ಸ್ವಾತಂತ್ರ‍್ಯ ದಿನಾಚರಣೆ : ಸನ್ಮಾನಿತರ ವಿವರ

ಉಮೇಶ್ ಬಾಣಾವರ
Disclosure: This website may contain affiliate links, which means I may earn a commission if you click on the link and make a purchase. I only recommend products or services that I personally use and believe will add value to my readers. Your support is appreciated!

ಸ್ವಾತಂತ್ರ‍್ಯ ದಿನಾಚರಣೆ : ಸನ್ಮಾನಿತರ ವಿವರ
ಹಾಸನ ಆ.15     ಜಿಲ್ಲಾ ಕ್ರೀಡಾಂಗಣದ ಹಾಕಿ ಮೈದಾನದಲ್ಲಿ ಇಂದು ನಡೆದ ಸ್ವಾತಂತ್ರ‍್ಯ ದಿನಾಚರಣೆ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ/ಸಾಧನೆ ಮಾಡಿರುವ ಸಾಧಕರಿಗೆÀ ಸನ್ಮಾನಿತರ ವಿವರ
ಅಂಗಾAಗ ದಾನಿಗಳು: ಮೃತರಾದ ಪುನೀತ್ ಡಿ.ಕೆ ಅವರ ಹೃದಯ, ಯಕೃತ್ತು, ಮೂತ್ರಪಿಂಡಗಳು, ಕಣ್ಣಿನ ಪೊರೆಗಳು ಹಾಗೂ ವಾಲ್ವಗಳನ್ನು ದಾನ ಮಾಡುವ ಮೂಲಕ ಹಲವು ಜೀವಗಳಿಗೆ ಹೊಸ ಬಾಳನ್ನು ಕಲ್ಪಿಸಿ ಮಾನವೀಯ ಸಾಧನೆ ಮಾಡಿದ್ದಾರೆ.
ಮೃತರಾದ ಪುರುಷೋತ್ತಮ್ ಎ.ಎಂ ಅವರ ಹೃದಯ, ಯಕೃತ್ತು, ಮೂತ್ರಪಿಂಡಗಳು, ಕಣ್ಣಿನ ಪೊರೆಗಳನ್ನು ದಾನ ಮಾಡುವ ಮೂಲಕ ಹಲವು ಜೀವಗಳಿಗೆ ಹೊಸ ಬಾಳನ್ನು ಕಲ್ಪಿಸಿ ಮಾನವೀಯ ಸಾಧನೆ ಮಾಡಿದ್ದಾರೆ.,
ಪೌರಕಾರ್ಮಿಕರು : ಲೋಕೇಶ್ ಬಿನ್ ಲಕ್ಷö್ಮಯ್ಯ ಚಿಕ್ಕನಾಳ್ ಮತ್ತು ಸರೋಜಮ್ಮ ಕೋಂ ರಂಗಸ್ವಾಮಿ ಹಾಸನ ಮಹಾನಗರ ಪಾಲಿಕೆಯಲ್ಲಿ ಪೌರಕಾರ್ಮಿಕರಾಗಿ ಅತ್ಯುತ್ತಮ ಹಾಗೂ ಪ್ರಾಮಾಣಿಕ ಸೇವೆ ಸಲ್ಲಿಸಿರುತ್ತಿರುತ್ತಾರೆ.
ರಕ್ತದಾನಿಗಳು : ಜಿ.ಎಂ ರವಿ ಬಿನ್ ಮಂಜೇಗೌಡ, 1995 ರಿಂದ ಪ್ರಸ್ತುತದ ವರೆಗೆ ತುರ್ತು ಸಂದರ್ಭಗಳಲ್ಲಿ ಅಗತ್ಯವಿರುವ ರೋಗಿಗಳಿಗೆ ರಕ್ತದಾನ ಮಾಡಿರುತ್ತಾರೆ.
