ಮುಖ್ಯ ವಿಷಯಕ್ಕೆ ಹೋಗಿ
Latest
ರಾಜಕೀಯ

ಹಿಂದುಳಿದ ವರ್ಗಕ್ಕೆ ಪ್ರತ್ಯೇಕ ಸಚಿವಾಲಯ ಸ್ಥಾಪನೆಗೆ ಒತ್ತಾಯ

*ಹಿಂದುಳಿದ ವರ್ಗಕ್ಕೆ ಪ್ರತ್ಯೇಕ ಸಚಿವಾಲಯ ಸ್ಥಾಪನೆಗೆ ಜೆ ಎಂಜೀರಪ್ಪ ಒತ್ತಾಯ* ಓಬಿಸಿ ಫೆಡರೇಶನ್ ಆಫ್ ಇಂಡಿಯಾ ವತಿಯಿಂದ ಒಬಿಸಿ ಕಲ್ಯಾಣಕ್ಕಾಗಿ ಪ್ರತ್ಯೇಕ ಕೇಂದ್ರ ಸಚಿವಾಲಯವನ್ನು ರಚಿಸಬೇಕು ಒಬಿಸಿ ಜನಸಂಖ್ಯೆಗೆ ಅನುಗುಣವಾಗಿ ವಿಧಾನಸಭೆಗಳು ಮತ್...

ನಿರ್ವಾಹಕ· 5 ನಿಮಿಷ ಓದು
ಹಂಚಿಕೊಳ್ಳಿ:

*ಹಿಂದುಳಿದ ವರ್ಗಕ್ಕೆ ಪ್ರತ್ಯೇಕ ಸಚಿವಾಲಯ ಸ್ಥಾಪನೆಗೆ ಜೆ ಎಂಜೀರಪ್ಪ ಒತ್ತಾಯ* ಓಬಿಸಿ ಫೆಡರೇಶನ್ ಆಫ್ ಇಂಡಿಯಾ ವತಿಯಿಂದ ಒಬಿಸಿ ಕಲ್ಯಾಣಕ್ಕಾಗಿ ಪ್ರತ್ಯೇಕ ಕೇಂದ್ರ ಸಚಿವಾಲಯವನ್ನು ರಚಿಸಬೇಕು ಒಬಿಸಿ ಜನಸಂಖ್ಯೆಗೆ ಅನುಗುಣವಾಗಿ ವಿಧಾನಸಭೆಗಳು ಮತ್ತು ಲೋಕಸಭೆಯಲ್ಲಿ ಮೀಸಲಾತಿ ಜಾರಿಗೊಳಿಸಬೇಕು ರಾಷ್ಟ್ರೀಯ ಜಾತಿ ಜನಗಣತಿ ನಮೂನೆಗಳಲ್ಲಿ ಓಬಿಸಿ ಅಂಕಣವನ್ನು ಸೇರಿಸಬೇಕು ಸೇರಿದಂತೆ ಇನ್ನೂ ಹಲವಾರು ಪ್ರಮುಖ ಬೇಡಿಕೆಗಳನ್ನು ಈಡೇರಿಕೆಗಾಗಿ ಶೀಘ್ರದಲ್ಲಿಯೇ ಕನ್ಯಾಕುಮಾರಿಯಿಂದ ದೆಹಲಿಯವರೆಗೆ ರಾಷ್ಟ್ರೀಯ ಒಬಿಸಿ ಏಕತಾ ಆಂದೋಲನ ಮತ್ತು ಹಕ್ಕುಗಳ ಯಾತ್ರೆ ನಂತರ ದೆಹಲಿಯ ರಾಮಲೀಲಾ ಮೈದಾನದಲ್ಲಿ ಬೃಹತ್ ರ್ಯಾಲಿಯನ್ನು ನಡೆಸಲಾಗುವುದು ನಂತರ ನವಂಬರ್ ನಲ್ಲಿ ನಡೆಯಲಿರುವ ಸಂಸತ್ ಅಧಿವೇಶನದ ವೇಳೆ ಜಂತರ್ ಮಂತರ್ನಲ್ಲಿ ಬೃಹತ್ ಪ್ರತಿಭಟನ ಪ್ರದರ್ಶನವನ್ನು ಸಹ ಹಮ್ಮಿಕೊಳ್ಳಲಾಗುವುದೆಂದು ಒಬಿಸಿ ಫೆಡರೇಶನ್ ಆಫ್ ಇಂಡಿಯಾದ ರಾಷ್ಟ್ರೀಯ ಅಧ್ಯಕ್ಷರಾದ ಜೆ ಎಂ ಜೀರಪ್ಪ ತಿಳಿಸಿದರು ಇತ್ತೀಚಿಗೆ ಮಾಧ್ಯಮದೊಂದಿಗೆ ಮಾತನಾಡಿದ ಅವರು ಓಬಿಸಿ ಫೆಡರೇಶನ್ ಆಫ್ ಇಂಡಿಯಾದ ವತಿಯಿಂದ ಪ್ರಮುಖ ಬೇಡಿಕೆಗಳು ಏನೆಂದರೆ ಕೇಂದ್ರ ಸರ್ಕಾರದಲ್ಲಿ ಪ್ರತ್ಯೇಕವಾಗಿ ಹಿಂದುಳಿದ ವರ್ಗಗಳ ಓಬಿಸಿ ಇಲಾಖಾ ಸಚಿವಾಲಯ ಸ್ಥಾಪನೆ ರಾಜಕೀಯ ಮೀಸಲಾತಿಯಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಸುಮಾರು ದೇಶದಲ್ಲಿ ಶೇಕಡ 56 ರಷ್ಟು ಇರುವ ಒಬಿಸಿ ಸಮುದಾಯಕ್ಕೆ ಕೇಂದ್ರ ಸರ್ಕಾರವು ಎಲ್ಲಾ ರಾಜ್ಯಗಳಲ್ಲಿ ಶಾಸಕಾಂಗ ಮತ್ತು ಸಂಸತ್ತಿನ ಚುನಾವಣೆಯಲ್ಲಿಯೂ ಸಹ ಒಬಿಸಿ ರಾಜಕೀಯ ಮೀಸಲಾತಿ ತಕ್ಷಣ ಜಾರಿ ಮಾಡಬೇಕು ಸುಪ್ರೀಂ ಕೋರ್ಟ್ ಸೇರಿದಂತೆ ಅನೇಕ ನ್ಯಾಯಾಲಯಗಳಲ್ಲಿ ಒಬಿಸಿ ಸಂಬಂಧಿಸಿದ ವ್ಯಾಜ್ಯಗಳಿಗೆ ನ್ಯಾಯ ಸಿಗುತ್ತಿಲ್ಲ ಏಕೆಂದರೆ ಸಮಗ್ರವಾದ ಅಧಿಕೃತ ದತ್ತಾಂಶಗಳ ಕೊರತೆಯಿಂದ ಓಬಿಸಿ ಸಮುದಾಯಗಳ ನ್ಯಾಯಯುತ ಹೋರಾಟಗಳು ತಾರ್ಕಿಕ ಅಂತ್ಯ ತಲುಪುತ್ತಿಲ್ಲ 1931 ರ ನಂತರ ದೇಶದಲ್ಲಿ ನಿಯಮಿತವಾಗಿ ಜನಗಣತಿಯನ್ನು ಮಾತ್ರ ನಡೆಸಲಾಗುತ್ತಿದೆ ಒಮ್ಮೆಯೂ ಜಾತಿ ಜನಗಣತಿ ನಡೆಯದೇ ಇರುವುದು ಈ ದತ್ತಾಂಶಗಳ ಕೊರತೆಗೆ ಕಾರಣವಾಗಿದೆ ಇದನ್ನು ಸರಿಪಡಿಸಬೇಕು ಕೇಂದ್ರ ಸರ್ಕಾರ ಇಡೀ ದೇಶದಲ್ಲಿ ಜಾತಿ ಜನಗಣತಿ ನಡೆಸಲು ಮುಂದಾಗಿದೆ ಆದರೆ ಮಾಹಿತಿ ಸಂಗ್ರಹದ ವಿಷಯದಲ್ಲಿ ನಿರ್ಲಕ್ಷದ ದೂರುಗಳು ಕೇಳಿ ಬರುತ್ತಿವೆ ಈ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ನಿಗ ವಹಿಸಬೇಕೆಂದರು. ಕರ್ನಾಟಕ ರಾಜ್ಯ ಸರ್ಕಾರವು ಹಿಂದುಳಿದ ವರ್ಗಗಳ ಸಚಿವಾಲಯಕ್ಕೆ ಜನಸಂಖ್ಯೆ ಗನುಗುಣವಾಗಿ ಬಜೆಟ್ ನಲ್ಲಿ ಅನುದಾನವನ್ನು ಮೀಸಲಿಡುವುದು ಹಾಗೂ ಈ ವರ್ಗಕ್ಕೆ ಸಾಮಾಜಿಕ ನ್ಯಾಯ ದೊರಕಿಸುವುದು ಜಾತಿ ಜನಗಣತಿ ಮಾಡಿದ ಮೊದಲು ರಾಜ್ಯವಾಗಿ ಕರ್ನಾಟಕ ಎಂದು ನಿಲ್ಲಬೇಕಿತ್ತು ಆದರೆ 2013ರಲ್ಲಿ ಆರಂಭವಾದರೂ ರಾಜಕೀಯ ನಿರ್ಲಕ್ಷದಿಂದ ಜಾತಿ ಜನಗಣತಿ ಇನ್ನೂ ಪೂರ್ಣಗೊಂಡಿಲ್ಲ ಈ ವಿಳಂಬ ನ್ಯಾಯದಿಂದ ಒಬಿಸಿ ಸಮುದಾಯಗಳು ಬೇಸತ್ತಿವೆ ನ್ಯಾಯಾಲಯದ ತಕರಾರುಗಳು ಸಮರ್ಪಕವಾಗಿ ನಿಭಾಯಿಸಿ ಕರ್ನಾಟಕ ಸರ್ಕಾರ ನ್ಯಾಯಮೂರ್ತಿ ಮಧುಸೂದನ್ ನಾಯಕ್ ವರದಿಯನ್ನು ಜಾರಿ ಮಾಡಬೇಕು ಕರ್ನಾಟಕ ರಾಜ್ಯ ಸರ್ಕಾರವು ಈ ಹಿಂದೆ ಅನೇಕ ಒಬಿಸಿ ಸಮುದಾಯಗಳಿಗೆ ನಿಗಮಗಳನ್ನು ಘೋಷಿಸಲಾಗಿತ್ತು ಈ ನಿಗಮಗಳು ಹಣಕಾಸಿನ ನೆರವಿಲ್ಲದೆ ಸ್ವರಗಿವೆ ಈ ಎಲ್ಲಾ ನಿಗಮಗಳಿಗೆ ತಲಾ 100 ಕೋಟಿ ಎಷ್ಟು ಅನುದಾನ ಬಿಡುಗಡೆ ಮಾಡಬೇಕು ಓಬಿಸಿ ಸಮುದಾಯಗಳಲ್ಲೂ ಕೆಲವೇ ಸಮುದಾಯಗಳು ಹೆಚ್ಚಿನ ಅವಕಾಶ ಪಡೆಯುತ್ತಿವೆ ಸಣ್ಣ ಜಾತಿಗಳು ಕಾಯಕ ಸಮುದಾಯಗಳು ನಿರ್ಲಕ್ಷಕ್ಕೆ ಒಳಗಾಗಿವೆ. ಈ ಬಗ್ಗೆ ತುರ್ತು ಗಮನವಹಿಸಿ ವಿಶೇಷ ಯೋಜನೆ ರೂಪಿಸಬೇಕು ಶಿಕ್ಷಣ ಮತ್ತು ಉದ್ಯೋಗದ ಮೀಸಲಾತಿಯನ್ನು ಒಬಿಸಿ ಸಮುದಾಯಗಳಿಗೆ ಐದು ಪ್ರವರ್ಗಗಳಲ್ಲಿ ನೀಡಲಾಗುತ್ತಿದೆ ಆದರೆ ರಾಜಕೀಯ ಮೀಸಲಾತಿಯನ್ನು ಹಿಂದುಳಿದ ವರ್ಗ ಆ ಮತ್ತು ಹಿಂದುಳಿದ ವರ್ಗಗಳಲ್ಲಿ ನೀಡುತ್ತಿದೆ ಇದು ಅವೈಜ್ಞಾನಿಕವಾಗಿದೆ ಸಂವಿಧಾನ ವಿರೋಧಿಯಾಗಿದೆ ಈ ಬಗ್ಗೆ ನ್ಯಾಯಮೂರ್ತಿ ಭಕ್ತ ವತ್ಸಲ ಆಯೋಗ ಕೊಟ್ಟಿರುವ ವರದಿಯನ್ನು ಜಾರಿಗೆ ಮಾಡಬೇಕು ಸ್ಥಳೀಯ ಸಂಸ್ಥೆಗಳಲ್ಲಿ ಇರುವ ಓಬಿಸಿ ಮೀಸಲಾತಿ ಎಲ್ಲರಿಗೂ ಸಿಗುವಂತೆ ಮಾಡಬೇಕು ಜಾಗತೀಕರಣ ಮತ್ತು ತಂತ್ರಜ್ಞಾನದ ಒಡತದಿಂದ ಕಸುಬು ಕೌಶಲ್ಯಗಳು ತತ್ತರಿಸಿ ಹೋಗಿವೆ ಇದರಿಂದಾಗಿ ಒಬಿಸಿ ಸಮುದಾಯಗಳು ಮೂಲ ಹಳ್ಳಿಗಳನ್ನು ಬಿಟ್ಟು ನಗರಗಳಲ್ಲಿ ಅತಂತ್ರ ಜೀವನದಲ್ಲಿ ಕಳೆದುಹೋಗುತ್ತಿದ್ದಾರೆ ಮೂಲ ಕಸುಬುದಾರರಿಗೆ ವೃತ್ತಿ ಮುಂದುವರಿಸಲು ಪ್ರತೀ ತಿಂಗಳು ಕನಿಷ್ಠ 5000 ಸಹಾಯಧನ ನೀಡಬೇಕು ಸರ್ಕಾರಗಳು ರೈತರಿಗೆ ಮಹಿಳೆಯರಿಗೆ ಪ್ರತಿ ತಿಂಗಳು ಸಹಾಯಧನವನ್ನು ಅವರ ಖಾತೆಗೆ ಜಮಾ ಮಾಡುತ್ತಿವೆ ಆದರೆ ದೇಶದ ಬೆನ್ನೆಲುವಾಗಿರುವ ಕುಶಲಕರ್ಮಿಗಳು ಕಾಯಕ ಸಮುದಾಯಗಳು ಇವರನ್ನು ನಿರ್ಲಕ್ಷಿಸುವುದು ಸರಿಯಲ್ಲ ಎಂಬುದು ಕೇಂದ್ರ ರಾಜ್ಯ ಸರ್ಕಾರಗಳು ಅರ್ಥಮಾಡಿಕೊಳ್ಳಬೇಕು ಓಬಿಸಿ ಸಮುದಾಯಗಳ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ವಿತರಣೆಯಲ್ಲಿಯೂ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ ಉನ್ನತ ಶಿಕ್ಷಣ ಪಡೆಯಲು ಅಗತ್ಯವಾಗಿರುವ ಸ್ಕಾಲರ್ಶಿಪ್ ಯೋಜನೆಗೆ ಆದ್ಯತೆ ಕೊಡಬೇಕು ಅಕಾಡೆಮಿಗಳು ಉಪಕುಲಪತಿಗಳು ಸೇರಿದಂತೆ ಎಲ್ಲಾ ರೀತಿಯ ನಾಮಕರಣದ ಸಂದರ್ಭದಲ್ಲಿ ಓಬಿಸಿ ಸಮುದಾಯಗಳ ಪ್ರಾತಿನಿಧ್ಯ ದ್ವಿಗುಣಗೊಳಿಸಬೇಕು ಏಕೆಂದರೆ ನೂರಾರು ಒಬಿಸಿ ಸಮುದಾಯಗಳು ರಾಜಕೀಯ ಪ್ರಾತಿನಿಧ್ಯವಿಲ್ಲದೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ ಈ ಬಗ್ಗೆ ತುರ್ತು ಗಮನ ಅಗತ್ಯವಾಗಿದೆ ಕುಲಕಸುಬುಗಳಿಗೆ ಆಧುನಿಕತೆ ಮತ್ತು ತಂತ್ರಜ್ಞಾನದ ಅಳವಡಿಕೆ ಅಗತ್ಯವಾಗಿದೆ ಈ ಬಗ್ಗೆ ಸಮರ್ಪಕವಾದ ತರಬೇತಿ ವ್ಯವಸ್ಥೆಯನ್ನು ತುರ್ತುರೂಪಿಸಬೇಕು ರಾಜ್ಯ ಸರ್ಕಾರಗಳು ಒಬಿಸಿ ಸಮುದಾಯಗಳ ಕೌಶಲ್ಯ ಕೇಂದ್ರಿತವಾದ ಆಧುನಿಕ ಸೌಲಭ್ಯಗಳೊಂದಿಗೆ ಹೊಸ ವಿಶ್ವವಿದ್ಯಾಲಯವನ್ನು ರೂಪಿಸಬೇಕು ಇಷ್ಟು ಬೇಡಿಕೆಗಳನ್ನು ಈಡೇರಿಕೆಗಾಗಿ ಓಬಿಸಿ ಫೆಡರೇಶನ್ ಆಫ್ ಇಂಡಿಯಾ ವತಿಯಿಂದ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳ ಮೇಲೆ ಒತ್ತಡ ತರಲಾಗುವುದೆಂದು ಓಬಿಸಿ ಫೆಡರೇಶನ್ ಆಫ್ ಇಂಡಿಯಾದ ರಾಷ್ಟ್ರೀಯ ಅಧ್ಯಕ್ಷರಾದ ಜೆ ಎಂಜಿರಪ್ಪ ತಿಳಿಸಿದ್ದಾರೆ ಓಬಿಸಿ ಫೆಡರೇಷನ್ ಆಫ್ ಇಂಡಿಯಾದ ರಾಷ್ಟ್ರೀಯ ಸಂಚಾಲಕ ಶಿವಪ್ಪ ಲಮಾಣಿ ಉಪಸ್ಥಿತರಿದ್ದರು ಬಂಜಾರ ಗುರುಪೀಠ ಚಿತ್ರದುರ್ಗ ಶ್ರೀ ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮೀಜಿ. ಪ್ರತಿಕ್ರಿಯೆ ಸಾಮಾಜಿಕ ನ್ಯಾಯ ರಾಜಕೀಯ ಪ್ರಾತಿನಿಧ್ಯ ಸರ್ವರಿಗೂ ಸಮಪಾಲು ಸಮ ಬಾಳು ಎಂಬ ಉದ್ದೇಶದಿಂದ ಕೂಡಲೇ ರಾಷ್ಟ್ರೀಯ ಓಬಿಸಿ ಏಕತಾ ಆಂದೋಲನವನ್ನು ನಡೆಸುತ್ತಿದ್ದು ಹಲವಾರು ರಾಜ್ಯಗಳಿಂದಲೂ ಸಹ ಉತ್ತಮ ಪ್ರತಿಕ್ರಿಯೆ ಬರುತ್ತಿದ್ದು ರಾಷ್ಟ್ರಮಟ್ಟದಲ್ಲಿ ಹಿಂದುಳಿದ ವರ್ಗಕ್ಕೆ ಶಕ್ತಿ ನೀಡುವಂತಹ ಈ ಸಂಘಟನೆಯಿಂದ ಹೋರಾಟ ನಡೆಸಲಾಗುವುದು ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕೂಡಲೇ ಈ ನಮ್ಮ ಮನವಿಗಳ ಬಗ್ಗೆ ಗಮನಹರಿಸಬೇಕಿದೆ ಎಂದು ಶ್ರೀ ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮೀಜಿ ಪ್ರತಿಕ್ರಿಯಿಸಿದ್ದಾರೆ

ಹಂಚಿಕೊಳ್ಳಿ: