Home ರಾಜ್ಯ ಅರಸೀಕೆರೆ ನಗರದಲ್ಲಿ ವಾಹನ ಚಾಲಕರಿಗೆ ಪಾರ್ಕಿಂಗ್ ನಿಯಮ ಜಾರಿ..

ಅರಸೀಕೆರೆ ನಗರದಲ್ಲಿ ವಾಹನ ಚಾಲಕರಿಗೆ ಪಾರ್ಕಿಂಗ್ ನಿಯಮ ಜಾರಿ..

55
0

ಅರಸೀಕೆರೆ : ನಗರದ ಬಿಎಚ್ ರಸ್ತೆ ಎರಡು ಕಡೆ ರಸ್ತೆ ಪಕ್ಕದಲ್ಲಿ ಇಂದು ವಾಹನಗಳನ್ನು ಪಾರ್ಕಿಂಗ್ ಮಾಡಲು ಗುರುತನ್ನು ಹಾಕಿಸುವ ಮೂಲಕ ನಗರ ಪೊಲೀಸ್ ಠಾಣೆ ವತಿಯಿಂದ ನಿಯಮಗಳನ್ನು ಜಾರಿಗೊಳಿಸಲಾಗಿದೆ. ವಾಹನಗಳನ್ನು ಪಾದಚಾರಿ ಮಾರ್ಗಗಳಲ್ಲಿ ಅಥವಾ ರಸ್ತೆಯ ಅಡ್ಡಲಾಗಿ ನಿಲ್ಲಿಸುವುದು, ಸಂಚಾರಕ್ಕೆ ಅಡ್ಡಿಪಡಿಸುವುದು ಅಥವಾ ಅನುಮತಿ ಇಲ್ಲದ ಸ್ಥಳಗಳಲ್ಲಿ ವಾಹನಗಳನ್ನು ನಿಲ್ಲಿಸುವುದನ್ನು ತಪ್ಪಿಸಬೇಕು ಹಾಗೂ ಪಾರ್ಕಿಂಗ್ ನಿಯಮಗಳನ್ನು ಉಲ್ಲಂಘಿಸಿದರೆ ದಂಡ ವಿಧಿಸಲಾಗುವುದು ಎಂದು ಡಿ ವೈ ಎಸ್ ಪಿ ಗೋಪಿ ಬಿ ಆರ್ ತಿಳಿಸಿದರು

ಇಲ್ಲಿ ಕೆಲವು ಮುಖ್ಯವಾದ ಪಾರ್ಕಿಂಗ್ ನಿಯಮಗಳು:

ಪಾದಚಾರಿ ಮಾರ್ಗಗಳಲ್ಲಿ ನಿಲ್ಲಿಸಬೇಡಿ:
ಪಾದಚಾರಿ ಮಾರ್ಗಗಳಲ್ಲಿ ವಾಹನಗಳನ್ನು ನಿಲ್ಲಿಸುವುದು ಕಾನೂನು ಬಾಹಿರ.

ಸಂಚಾರಕ್ಕೆ ಅಡ್ಡಿಪಡಿಸಬೇಡಿ:
ವಾಹನಗಳನ್ನು ನಿಲ್ಲಿಸುವಾಗ ರಸ್ತೆಯಲ್ಲಿ ಸಂಚಾರಕ್ಕೆ ಅಡ್ಡಿಯಾಗದಂತೆ ನೋಡಿಕೊಳ್ಳಿ.

ಅನುಮತಿ ಇಲ್ಲದ ಸ್ಥಳಗಳಲ್ಲಿ ನಿಲ್ಲಿಸಬೇಡಿ:
ಪಾರ್ಕಿಂಗ್ ನಿಷೇಧಿತ ಸ್ಥಳಗಳಲ್ಲಿ ಅಥವಾ ಖಾಸಗಿ ಆಸ್ತಿಯಲ್ಲಿ ಅನುಮತಿ ಇಲ್ಲದೆ ವಾಹನ ನಿಲ್ಲಿಸಬೇಡಿ.

ಸರಿಯಾಗಿ ಬೆಳಕು ಇರುವ ಸ್ಥಳದಲ್ಲಿ ನಿಲ್ಲಿಸಿ:
ರಾತ್ರಿಯಲ್ಲಿ ವಾಹನವನ್ನು ನಿಲ್ಲಿಸುವಾಗ, ಚೆನ್ನಾಗಿ ಬೆಳಕು ಇರುವ ಸ್ಥಳದಲ್ಲಿ ನಿಲ್ಲಿಸಿ, ಇಲ್ಲದಿದ್ದರೆ ಕತ್ತಲಲ್ಲಿ ವಾಹನಗಳು ನಿಲ್ಲಿಸಿ ಹೋದರೆ ಅಪಘಾತ ಆಗುವ ಸಂಭವವಿರುತ್ತದೆ ಆ ಕಾರಣದಿಂದ ವಾಹನಗಳನ್ನು ಬೆಳಕು ಇರುವ ಜಾಗದಲ್ಲಿ ನಿಲ್ಲಿಸಿ ಇಲ್ಲದಿದ್ದರೆ ದಂಡ ವಿಧಿಸಲಾಗುತ್ತದೆ.
ಪಾರ್ಕಿಂಗ್ ಚಿಹ್ನೆಗಳನ್ನು ಅನುಸರಿಸಿ:
ರಸ್ತೆಯಲ್ಲಿರುವ ಪಾರ್ಕಿಂಗ್ ಚಿಹ್ನೆಗಳನ್ನು ಗಮನಿಸಿ ಮತ್ತು ಅದರ ಪ್ರಕಾರ ವಾಹನ ನಿಲ್ಲಿಸಿ.
ನೀವು ನಿಯಮಗಳನ್ನು ಅನುಸರಿಸದಿದ್ದರೆ, ದಂಡ ವಿಧಿಸಲಾಗುತ್ತದೆ ಆದದರಿಂದ ಎಲ್ಲಾ ವಾಹನ ಚಾಲಕರು ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಎಚ್ಚರಿಕೆ ನೀಡಲಾಗಿದೆ

ಈ ಸಂದರ್ಭದಲ್ಲಿ ನಗರ ಪೊಲೀಸ್ ಠಾಣೆ ಸರ್ಕಲ್ ಇನ್ಸ್ಪೆಕ್ಟರ್ ರಾಘವೇಂದ್ರ ಸಬ್ ಇನ್ಸ್ಪೆಕ್ಟರ್ ದಿಲೀಪ್ ಕುಮಾರ್,, ಪ್ರಕಾಶ್. ಬಿ.ಸಿ ಉಪಸ್ಥಿದ್ದರು …. ವರದಿ ಮೋಹಿದೀನ್ ಪಾಷ

LEAVE A REPLY

Please enter your comment!
Please enter your name here