ಸೌಟ್ & ಗೈಡ್ಸ್ /ಭಾರತ ಸೇವಾದಳ : ಲಕ್ಷಿತ ಸಿ.ಜೆ ಬಿನ್ ಜಗದೀಶ ಸಿ.ಆರ್ ಭಾರತ ಸೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸುತ್ತಿದ್ದು, 2026 ಗೌರವಾನ್ವಿತ ರಾಜ್ಯಪಾಲರಿಂದ ‘ರಾಜ್ಯ ಪುರಸ್ಕಾರ’ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ, ಭರತನಾಟ್ಯ ಸ್ಪರ್ಧೆಯಲ್ಲಿ ಹಲವು ಸಾಧನೆಗಳನ್ನು ಮಾಡಿದ್ದು. ಮಲೇಷಷ್ಯಾದಲ್ಲಿ ನಡೆದ ಕಲಾ ಉತ್ಸವದಲ್ಲಿ ‘ಗ್ಲೋಬಲ್ ಅಜೀವರ್’ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
ವರದರಾಜು ಬಿ ಬಿನ್ ಬಸವರಾಜಪ್ಪ ಅವರು ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತç, ಸೈಟರ್ ವಿತರಿಸುವುದು ಹಾಗೂ ಬಿಸಿಯೂಟ ಸಿಬ್ಬಂದಿಗೆ ಆರೋಗ್ಯ ತಪಾಸಣೆ ನಡೆಸಿ ಉಚಿತ ಎಫ್ರಾನ್ ಮತ್ತು ಕ್ಯಾಪ್‌ಗಳನ್ನು ನೀಡಿದ್ದಾರೆ, ಭಾರತ ಸೇವಾದಳದ ಶಿಬಿರಗಳಲ್ಲಿ ವಿವಿಧ ಕೈಜೋಡಿಸಿ, ಹಾಸನಾಂಬ ದೇವಿ ಹಾಗೂ ಸಿದ್ದೇಶ್ವರ ಸ್ವಾಮಿ ಮಹೋತ್ಸವಗಳಲ್ಲಿ ವರ್ಷಗಳಿಂದ ಸ್ವಯಂಸೇವಕರಾಗಿ ಉಚಿತ ಸೇವೆ ಸಲ್ಲಿಸುತ್ತಿದ್ದಾರೆ.
ಪತ್ರಿಕೋದ್ಯಮ : ಪ್ರತಾಪ್ ಹೆಚ್.ಜಿ ಬಿನ್ ಗೋವಿಂದಪ್ಪ ಜಿಲ್ಲೆಯ ಪತ್ರಿಕೋದ್ಯಮದಲ್ಲಿ ವಿಸ್ತಾರ ನ್ಯೂಸ್, ಹಾಸನ ಜಿಲ್ಲಾ ವರದಿಗಾರರಾಗಿ ಸೇವೆ ಸಲ್ಲಿಸುತ್ತಿ ದ್ದಾರೆ.
ಕೆ ಭಾರತಿ ಕೋಂ ರವೀಂದ್ರ ವಿ ಅವರು ಪ್ರಚೋದಯ ಕನ್ನಡ ದಿನಪತ್ರಿಕೆ. ಹಾಸನ ಜಿಲ್ಲಾ ಉಪ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಅಗ್ನಿಶಾಮಕ : ಎಸ್ ಗೋಪಾಲಕೃಷ್ಣ ಇವರು ಸುದೀರ್ಘ 14 ವರ್ಷಗಳ ಕಾಲ ಅಗ್ನಿಶಾಮಕ ಹುದ್ದೆಯಲ್ಲಿ ಕಾರ್ಯ ನಿರ್ವಹಿಸಿ ಇವರ ವೃತ್ತಿ ಅಗ್ನಿಕರೆ ಮತ್ತು ರಕ್ಷಣಾಕರೆಗಳಲ್ಲಿ ಕಾರ್ಯವನ್ನು ನಿರ್ವಹಿಸಿ ತಮ್ಮ ಜೀವದ ಹಂಗನ್ನು ತೊರೆದು ಸಾರ್ವಜನಿಕರ ಪ್ರಾಣಿ ರಕ್ಷಣೆ ಮತ್ತು ಆಸ್ತಿ-ಪಾಸ್ತಿ ರಕ್ಷಣೆಗಳಲ್ಲಿ ಪ್ರಮುಖ ಜೀವನದಲ್ಲಿ ಪಾತ್ರವಹಿಸಿರುತ್ತಾರೆ.
