ನಾರಾಯಣ ಹೃದಯಾಲಯ ವೋಲ್ವೋ. ಮತ್ತು ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಾಗರೀಕರಿಗೆ ಉಚಿತ ಹೃದಯ ಪರೀಕ್ಷೆ ಮತ್ತು ಕ್ಯಾನ್ಸರ್ ಪರೀಕ್ಷೆಯನ್ನು ನಡೆಸಲಾಗುತ್ತಿದೆ ಎಂದು ಇದರ ಪ್ರಯೋಜನವನ್ನು ಸಾರ್ವಜನಿಕರು ಉಪಯೋಗಿಸಿಕೊಳ್ಳಬೇಕೆಂದು ನಾರಾಯಣ ಹೃದಯಾಲಯದ ವ್ಯವಸ್ಥಾಪಕರಾದ ಜಿಎಂ ದೇವರಾಜ್ ನಾಯಕ್ ಹೇಳಿದರು
ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು ನಾರಾಯಣ ಹೃದಯಾಲಯದ ಮುಖ್ಯಸ್ಥರಾದ ಡಾ ದೇವಿ ಶೆಟ್ಟಿ ರವರ ಆಶಾಭಾವನೆಯೊಂದಿಗೆ ಪ್ರಾರಂಭವಾದ ಈ ಉಚಿತ ಆರೋಗ್ಯ ಹೃದಯ ರೋಗದ ತಪಾಸಣೆ ಶಿಬಿರ 2016 ಇಸವಿಯಲ್ಲಿ ಪ್ರಾರಂಭವಾಗಿ ಇದುವರೆಗೂ ಎಂಟು ಜಿಲ್ಲೆಗಳಲ್ಲಿ ಈ ಕಾರ್ಯಕ್ರಮಗಳನ್ನು ನಡೆಸಲಾಗಿದೆ ರಾಜ್ಯದಲ್ಲಿ ಹೃದಯ ರೋಗ ಹೆಚ್ಚಾಗುತ್ತಿರುವ ಕಾರಣದಿಂದ ಬರುವ ದಿನಗಳಲ್ಲಿ ತಾಲೂಕು ಪಟ್ಟ ಮತ್ತು ಗ್ರಾಮ ಪಂಚಾಯಿತಿ ಮಟ್ಟಗಳಲ್ಲಿ ಈ ಶಿಬಿರಗಳನ್ನು ಆಯೋಜಿಸಲಾಗುತ್ತದೆ ಎಂದು ಜಿಎಂ ದೇವರಾಜ್ ನಾಯಕ್ ಹೇಳಿದರು. ಸರ್ಕಾರಿ ಆಸ್ಪತ್ರೆಯ ವೈದ್ಯರಾದ ಡಾ. ಷಡಕ್ಷರಿ ಡಾಕ್ಟರ್ ಸುರೇಶ್ ಚಲನಚಿತ್ರ ನಟ ವಿಭವ್ ತಿಳಿದಂತೆ ಹಲವಾರು ಉಪಸ್ಥಿತರಿದ್ದರು