜ್ಯದ ನಾಲ್ಕುವರೆ ಕೋಟಿ ಬಡವರ್ಗದ ಜನರಿಗೆ ಉತ್ತಮವಾಗಿ ಆಹಾರ ಪದಾರ್ಥಗಳು ಸರ್ಕಾರದ ಅನ್ನಭಾಗ್ಯ ಯೋಜನೆಯ ಯಲ್ಲಿ ತಲುಪಿಸುವ ನಿಟ್ಟಿನಲ್ಲಿ ತಮ್ಮ ಆಹಾರ ಇಲಾಖೆಯ ಜವಾಬ್ದಾರಿಗಳನ್ನು ಸಮರ್ಥವಾಗಿ ಇದುವರೆಗೂ ನಿಭಾಯಿಸಿಕೊಂಡು ಬಂದಿರುತ್ತಾರೆ ಆದ್ದರಿಂದ ಹಿರಿಯರು ಮತ್ತು ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಕಳಂಕವನ್ನು ತೆಗೆದುಕೊಳ್ಳದ ರೀತಿಯಲ್ಲಿ ಸಮರ್ಥವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಕೆಎಚ್ ಮುನಿಯಪ್ಪರವರಿಗೆ ಬಹುಮುಖ್ಯಮಂತ್ರಿ ಸ್ಥಾನವನ್ನು ನೀಡಬೇಕೆಂದು ರಾಜ್ಯದ 20,000ಕ್ಕೂ ಹೆಚ್ಚು ಪಡಿತರ ವಿತರಕರ ಪರವಾಗಿ ಸರ್ಕಾರವನ್ನು ಹಾಗೂ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ರವರಿಗೆ ಮನವಿ ಮಾಡುತ್ತಿದ್ದೆ ಎಂದು ಕೃಷ್ಣಪ್ಪ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದರು