ಮಾಡಾಳು ನಿಮಗೆ ಒಲಿದು ಬಂದಿರುವ ಮಂತ್ರಿ ಸ್ಥಾನದ ಅವಕಾಶವನ್ನು ಲೋಕಕಲ್ಯಾಣಕ್ಕೆ ಬಳಸಿಕೊಂಡು ಮತ್ತಷ್ಟು ಜನತೆಯ ವಿಶ್ವಾಸ ಗಳಿಸಬೇಕೆಂದು ನಿರಂಜನ ಪೀಠದ ರುದ್ರಮುನಿ ಸ್ವಾಮೀಜಿ ನೂತನ ಸಚಿವರಾದ ಕೆಎಂ ಶಿವಲಿಂಗೇಗೌಡರನ್ನು ಆಶೀರ್ವಾದ ಪೂರಕವಾಗಿ ಮಂಗಳವಾರ ಸಲಹೆ ನೀಡಿದರು ಅರಸೀಕೆರೆ ತಾಲೂಕಿನ ಕಣಕಟ್ಟೆ ಹೋಬಳಿ ಬರ ಪರಿಶೀಲನೆಗೆ ಆಗಮಿಸಿದ್ದ ಸಚಿವರು ಮಾರ್ಗ ಮಧ್ಯೆ ನಿರಂಜನ ಪೀಠಕ್ಕೆ ಭೇಟಿ ನೀಡಿ ಮೊದಲು ಗದ್ದುಗೆಗೆ ಪೂಜೆ ಸಲ್ಲಿಸಿ ನಂತರ ಅವರು ಶ್ರೀಗಳ ಆಶೀರ್ವಾದ ಪಡೆದರು ನೂತನ ಸಚಿವರಿಗೆ ಮತ್ತು ಅಲ್ಲಿ ಸೇರಿದ್ದ ರೈತರು ಮತ್ತು ಭಕ್ತರನ್ನು ಉದ್ದೇಶಿಸಿ ಮಾತನಾಡಿದ ಸ್ವಾಮೀಜಿ ಇಂದು ಪ್ರತಿಯೊಂದು ಕ್ಷೇತ್ರದಲ್ಲೂ ಭ್ರಷ್ಟಾಚಾರ ತಾಂಡವಾಡುತ್ತಿದೆ ಅದರಲ್ಲೂ ಶಿಕ್ಷಣ ಕ್ಷೇತ್ರದಲ್ಲಿ ಲಂಚ ಕೊಡದಿದ್ದರೆ ಕೆಲಸವೇ ಆಗುವುದಿಲ್ಲ ತಾವು ಇದನ್ನು ಗಂಭೀರವಾಗಿ ಪರಿಗಣಿಸಿ ನಿಯಂತ್ರಣಕ್ಕೆ ತರುವಲ್ಲಿ ಆರ್ಯಾನ್ಮುಖರಾಗಬೇಕು ಎಂದು ಕಿವಿಮಾತು ಹೇಳಿದರು ಕ್ಷೇತ್ರದ ಜನತೆ ಹಾಗೂ ರೈತರು ತಮ್ಮ ಮೇಲೆ ಇಟ್ಟಿರುವ ನಿರೀಕ್ಷೆಗಳನ್ನು ಹುಸಿಗೊಳಿಸದೆ ಕ್ಷೇತ್ರವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಬೇಕು
ತಾಲೂಕಿನ ಕೆರೆಗಳನ್ನು ತುಂಬಿಸಲು ನೀರಾವರಿ ಯೋಜನೆಯನ್ನು ಪೂರ್ಣಗೊಳಿಸಬೇಕು ಎಂದು ತಿಳಿಸಿದರು ಶ್ರೀಗಳ ಸಲಹೆಗೆ ಉತ್ತರಿಸಿದ ಶಿವಲಿಂಗೇಗೌಡ ಕ್ಷೇತ್ರದ ಕಣಕಟ್ಟೆ ಹೋಬಳಿಗೆ ಹೇಮಾವತಿ ನದಿ ಮೂಲದಿಂದ ಕಸಬಾ ಹೋಬಳಿಯ ಕೆರೆಗಳಿಗೆ ಎತ್ತಿನಹೊಳೆ ಯಿಂದ ಬಾಣಾವರ ಹೋಬಳಿಯ ಕೆರೆಗಳಿಗೆ ಭದ್ರ ಮೇಲ್ದಂಡೆ ಯೋಜನೆಯಿಂದ ನೀರುಹರಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು ಇಲಾಖೆಗಳ ವ್ಯಾಪ್ತಿಯಲ್ಲಿ ಮಾಡಬೇಕಾದ ಕೆಲಸವನ್ನು ಯಾವುದೇ ತಾರತಮ್ಯ ಮಾಡದೆ ನಿಷ್ಪಕ್ಷಪಾತವಾಗಿ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಅಲ್ಲದೆ ಜನತೆ ನನ್ನ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ನಾನು ಚಿರಋಣಿಯಾಗಿದ್ದೇನೆ ಎಂದು ತಿಳಿಸಿದರು ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಎಂ ಎಸ್ ವಿ ಸ್ವಾಮಿ ಗ್ರಾಪಂ ಮಾಜಿ ಅಧ್ಯಕ್ಷ ಯೋಗೇಶ್ ಕೃಷಿ ಉತ್ಪನ್ನ ಸಹಕಾರ ಸಂಘದ ಅಧ್ಯಕ್ಷ ಎಸ್ ಎಂ ಓಂಕಾರ್ ಮೂರ್ತಿ ಉಪಾಧ್ಯಕ್ಷ ರಂಗನಾಥ್ ಮುಖಂಡರಾದ ಶಿವದೇವ್ ಮಾಡಾಳು ಶಿವಲಿಂಗಪ್ಪ ಎಂಡಿ ಸೋಮಶೇಖರ್ ಕಾಂಗ್ರೆಸ್ ಮುಖಂಡರಾದ ಎಂಜಿ ಜಯಪ್ಪ ಚಂದ್ರಪ್ಪ ವಿಜಯ್ ಕುಮಾರ್ ಉಪಸ್ಥಿತರಿದ್ದರು
ಮಾಡಾಳು ನಿರಂಜನ ಪೀಠಕ್ಕೆ ಶಿವಲಿಂಗೇಗೌಡರ ಭೇಟಿ
Leave a Comment
