ಜಿಲ್ಲಾ ಕಾರ್ಯಕಾರ್ಣಿ ಸಮಿತಿಯ ಮೊದಲ ಸಭೆಯ ಸಂಕ್ಷಿಪ್ತ ವರದಿ’ಪರಿಸರಕ್ಕಾಗಿ ನಾವು’ ಕರ್ನಾಟಕ ರಾಜ್ಯ ಸಂಘಟನೆಯ ಹಾಸನ ಜಿಲ್ಲಾ ಕಾರ್ಯಕಾರ್ಣಿ ಸಮಿತಿಯ ಸಭೆಯು ದಿನಾಂಕ 12/07/2025ರ ಶನಿವಾರದಂದು ಅರಕಲಗೂಡು ತಾಲೂಕು, ಕೊಣ್ಣನೂರು ಹೋಬಳಿ, ಬಿಸಿಲಹಳ್ಳಿ ಗ್ರಾಮದಲ್ಲಿ ಪರಿಸರಕ್ಕಾಗಿ ರಾಜ್ಯ ಸಂಘಟನೆ ಅಧ್ಯಕ್ಷರಾದ ಶ್ರೀ ಎ ಟಿ ರಾಮಸ್ವಾಮಿ ಅವರ ಮನೆಯಲ್ಲಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.ಈ ಸಭೆಯಲ್ಲಿ ’ಪರಿಸರಕ್ಕಾಗಿ ನಾವು’ ಸಂಘಟನೆಯ ಒಟ್ಟು 43 ಕಾರ್ಯಕರ್ತರು ಭಾಗವಹಿಸಿದ್ದರು. ಸಂಘಟನೆಯ ರಾಜ್ಯ ಅಧ್ಯಕ್ಷರು ಶ್ರೀ ಎ ಟಿ ರಾಮಸ್ವಾಮಿ, ಪ್ರಧಾನ ಕಾರ್ಯದರ್ಶಿ ಶ್ರೀ ಪರಶುರಾಮೇಗೌಡ, ಸಂಘಟನಾ ಕಾರ್ಯದರ್ಶಿ ಮಮತಾ ರಾಣಿ ಎಸ್ ಎನ್, ಹಾಸನ ಜಿಲ್ಲಾ ಸಮಿತಿಯ 16 ಪದಾಧಿಕಾರಿಗಳು, ’ಪರಿಸರಕ್ಕಾಗಿ ನಾವು’ ಸಂಘಟನೆಯ ಹಾಸನ ಜಿಲ್ಲೆಯ ವಿವಿಧ ತಾಲೂಕುಗಳ 15 ಹಾಗೂ ಮೈಸೂರು ಜಿಲ್ಲೆಯ 7 ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಿದ್ದರು.ಸಭೆಯಲ್ಲಿ ಭಾಗವಹಿಸಿದ ಎಲ್ಲರೂ ಪರಿಸರ ರಕ್ಷಣೆಗಾಗಿ ನಡೆದ ವಿಸ್ತೃತವಾಗಿ ಚರ್ಚೆಯಲ್ಲಿ ಭಾಗವಹಿಸಿ ತಮ್ಮ ಸಲಹಲೆಗಳನ್ನು ನೀಡಿದರು. ಸಭೆಯಲ್ಲಿ ರಾಜ್ಯಾಧ್ಯಕ್ಷರಾದ ಶ್ರೀ ಎ ಟಿ ರಾಮಸ್ವಾಮಿ ಅವರು ಪರಿಸರ ರಕ್ಷಣೆ ಅಗತ್ಯವನ್ನು ಹೇಳಿ ಹಾಸನ ಜಿಲ್ಲೆಯ ಕಾರ್ಯಕರ್ಣಿ ಸಮಿತಿಗೆ ಚಾಲನೆ ನೀಡಿದರು.ಈ ಹಿನ್ನೆಲೆಯಲ್ಲಿ ನಾವು ಪರಿಸರ ರಕ್ಷಣೆಯ ಕಾರ್ಯ ಹಾಗೂ ಸಂಘಟನೆಯ ವಿಸ್ತಾರವನ್ನು ಒಟ್ಟೊಟ್ಟಿಗೆ ಮಾಡಬೇಕಾಗಿದೆ. ಪೂರ್ಣ ಮಟ್ಟದ ತಾಲೂಕು, ಹೋಬಳಿ ಸಮಿತಿ ರಚನೆಗಳನ್ನು ಮಾಡಬೇಕಾಗಿದೆ. ಇದಕ್ಕೆ ಪೂರಕವಾಗಿ ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲೆಗಳಲ್ಲಿ ಗಿಡ ನೆಡಲು ಸ್ಥಳವಕಾಶ ಮತ್ತು ಕಾಂಪೌಂಡ್ ಇರುವ ಶಾಲೆಗಳಲ್ಲಿ ಶಾಲಾ ಶಿಕ್ಷಕರ ಹಾಗೂ ಇತರೆ ಪರಿಸರ ಅಸಕ್ತರ ಗುಂಪುಗಳ ಸಹಯೋಗದೊಂದಿಗೆ ಶಾಲೆಯ ಮಕ್ಕಳಿಗೆ ನಡೆಸುತ್ತಿರುವ ಬಿಸಿ ಊಟಕ್ಕೆ ಪೂರ್ಕವಾದಂತಹ ಮತ್ತು ಮಕ್ಕಳಿಗೆ ಉಪಯೋಗವಾಗುವ ಇತರ ಹಣ್ಣಿನ ಗಿಡಗಳನ್ನು ನೆಡುವ ಯೋಜನೆಗಳನ್ನು ’ಪರಿಸರಕ್ಕಾಗಿ ನಾವು’ ಸಂಘಟನೆಯಿಂದ ಜಿಲ್ಲೆ, ತಾಲೂಕು, ಮತ್ತು ಹೋಬಳಿ ಕೇಂದ್ರಗಳಲ್ಲಿ ಮಾಡಬಹುದು. ಶಾಲೆಯ ಅಗತ್ಯಕ್ಕೆ ತಕ್ಕಂತೆ ನುಗ್ಗೆ, ಹುಣಸೆ, ಹಲಸು, ನಲ್ಲಿ, ನೇರಳೆ ಮತ್ತು ಕರಿಬೇವು, ಚಕ್ಕೆ, ಲವಂಗ ಹಾಗೂ ಇತರ ಗಿಡಗಳನ್ನು ನೆಡಬಹುದು. ಗಿರೀಶ್ ಆರ್ ಜಿ’ಪರಿಸರಕ್ಕಾಗಿ ನಾವು’ಹಾಸನ ಜಿಲ್ಲಾ ಪ್ರಧಾನ ಕಾರ್ಯದರ್ಶಿ