ಅಂತರಾಷ್ಟ್ರೀಯ ಮಾನವ ಹಕ್ಕುಗಳ ನ್ಯಾಯಾಂಗ ಸಂರಕ್ಷಣಾ ಮಂಡಳಿ ವತಿಯಿಂದ…

2025ನೇ ಆಗಸ್ಟ್ 15ಕ್ಕೆ
ಭಾರತದ ದೇಶ ಸೇವೆಗಾಗಿ ಹಗಲಿರುಳು ಹೋರಾಡುತ್ತ ತಮ್ಮ ಪ್ರಾಣ ತ್ಯಾಗ ಮಾಡಿದಂತಹ ಹುತಾತ್ಮರಿಗೆ ನಮಿಸುತ್ತಾ ಅವರ ಹೆಸರಿನಲ್ಲಿ ಗಿಡ ನೆಡುವ ಮೂಲಕ – ಹಸಿರಿನೊಂದಿಗೆ ರಾಷ್ಟ್ರವನ್ನು ನಮಿಸುತ್ತಾ ಸ್ವಾಗತಿಸೋಣ” ಎಂಬಾ ರಾಷ್ಟ್ರೀಯ ಗಿಡ ನೆಡುವ ಅಭಿಯಾನಕ್ಕೆ ಸಹಕಾರ ಮತ್ತು ಅನುಮತಿಗಾಗಿ ಹಾಸನ ಜಿಲ್ಲೆಯ ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಮಾನ್ಯ ಪೊಲೀಸ್ ಅಧೀಕ್ಷಕರಿಗೆ ಸಹಕಾರ ನೀಡುವಂತೆ ಮನವಿ ಪತ್ರ ನೀಡಲಾಯಿತು.
ಈ ಸಂದರ್ಭದಲ್ಲಿ ಅಂತರಾಷ್ಟ್ರೀಯ ಮಾನವ ಹಕ್ಕುಗಳ ನ್ಯಾಯಾಂಗ ಸಂರಕ್ಷಣಾ ಮಂಡಳಿಯ ರಾಜ್ಯ ಉಸ್ತುವಾರಿಯಾದ ಮಂಜುನಾಥ್ ಆರ್.
ಹಾಸನ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷ ಮೊಹಮ್ಮದ್ ನಾಸಿರ್. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಭಿಲಾಷ್ ಎಚ್ ಎಸ್. ಹಾಗೂ ಅರಸೀಕೆರೆ ತಾಲ್ಲೂಕು ಅಧ್ಯಕ್ಷರು ತನ್ವಿರ್ ಖಾನ್. ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಮುನಫ್ ಬೆಗ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ರಾಜ್ಯ ಉಸ್ತುವಾರಿಯಾದ ಮಂಜುನಾಥ್ ಆರ್ ಅವರು ಮತ್ತು ಅಲ್ಲಿ ನೆರೆದಿದ್ದಂತಹ ಘಟಕದ ಎಲ್ಲಾ ಪದಾಧಿಕಾರಿಗಳು ಸೇರಿ ನಮ್ಮ ಸಂಸ್ಥೆ “ಅಂತರಾಷ್ಟ್ರೀಯ ಮಾನವ ಹಕ್ಕುಗಳ ನ್ಯಾಯಂಗ ಸಂರಕ್ಷಣಾ ಮಂಡಳಿ” ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ, 15 ನೇ ಆಗಸ್ಟ್ 2025 ರಂದು,
ಕರ್ನಾಟಕ ರಾಜ್ಯ ಮತ್ತು ಭಾರತದ ಇತರ ರಾಜ್ಯಗಳಾದ್ಯಂತ “ಏಕ್ ವೃಕ್ಷ ಶಹೀದ್ ಕೆ ನಾಮ್ – ಹರಿಯಲಿ ಸೆ ಕರೆನ್ ರಾಷ್ಟ್ರ ಕೋ ಸಲಾಮ್” ಎಂಬ ರಾಷ್ಟ್ರವ್ಯಾಪಿ ಗಿಡ ನೆಡುವ ಅಭಿಯಾನವನ್ನು ಆಯೋಜಿಸುತ್ತಿದೆ ಎಂದು ಮತ್ತು ಕಾರ್ಯಕ್ರಮದ ರೂಪರೇಷೆಯ ಬಗ್ಗೆ ಅಂದರೆ
ನಮ್ಮ ಮಾತೃಭೂಮಿಗಾಗಿ ಸೇವೆ ಸಲ್ಲಿಸಿ ಹುತಾತ್ಮರಾದಂತಹ ವೀರ ಯೋಧರ ನೆನಪಿಗಾಗಿ ಗಿಡಗಳನ್ನು ನೆಡುವುದು,
ಅವರ ಕುಟುಂಬಗಳನ್ನು, ವಿಶೇಷವಾಗಿ ತಾಯಂದಿರನ್ನು ವೇದಿಕೆಯಲ್ಲಿ ಗೌರವಿಸುವುದು ಮತ್ತು ಪರಿಸರ ಸಂರಕ್ಷಣೆ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿಯನ್ನು ಉತ್ತೇಜಿಸುವ ಮೂಲಕ ಅವರಿಗೆ ಗೌರವ ಸಲ್ಲಿಸುವುದು
ಈ ಅಭಿಯಾನದ ಉದ್ದೇಶವಾಗಿದೆ ಎಂದು ತಿಳಿಸಿದರು.
ಅದರಂತೆ ಆಡಳಿತಾತ್ಮಕ ಅಧಿಕಾರಿಗಳಿಂದ ಅನುಮತಿ ಮತ್ತು ಸಹಕಾರವನ್ನು ನೀಡುವ ಮೂಲಕ ಅಭಿಯಾನವನ್ನು ಯಶಸ್ವಿಗೊಳಿಸಬೇಕೆಂದು ಕೋರಿ ಕೊಳ್ಳಲಾಯಿತು..

ವರದಿ. ಮೊಹಮ್ಮದ್ ನಾಸೀರ್ ಅರಸೀಕೆರೆ.