ಸಾವಿರಾರು ಇವರ ವೃತ್ತಿ ಜೀವನದಲ್ಲಿ ಬುನಾದಿ ತರಬೇತಿ ಅಕಾಡೆಮಿ ಬೆಂಗಳೂರಿನಲ್ಲಿ ಪಡೆದು ನಂತರ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಮತ್ತು ಸಕಲೇಶಪುರ ಅಗ್ನಿಶಾಮಕ ಠಾಣೆ ಮತ್ತು ಹಾಸನ ಅಗ್ನಿಶಾಮಕ ಠಾಣೆಗಳಲ್ಲಿ ಕರ್ತವ್ಯವನ್ನು ನಿರ್ವಹಿಸಿದ್ದು, ಇವರಿಗೆ ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಇಲಾಖೆ ವತಿಯಿಂದ 10 ನಗದು ಬಹುಮಾನ ದೊರೆತ್ತಿರುತ್ತದೆ. ಇವರು ಅಗ್ನಿಕರೆ ಮತ್ತು ರಕ್ಷಣಾಕರೆಗಳಲ್ಲದೇ ಪ್ರಕೃತಿ ವಿಕೋಪ, ಪ್ರವಾಹ ಪರಿಸ್ಥಿತಿ, ಕಟ್ಟಡ ಕುಸಿತ, ರಾಸಾಯನಿಕ ಅನಿಲ ಸೋರಿಕೆ, ರಸ್ತೆ. ಅಪಘಾತ ಇನ್ನಿತರ ರಕ್ಷಣಾ ಅಪಾರವಾದ ಸಾಧನೆಯನ್ನು ಕಾರ್ಯಗಳಲ್ಲಿ ಮೆರೆದಿರುತ್ತಾರೆ.
ಕ್ರೀಡೆ : ಹರ್ಷವರ್ಧನ್ ಎಲ್.ಎಸ್ ಬಿನ್ ಶಿವಕುಮಾರ್ ಎಲ್.ಎಸ್ ಮಾರ್ಷಲ್ (ಕತ್ತಿವರಸೆ) ಕ್ರೀಡೆಯಲ್ಲಿ ಅಂತರರಾಷ್ಟಿçÃಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿ ಬೆಳ್ಳಿ ಪದಕ ಗೆದ್ದು, ಸರ್ಚಿಯಾದಲ್ಲಿ ನಡೆಯಲಿರುವ ಬ್ರಿಕ್ಸ್ (ಃಖIಅS) ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ ಹಾಗೂ ರಾಜ್ಯ, ರಾಷ್ಟ್ರೀಯ ಅಂತರರಾಷ್ಟ್ರೀಯ ಮಟ್ಟದ ಹಲವು ಚಾಂಪಿಯನ್‌ಷಿಪ್‌ಗಳಲ್ಲಿ (ಉದಾ: ಇಂಟರ್ನ್ಯಾಷನಲ್ ಮಾಸ್ಟರ್ಸ್ ಕಪ್, 37ನೇ ನ್ಯಾಷನಲ್ ಗೇಮ್ಸ್) ಚಿನ್ನ, ಬೆಳ್ಳಿ ಮತ್ತು ಕಂಸ್ಯ ಪದಕಗಳನ್ನು ಜಯಿಸಿದ್ದಾರೆ.
ಮೋಹಿತ್ ಹೆಚ್.ಎಸ್ ಬಿನ್ ಶಶಿಕುಮಾರ್ ಹಾಕಿ ವಿಶ್ವಕಪ್‌ಗೆ ಭಾರತ ತಂಡದಿAದ ಗೋಲ್ ಕೀಪರ್ ಆಯ್ಕೆಯಾಗಿರುತ್ತಾರೆ.
ಕಂದಾಯ ಇಲಾಖೆ (ಪ್ರತಿ ಉಪವಿಭಾಗದಿಂದ ಒಬ್ಬರು) : ಸುಮಂತ್ ಗ್ರಾಮ ಆಡಳಿತ ಅಧಿಕಾರಿ, ಬೆಳಗುಂಬ ವೃತ್ತ, ಕಸಬಾ ಹೋಬಳಿ, ಅರಸೀಕೆರೆ ತಾಲ್ಲೂಕು ಇವರು ಸಾರ್ವಜನಿಕರ ಜೊತೆಯಲ್ಲಿ ಸೌಹಾರ್ದತೆಯಿಂದ ವರ್ತಿಸಿರುತ್ತಿರುತ್ತಾರೆ ಅತ್ಯುತ್ತಮ ಹಾಗೂ ಸೇವೆಯನ್ನು ಸಲ್ಲಿಸುತ್ತಿರುತ್ತಾರೆ
ಸುಬ್ರಮಣ್ಯ ಎಂ.ಎನ್ ಗ್ರಾಮ ಆಡಳಿತ ಅಧಿಕಾರಿ, ನಲ್ಲೂರು ವೃತ್ತ, ಕಸಬಾ ಹೋಬಳಿ, ಚನ್ನರಾಯಪಟ್ಟಣ ತಾಲ್ಲೂಕು ಇವರು ಸಾರ್ವಜನಿಕರ ಜೊತೆಯಲ್ಲಿ ಸೌಹಾರ್ದತೆಯಿಂದ ವರ್ತಿಸಿರುತ್ತಿರುತ್ತಾರೆ ಹಾಗೂ ಅತ್ಯುತ್ತಮ ಸೇವೆಯನ್ನು ಸಲ್ಲಿಸುತ್ತಿರುತ್ತಾರೆ
ಪೊಲೀಸ್ ಇಲಾಖೆ : ಬಸನಗೌಡ ಪಾಟೀಲ್, ಹಾಸನ ಸಕಲೇಶಪುರ ತಾಲ್ಲೂಕಿನಲ್ಲಿ ಪೊಲೀಸ್ ವೃತ್ತ ನಿರೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ,.
ಅರುಣ್ ಹಾಸನ ಜಿಲ್ಲೆ ಮತ್ತು ತಾಲ್ಲೂಕಿನ ಶಾಂತಿಗ್ರಾಮ, ಪೊಲೀಸ್ ಠಾಣೆಯಲ್ಲಿ ಪೊಲೀಸ್ ಉಪ ನಿರೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಸರ್ಕಾರಿ ಸೇವೆ : ಬಿ. ಶೇಖರೇಗೌಡ ವಿಷಯ ಪರಿವೀಕ್ಷಕರು, ಡಿ.ಡಿ.ಪಿ.ಐ ಕಚೇರಿ, ಹಾಸನ ರವರು ಸಾರ್ವಜನಿಕರಿಗೆ ಅತ್ಯುತ್ತಮ ಸೇವೆಯನ್ನು ನೀಡುತ್ತಿರುತ್ತಾರೆ.
ತೀರ್ಥಪ್ರಸಾದ್, ಸಹಾಯಕ ನಿರ್ದೇಶಕರು, ಕೃಷಿ ಇಲಾಖೆ, ಹಾಸನ ರವರು ಸಾರ್ವಜನಿಕರಿಗೆ ಅತ್ಯುತ್ತಮ ಸೇವೆಯನ್ನು ನೀಡುತ್ತಿರುತ್ತಾರೆ.
ಆರೋಗ್ಯ ಇಲಾಖೆ : ಡಾ|| ಕಿಶೋರ್ ಕುಮಾರ್ ಎ.ಎನ್ ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿಯಾಗಿ ಸಾರ್ವಜನಿಕರಿಗೆ ಅತ್ಯುತ್ತಮ ಸೇವೆ ಸಲ್ಲಿಸುತ್ತಿದ್ದಾರೆ.
ಡಾ|| ನಿಸಾರ್ ಫಾತಿಮಾ ಈ ಹಿಂದೆ ಆಲೂರು ತಾಲ್ಲೂಕಿನಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿಯಾಗಿ ಹಾಗೂ ಪ್ರಸ್ತುತ ಹಾಸನ ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುತ್ತಾರೆ.
ರಸ್ತೆ ಅಪಘಾತದಲ್ಲಿ ಅಪಘಾತಕ್ಕೀಡಾದವರನ್ನು ರಕ್ಷಿಸುವವರಿಗೆ : ಕೃಷ್ಣಮೂರ್ತಿ ಎಂ.ಆರ್ ಆಂಬುಲೆನ್ಸ್ ಚಾಲಕರು ಶ್ರೀ ಜಯಚಾಮರಾಜೇಂದ್ರ ಸಾರ್ವಜನಿಕ ಆಸ್ಪತ್ರೆ, ಅರಸೀಕೆರೆ.
ಸಮಾಜ ಸೇವೆ : ನೂರ್ ಅಹಮದ್ ಕಳೆದ 15 ವರ್ಷಗಳಿಂದ ಬೇಲೂರು ಮತ್ತು ಸುತ್ತಮುತ್ತಲಿನ ನಿರ್ಗತಿಕರು ಮತ್ತು ಭಿಕ್ಷುಕರಿಗೆ ಉಚಿತ ಕಟಿಂಗ್. ಸ್ನಾನ, ಆಹಾರ, ಬಟ್ಟೆ ಹಾಗೂ ಉಚಿತ ಅಂಬ್ಯುಲೆನ್ಸ್ ಒದಗಿಸುತ್ತಿದ್ದಾರೆ.
ವಿಜಯ್ ಕುಮಾರ್ ಎಲ್.ಕೆ ಬಿನ್ ಲೇ ಕಾಂತೇಗೌಡ ಅವರು ಕಳೆದ 10 ವರ್ಷಗಳಿಂದ ಹಲವಾರು ಸರ್ಕಾರಿ ಶಾಲೆಗಳಿಗೆ ಬೆಂಚ್. ಡೆಸ್ಟ್ ಸೌಂಡ್ ಸಿಸ್ಟಮ್, ವಾಟರ್ ಫಿಲ್ಟರ್ ಹಾಗೂ ಶಾಲಾ ಕೊಠಡಿಗಳ ದುರಸ್ತಿಗೆ ಅರ್ಥೀಕ ನೆರವು ನೀಡುತ್ತಾ ಬಂದಿದ್ದಾರೆ, ಅಂಗವಿಕಲರಿಗೆ ತ್ರಿಚಕ್ರ ಬೈಕ್ ಮತ್ತು ಎಲೆಕ್ಟಿಕ್ ಆಟೋ ನೀಡಿದ್ದು, ಪವರ್ ಅಪ್ಟಿಂಗ್ ಕ್ರೀಡಾಪಟುಗಳು, ರಾಜ್ಯ ಮಟ್ಟದ ಪಂದ್ಯಾವಳಿಗಳು ಹಾಗೂ ದೇವಸ್ಥಾನಗಳ ನಿರ್ಮಾಣಕ್ಕೆ ಅರ್ಥಿಕ ಸಹಾಯ ಒದಗಿಸಿದ್ದಾರೆ.
ಇರ್ಷಾದ್ ಅಹಮದ್ ದೇಸಾಯಿ ಬಿನ್ ಹುಸೇನ್ ಖಾನ್ ದೇಸಾಯಿಬಡ ವಿದ್ಯಾರ್ಥಿಗಳಿಗೆ ಶಿಕ್ಷಣದಲ್ಲಿ ನೆರವು, ಬಡ ಕುಟುಂಬಕ್ಕೆ ಆರೋಗ್ಯ ಸೇವೆ, ವಿಧುವೆಯರು ಮತ್ತು ದುರ್ಬಲ ಮಹಿಳೆಯರಿಗೆ ಆರ್ಥಿಕ ಸಹಾಯ ಮಾಡುತ್ತಾ ಬಂದಿದ್ದಾರೆ. ಒomeಟಿಣ ಜಿoಡಿ ರಿusಣiಛಿe ವತಿಯಿಂದ- ಸಮಾಜ ಸೇವ ರತ್ನ ಪ್ರಶಸ್ತಿ.
ಹಬೀಬುಲ್ಲಾ ಬಿನ್ ವಜೀರ್ ಅಹ್ಮದ್ ಕಳೆದ 35 ವರ್ಷಗಳಿಂದ ನಿರಂತರವಾಗಿ ನಡೆಸಿದ ವಿವಿಧ ಹೋರಾಟಗಳು ಮತ್ತು ಸಮಾಜ ಸೇವೆಯನ್ನು ಗುರುತಿಸಿ, ಸರ್ಕಾರಿ ಸವಲತ್ತುಗಳನ್ನು ಫಲಾನುಭವಿಗಳಿಗೆ ತಲುಪಿಸಿರುವುದು, ಬಡ ರೋಗಿಗಳಿಗೆ ಉಚಿತ ಚಿಕಿತ್ಸೆ ಕೊಡಿಸಿರುವುದು. ಆಶ್ರಮವಾಸಿಗಳು ಮತ್ತು ನಿರಾಶ್ರಿತ ಕುಟುಂಬಗಳಿಗೆ ನೆರವು ನೀಡಿದ್ದು ಹಾಗೂ ನೂರಾರು ಅನಾಥ ಶವಗಳಿಗೆ ಅವರವರ ಧರ್ಮದಂತೆ ಅಂತ್ಯಸAಸ್ಕಾರ ನೆರವೇರಿಸಿರುತ್ತಾರೆ.
ಸಾವಯವ ಕೃಷಿ : ಲತಾ ಕೋಂ ಯೋಗಣ್ಣ ಸಾಕಷ್ಟು ಪ್ರಮಾಣದ ತೆಂಗು, ಅಡಿಕೆ, ವಿವಿಧ ಹಣ್ಣು-ತರಕಾರಿಗಳು ಮತ್ತು ಸಿರಿಧಾನ್ಯಗಳನ್ನು ಸಾವಯವ ಪದ್ಧತಿಯಲ್ಲಿ ಯಶಸ್ವಿಯಾಗಿ ಬೆಳೆದು, ಕೃಷಿ ಮೇಳಗಳಲ್ಲಿ ಭಾಗವಹಿಸಿ, ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡುತ್ತಾ ರೈತರಿಗೆ ಸಾವಯವ ಕೃಷಿಯ ಬಗ್ಗೆ ಜಾಗೃತಿ ಮೂಡಿಸಿರುತ್ತಾರೆ.

Share This Article
Leave a Comment

Leave a Reply

Your email address will not be published. Required fields are marked *